Film News

ಆ ಒಂದು ದೃಶ್ಯದಿಂದ ರಾತ್ರೋರಾತ್ರಿ ಸ್ಟಾರ್ ಆದ ತೃಪ್ತಿ, ವಿಜಯ್ ದೇವರಕೊಂಡ ಸಿನೆಮಾದಿಂದ ಶ್ರೀಲೀಲಾ ಔಟ್, ತೃಪ್ತಿ ದಿಮ್ರಿ ಇನ್?

ಬಾಲಿವುಡ್ ಸ್ಟಾರ್‍ ನಟ ರಣಬೀರ ಕಪೂರ್‍ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ನಲ್ಲಿ ತೆರೆಕಂಡಂತಹ ಯಾನಿಮಲ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ.  ಈ ಸಿನೆಮಾದಲ್ಲಿ ಒಂದು ದೃಶ್ಯದಲ್ಲಿ ನ್ಯೂಡ್ ಆಗಿ ನಟಿಸಿದ್ದ ತೃಪ್ತಿ ದಿಮ್ರಿ ರಾತ್ರೋರಾತ್ರಿ ಸ್ಟಾರ್‍ ಆಗಿದ್ದಾರೆ. ಜೊತೆಗೆ ನ್ಯಾಷನಲ್ ಕ್ರಷ್ ಎಂದೂ ಸಹ ಫೇಂ ಪಡೆದುಕೊಂಡಿದ್ದಾರೆ. ಇದೀಗ ಆಕೆಗೆ ಆಫರ್‍ ಗಳು ಹರಿದುಬರುತ್ತಿವೆಯಂತೆ. ವಿಜಯ್ ದೇವರಕೊಂಡ ಸಿನೆಮಾದಿಂದ ಶ್ರೀಲೀಲಾ ಔಟ್ ಆಗಿ ಆಕೆಯ ಸ್ಥಾನದಲ್ಲಿ ತೃಪ್ತಿ ದಿಮ್ರಿ ಇನ್ ಆಗಿದ್ದಾರೆ ಎಂಬ ಸುದ್ದಿಯೊಂದು ತುಂಬಾನೆ ವೈರಲ್ ಆಗುತ್ತಿದೆ.

ಯಾನಿಮಲ್ ಸಿನೆಮಾದಲ್ಲಿ ತಂದೆ ಸೆಂಟಿಮೆಂಟ್, ರಣಬೀರ್‍ ನಟನೆ, ರಶ್ಮಿಕಾ ಬೋಲ್ಡ್ ನಟನೆ ಮೊದಲಾರ್ಧದಲ್ಲಿ ಸಿನೆಮಾಗೆ ಒಳ್ಳೆಯ ರೆಸ್ಪಾನ್ಸ್ ಬರುವಂತೆ ಮಾಡಿದೆ ಎನ್ನಬಹುದು. ಈ ಸಿನೆಮಾದಲ್ಲಿ ಯಂಗ್ ಬ್ಯೂಟಿ ತೃಪ್ತಿ ದಿಮ್ರಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು. ಆಕೆಯ ಪಾತ್ರ ಕಡಿಮೆಯಾದರೂ ಸಹ ಬೋಲ್ಡ್ ದೃಶ್ಯದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ರಣಬೀರ್‍ ಜೊತೆಗೆ ಆಕೆ ಬೆಡ್ ಮೇಲೆ ನ್ಯೂಡ್ ಆಗಿ ನಟಿಸಿದ್ದರು. ಈ ಕಾರಣದಿಂದ ಆಕೆ ರಾತ್ರೋ ರಾತ್ರಿ ಫೇಮಸ್ ಆದರು. ಸ್ಟಾರ್‍ ನಟಿಯಂತೆ ಫೇಮ್ ಪಡೆದುಕೊಂಡರು. ಇದೀಗ ಆಕೆಗೆ ಅವಕಾಶಗಳೂ ಸಹ ಹರಿದುಬರುತ್ತಿವೆ ಎನ್ನಲಾಗಿದೆ. ಈ ಹಾದಿಯಲ್ಲೇ ಆಕೆ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ರವರ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ರೂಮರ್‍ ವೈರಲ್ ಆಗುತ್ತಿದೆ.

ರೌಡಿ ಹಿರೋ ವಿಜಯ್ ದೇವರಕೊಂಡ ಕೊನೆಯದಾಗಿ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆತ ಎರಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿದೇರ್ಶಕ ಪರಶುರಾಂ ಜೊತೆಗೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಕೊನೆಯ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಜೊತೆಗೆ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಪಿರಿಯಾಡಿಕ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಈಗಾಗಲೇ ಶ್ರೀಲೀಲಾ ನಟಿಯಾಗಿದ್ದಾರೆ. ಆದರೆ ಈ ಶೂಟಿಂಗ್ ತುಂಬಾನೆ ಮಂದಗತಿಯಲ್ಲಿ ಸಾಗುತ್ತಿದೆ. ನಟ-ನಟಿಯರ ಡೇಟ್ ಗಳು ಹೊಂದಾಣಿಕೆಯಾಗದ ಕಾರಣ ಶೂಟಿಂಗ್ ತಡವಾಗುತ್ತಿದೆ ಎನ್ನಲಾಗಿದೆ. ನಟಿ ಶ್ರೀಲೀಲಾ ಗೆ ಬೇರೆ ಸಿನೆಮಾಗಳ ಶೂಟಿಂಗ್ ಗಳಿಂದ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಆಕೆ ಈ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಶ್ರೀಲೀಲಾ ಎಂ.ಬಿ.ಬಿ..ಎಸ್ ಓದುತ್ತಿದ್ದು. ಕೊನೆಯ ಪರೀಕ್ಷೆಯ ಕಾರಣದಿಂದ ಆಕೆ ಸಿನೆಮಾಗಳಿಗೆ ಬ್ರೇಕ್ ನೀಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಈ ಗೋಲ್ಡನ್ ಚಾನ್ಸ್ ಅನ್ನು ಬಾಲಿವುಡ್ ಯಂಗ್ ಬ್ಯೂಟಿ ತೃಪ್ತಿ ದಿಮ್ರಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾನಿಮಲ್ ಸಿನೆಮಾದ ಮೂಲಕ ತೃಪ್ತಿ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಫೇಂ ಪಡೆದುಕೊಂಡಿದ್ದು, ಸದ್ಯ ಸ್ಟಾರ್‍ ನಟಿಯರಿಗೆ ತೃಪ್ತಿ ಸ್ಟ್ರಾಂಗ್ ಆಗಿಯೇ ಪೈಪೋಟಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top