Film News

ಜರ್ಮನ್ ಮೂಲದ ವೈದ್ಯರಿಗೆ ಧನ್ಯವಾದ ತಿಳಿಸಿದ ಮಹೇಶ್ ಬಾಬು, ಅವರಿಗೆ ಏನಾಯ್ತು ಎಂದು ಕಂಗಾಲದ ಅಭಿಮಾನಿಗಳು….!

ತೆಲುಗು ಸಿನಿರಂಗದಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ಮಹೇಶ್ ಬಾಬು ಟಾಪ್ ಸ್ಥಾನದಲ್ಲಿರುತ್ತಾರೆ. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಜೊತೆ SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಿಂದ ಬ್ರೇಕ್ ಪಡೆದುಕೊಂಡು ಜರ್ಮನಿ ಟೂರ್‍ ನಲ್ಲಿದ್ದಾರೆ. ಕಳೆದ ಒಂದು ವಾರದಿಂದ ಜರ್ಮನಿಯಲ್ಲೇ ಇದ್ದಾರೆ. ಆತನೊಂದಿಗೆ ನಮ್ರತಾ, ಸಿತಾರಾ ಹಾಗೂ ಗೌತಮ್ ಸಹ ಟೂರ್‍ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಅವರು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಮಹೇಶ್ ಬಾಬು ರವರು ಅಷ್ಟೊಂದು ಆಕ್ಟೀವ್ ಆಗಿರುವುದಿಲ್ಲ. ಅವರು ಸೋಷಿಯಲ್ ಮಿಡಿಐಆದಲ್ಲಿ ಪೋಸ್ಟ್ ಮಾಡುವುದೇ ತುಂಬಾ ವಿರಳ. ತನಗೆ ಸಂಬಂಧಿಸಿದ ವಿಚಾರಗಳ ಜೊತೆಗೆ ತಮ್ಮ ಫ್ಯಾಮಿಲಿ ವಿಚಾರಗಳ ಬಗ್ಗೆ ನಮ್ರತಾ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಮಹೇಶ್ ಬಾಬು ಹಂಚಿಕೊಂಡ ಪೋಸ್ಟ್ ಕಾರಣದಿಂದ ಅಭಿಮಾನಿಗಳು ಇಂಟ್ರಸ್ಟಿಂಗ್ ಆಗಿ ಓದುತ್ತಿದ್ದಾರೆ. ಜರ್ಮನ್ ಮೂಲದ ವೈದ್ಯ ಡಾಕ್ಟರ್‍ ಹ್ಯಾರಿ ಕೊನಿಗ್ ಜೊತೆಗೆ ತೆಗೆದುಕೊಂಡ ಪೊಟೋ ಒಂದನ್ನು ಮಹೇಶ್ ಬಾಬು ಹಂಚಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಈ ಪೊಟೋ ಶೇರ್‍ ಮಾಡಿದ್ದಾರೆ. ಪೊಟೋಗೆ ಥ್ಯಾಂಕ್ಯೂ ಡಾಕ್ಟರ್‍ ಹ್ಯಾರಿ ಕೋನಿಗ್ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಪೋಸ್ಟ್ ಕಂಡ ಅಭಿಮಾನಿಗಳು ಶಾಕ್ ಆಗಿ, ಅವರಿಗೆ ಏನಾಗಿದೆ ಎಂದು ಕಂಗಾಲಾಗಿದ್ದಾರೆ.

ಇನ್ನೂ ಈ ಪೋಸ್ಟ್ ಹಂಚಿಕೊಂಡ ಕಡಿಮೆ ಸಮಯದಲ್ಲೇ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇನ್ನೂ ಮಹೇಶ್ ಬಾಬು ರವರಿಗೆ ಏನಾಗಿದೆ ಎಂಬ ಅನುಮಾನ ಮೂಡಿದೆ. ಮಹೇಶ್ ಬಾಬು ರವರಿಗೆ ಏನಾದರೂ ಆರೋಗ್ಯ ಸಮಸ್ಯೆ ಆಗಿದೆಯಾ, ಹ್ಯಾರಿ ಕೋನಿಗ್ ಅವರಿಗೆ ಟ್ರೀಟ್ ಮೆಂಟ್ ನೀಡಿದ್ದಾರಾ, ಈ ಕಾರಣದಿಂದಲೇ ಮಹೇಶ್ ಬಾಬು ಆ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆಯೇ ಎಂಬೆಲ್ಲಾ ಅನುಮಾನಗಳು ಅಭಿಮಾನಿಗಳಲ್ಲಿ ಎದುರಾಗಿದೆ. ಇನ್ನೂ ಮಹೇಶ್ ಬಾಬು ರವರಿಗೆ ಏನಾಗಿದೆ ಎಂದು ಇಂಟರ್‍ ನೆಟ್ ನಲ್ಲಿ ಹುಡುಕಾಟಗಳೂ ಸಹ ಶುರುವಾಗಿದೆ. ಈ ಬಗ್ಗೆ ಮಹೇಶ್ ಬಾಬು ರವರೇ ಸ್ಪಷ್ಟನೆ ನೀಡಬೇಕಿದೆ.

ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಮಹೇಶ್ ಬಾಬು SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಬಳಿಕ ಮಹೇಶ್ ಬಾಬು ಸ್ಟಾರ್‍ ನಿರ್ದೇಶಕ ರಾಜಮೌಳಿ ಜೊತೆಗೆ ಪ್ಯಾನ್ ವರ್ಲ್ಡ್ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಜಾನ್ವಿ ಕಪೂರ್‍ ರವರನ್ನು ಮಹೇಶ್ ಬಾಬು ರವರಿಗೆ ಜೋಡಿಯಾಗಿ ಕರೆತರಲು ಪ್ಲಾನ್ ಸಹ ಮಾಡಿದ್ದಾರಂತೆ.

Trending

To Top