News

ಮತ್ತೊಂದು ಮದುವೆಯಾದ ಟೆನ್ನಿಸ್ ತಾರೆ ಸಾನಿಯಾ ಪತಿ, ವಿಚ್ಚೇದನದ ವದಂತಿ ಬೆನ್ನಲ್ಲೆ ಮದುವೆಯಾದ ಶೋಯೆಬ್ ಮಲ್ಲಿಕ್…..!

ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಿನೆಮಾ ಸೆಲೆಬ್ರೆಟಿಗಳಂತೆ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ರನ್ನು ಮದುವೆಯಾಗಿದ್ದರು. ಈ ಹಿಂದೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೇಳಿಬಂದಿತ್ತು. ಈ ನಡುವೆ ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಪಾಕ್ ನಟಿ ಸನಾ ಜಾವೇರದ್ ಎಂಬಾಕೆಯನ್ನು ಮದುವೆಯಾಗಿದ್ದಾರೆ. ಈ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸುಮಾರು ದಿನಗಳ ಹಿಂದೆ ಸಾನಿಯಾ ಮಿರ್ಜಾ ಹಾಗೂ ಶೋಯಿನ್ ಮಲ್ಲಿಕ್ ಬೇರೆಯಾಗಲಿದ್ದಾರೆ. ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿ ಸಂಚಲನ ಸೃಷ್ಟಿಸಿತ್ತು. ಈ ಸುದ್ದಿಯ ಬೆನ್ನಲ್ಲೆ ಸಾನಿಯಾ ಮಿರ್ಜಾರವರ ನಡೆ ಸಹ ಕೆಲವೊಂದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಕಳೆದ 2010 ರಲ್ಲಿ ಸಾನಿಯಾ ಹಾಗೂ ಶೋಯೆಬ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಸಹ ಭಾರಿ ವಿವಾದಕ್ಕೆ ಸಹ ಕಾರಣವಾಗಿತ್ತು. ಬಳಿಕ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಅವರಿಬ್ಬರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಸಹ ಜೋರಾಗಿತ್ತು. ಇದೀಗ ಶೋಯೆಬ್ ಪಾಕ್ ನಟಿ ಸನಾ ಜಾವೇದ್ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಈ ಪೊಟೋಗಳನ್ನು ಶೋಯೆಬ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೇದ್ ಕಳೆದ 2020 ರಲ್ಲಿ ಉಮೈರ್‍ ಜಸ್ವಾಲ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಈ ದಂಪತಿ ವಿಚ್ಚೇದನ ಪಡೆದುಕೊಂಡರು. ಪಾಕ್ ಕ್ರಿಕೆಟಿಗ್ ಶೋಯೆಬ್ ಸಹ ಸಾನಿಯಾ ಮಿರ್ಜಾ ರವರನ್ನು ಬಿಟ್ಟು ಸನಾ ಜಾವೇದ್ ರನ್ನು ಮೂರನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಬಗ್ಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಇಮ್ರಾನ್ ಮಿರ್ಜಾ ಪ್ರತಿಕ್ರಿಯೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಲಾಖ್ ಹಾಗೂ ಖುಲಾ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಮಹಿಳೆ ತನ್ನ ಗಂಡನಿಂದ ದೂರವಾಗುವ ನಿರ್ಧಾರಕ್ಕೆ ಖುಲಾ ಎಂದೂ, ಈ ನಿರ್ಧಾರ ಪುರುಷನ ಕಡೆಯಿಂದ ಬಂದರೇ ತಲಾಖ್ ಎಂದು ಕರೆಯುತ್ತಾರೆ. ಶೋಯೆಬ್ ನಿಂದ ದೂರವಾಗುವ ನಿರ್ಧಾರವನ್ನು ಸಾನಿಯಾ ಮಿರ್ಜಾರವರೇ ತೆಗೆದುಕೊಂಡಿದ್ದಾರೆ ಎಂದು ಆಕೆಯ ತಂದೆಯ ಹೇಳಿಕೆಗಳಿಂದ ಅರ್ಥಮಾಡಿಕೊಳ್ಳಬಹುದಾಗಿದೆ.

Most Popular

To Top