Film News

ಸಮಂತಾ ಕುರಿತು ಕೀರ್ತಿ ಸುರೇಶ್ ಅಭಿಪ್ರಾಯ ಅದೇನಾ? ಸ್ಯಾಮ್ ಬಗ್ಗೆ ಕೀರ್ತಿ ಹೇಳಿದ್ದು ಏನು ಗೊತ್ತಾ?

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಭಾರಿ ಪ್ರಾಜೆಕ್ಟ್ ಗಳ ಮೂಲಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಸಮಂತಾ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದರು. ಈ ವಿಚಾರ ಹೊರಬಂದ ಬಳಿಕ ಆಕೆಗೆ ಅಭಿಮಾನಿಗಳು ಮಾತ್ರವಲ್ಲದೇ ಸಿನೆಮಾ ಸ್ಟಾರ್‍ ಗಳೂ ಸಹ ಧೈರ್ಯ ತುಂಬುವ ಕೆಲಸ ಮಾಡಿದರು. ಮಯೋಸೈಟಿಸ್ ನಿಂದ ಹೊರಬಂದ ಸಮಂತಾ ಇದೀಗ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಇನ್ನೂ ಸೌತ್ ಸಿನಿರಂಗದ ಸ್ಟಾರ್‍ ನಟಿ ಕೀರ್ತಿ ಸುರೇಶ್ ಸಹ ದಸರಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇತ್ತೀಚಿಗಷ್ಟೆ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಕೀರ್ತಿ ಸುರೇಶ್ ಉತ್ತರಿಸಿದ್ದಾರೆ. ಇದೇ ವೇಳೆ ಕೀರ್ತಿ ಸುರೇಶ್ ರವರಿಗೆ ಸಮಂತಾ ಬಗ್ಗೆ ಪ್ರಶ್ನೆಯೊಂದು ಕೇಳಿಬಂದಿದೆ. ಸಮಂತಾ ಬಗ್ಗೆ ಹೇಳಿ ಎಂದು ಕೇಳಿದ್ದಾರೆ. ಅದಕ್ಕೆ ಕೀರ್ತಿ ಸುರೇಶ್ ಸಹ ಇಂಟ್ರಸ್ಟಿಂಗ್ ಉತ್ತರ ನೀಡಿದ್ದಾರೆ. ಸಮಂತಾ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಆಕೆಯ ಧೈರ್ಯ ತುಂಬಾ ಜಾಸ್ತಿ, ಒಟ್ಟಾರೆಯಾಗಿ ಹೇಳಬೇಕಾದರೇ ಸಮಂತಾ ಅನ್ ಅಸ್ಟಾಪಬಲ್ ಎಂದು ಕೀರ್ತಿ ಸುರೇಶ್ ಸಮಂತಾ ರವರನ್ನು ಹಾಡಿ ಹೊಗಳಿದ್ದಾರೆ. ಇನ್ನೂ ಕೀರ್ತಿ ಸುರೇಶ್ ನೀಡಿದ ಉತ್ತರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಸಮಂತಾ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನೂ ದಸರಾ ಸಿನೆಮಾದ ಬಗ್ಗೆ ಸಹ ಕೆಲವೊಂದು ಪ್ರಶ್ನೆಗಳು ಕೇಳಿಬಂದಿವೆ. ದಸರಾ ಸಿನೆಮಾದ ನಿರ್ದೇಶಕ ಶ್ರೀಕಾಂತ್ ಓದೆಲ, ಕೀರ್ತಿ ಸುರೇಶ್ ರವರನ್ನು ನೀನು ಎಂದು ಹೇಳುವುದು ಸಹ ಹಾಟ್ ಟಾಪಿಕ್ ಆಗಿತ್ತು. ಈ ಬಗ್ಗೆ ಕೀರ್ತಿ ಸುರೇಶ್ ಸ್ಪಂಧಿಸಿ ನಮಗೆ ಇಷ್ಟವಾದ ವ್ಯಕ್ತಿಗಳನ್ನು ನಾವು ನೀನು ಎಂದು ಕರೆಯುತ್ತೇವೆ. ನೀನು ಎಂದ ಮಾತ್ರಕ್ಕೆ ಅದು ಅಗೌರವ ಇದೆ ಎಂದು ಅಲ್ಲ ಎಂದು ಹೇಳಿದ್ದಾರೆ. ಸದ್ಯ ಕೀರ್ತಿ ಸುರೇಶ್ ದಸರಾ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡು ಪುಲ್ ಹ್ಯಾಪಿ ಆಗಿದ್ದಾರೆ. ಇನ್ನೂ ಇತ್ತೀಚಿಗೆ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಸಹ ಅನೇಕ ಸುದ್ದಿಗಳು ಕೇಳಿಬರುತ್ತಿವೆ. ಶೀಘ್ರದಲ್ಲೇ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ.

ಇನ್ನೂ ಸಮಂತಾ ಸಹ ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನೆಮಾದಲ್ಲಿ ಸಮಂತಾ ಅಭಿನಯಕ್ಕೆ ಪುಲ್ ಮಾರ್ಕ್ಸ್ ಬಿದ್ದಿದೆ. ಆದರೆ ಕಥೆ ಮಾತ್ರ ತುಂಬಾ ಬೋರಿಂಗ್ ಆಗಿ, ಸೀರಿಯಲ್ ನಂತಿದೆ ಎಂಬ ವಿಮರ್ಶೆಗಳು ಸಹ ಕೇಳಿಬರುತ್ತಿವೆ. ಈ ಸಿನೆಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ಯವಾಗುತ್ತಿದೆ. ಇನ್ನೂ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ಹಾಗೂ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ನಟಿಸುತ್ತಿದ್ದಾರೆ.

Most Popular

To Top