ಲಿಂಗ ಪರಿವರ್ತನೆಗೊಂಡ ವ್ಯಕ್ತಿಗೆ ಗಂಡು ಮಗು ಜನನ, ಮಹಿಳೆಯಿಂದ ಪುರುಷನಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮುಂಬೈ ಪೊಲೀಸ್….!

Follow Us :

ಹುಟ್ಟಿನಿಂದ ಮಹಿಳೆಯಾಗಿದ್ದ ಆಕೆಯ ದೇಹದಲ್ಲಿ ಪುರುಷನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಸಂಪೂರ್ಣವಾಗಿ ಗಂಡಾಗಿ ಬದಲಾಗಿದ್ದರು. ಗಂಡಾಗಿ ಬದಲಾದ ಬಳಿಕ ಮದುವೆ ಸಹ ಆಗಿದ್ದು, ಜ.15 ರಂದು ಗಂಡು ಮಗುವಿನ ತಂದೆ ಸಹ ಆಗಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಲಲಿತ್ ಸಾಳ್ವೆ (36 ವರ್ಷ)ಎಂಬ ಪೊಲೀಸ್ ಪೇದೆಯೇ ಲಿಂಗ ಪರಿವರ್ತನೆಯಾದ ವ್ಯಕ್ತಿಯಾಗಿದ್ದಾರೆ.

ಪೊಲೀಸ ಪೇದೆ ಲಲಿತ್ ಸಾಳ್ವೆ (ಲಲಿತಾ ಮೊದಲಿನ ಹೆಸರು) 1988 ಜೂನ್ ಮಾಹೆಯಲ್ಲಿ ಜನಿಸಿದ್ದರು. ಲಲಿತ್ ಸಾಳ್ವೆ 2010 ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ನೇಮಕಗೊಂಡರು. ಹುಟ್ಟಿನಿಂದ ಮಹಿಳೆಯಾಗಿ ಬೆಳೆ ಲಲಿತ ಸಾಳ್ವೆ, 2013 ರಲ್ಲಿ ತಮ್ಮ ದೇಹದಲ್ಲಿ ಪುರುಷರ ಭಾವನೆಗಳು ಕಂಡಿದೆ. ಬಳಿಕ 2017 ರಲ್ಲಿ ಕ್ಯಾರಿಯೋಟೈಪಿಂಗ್ ಎಂಬ ಜಿನೆಟಿಕ್ ಪರೀಕ್ಷೆಗೆ ಒಳಗಾದರು. ಬಳಿಕ ಆತನ ಲಿಂಗವನ್ನು ಪುರುಷ ಎಂದು ತಿಳಿದುಬಂತು. ಬಳಿಕ ಹೆಣ್ಣಿನಿಂದ ಪುರುಷನಾಗಲು ತುಂಬಾನೆ ಹೋರಾಟ ಮಾಡಲಾಗಿತ್ತು, ಈ ಸಮಯದಲ್ಲಿ ನನಗೆ ಅನೇಕರು ಬೆಂಬಲ ನೀಡಿದ್ದರು. ನನ್ನ ಹೆಂಡತಿ ಸೀಮಾ ಮಗುವನ್ನು ಪಡೆಯಲು ಆಸೆ ಪಟ್ಟರು. ನಾನು ಈಗ ತಂದೆಯಾಗಿದ್ದೇನೆ. ಇದರಿಂದ ನನ್ನ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ ಎಂದು ಲಲಿತ್ ಸಂತಸ ಹಂಚಿಕೊಂಡಿದ್ದಾರೆ.

ಇನ್ನೂ ಲಲಿತ್ ಸಾಳ್ವೆ ಕಳೆದ ನವೆಂಬರ್‍ ಮಾಹೆಯಲ್ಲಿ ಲಿಂಗ ಮರುಹೊಂದಾಣಿಕೆ ಆಪರೇಷನ್ ಗಾಗಿ ಒಂದು ತಿಂಗಳು ರಜೆ ಕೋರಿದ್ದರು. ಅದಕ್ಕಾಗಿ ಆತ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಅವರಿಗೆ ಅವಕಾಶವನ್ನು ಸಹ ಬಾಂಬೆ ಹೈಕೋರ್ಟ್ ನೀಡಿತ್ತು. ಬಳಿಕ 2018 ಹಾಗೂ 2020 ರ ಅವಧಿಯಲ್ಲಿ ಲಲಿತ್ ಮುಂಬೈನಲ್ಲಿರುವ ಪೋರ್ಟ್ ಪ್ರದೇಶದ ಸರ್ಕಾರಿ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮೂರು ಆಪರೇಷನ್ ಮಾಡಿಸಿಕೊಂಡಿದ್ದರು. ಬಳಿಕ ಆತ ಸಂಪೂರ್ಣವಾಗಿ ಪುರುಷನಾಗಿ ಬದಲಾಗಿದ್ದಾರೆ.