Film News

ಆ ಕಾರಣದಿಂದಲೇ ನನಗೆ ಯಾರೂ ಪ್ರಪೋಸ್ ಮಾಡುತ್ತಿಲ್ಲ ಎಂದ ಅನನ್ಯ ನಾಗಳ್ಳ, ಶಾಕಿಂಗ್ ಕಾಮೆಂಟ್ಸ್ ಮಾಡಿದ ನೆಟ್ಟಿಗರು….!

ಸಿನಿರಂಗದಲ್ಲಿ ಕೆಲವು ನಟಿಯರು ನಟಿಸಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಒಳ್ಳೆಯ ಕ್ರೇಜ್ ಪಡೆದುಕೊಂಡಿರುತ್ತಾರೆ. ತೆಲುಗು ಮೂಲದ ನಟಿ ಅನನ್ಯಾ ನಾಗಳ್ಳ ಸಹ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ಒಳ್ಳೆಯ ಖ್ಯಾತಿ ಪಡೆದುಕೊಂಡಿದ್ದಾರೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ಮಲ್ಲೇಶಂ, ವಕೀಲ್ ಸಾಭ್ ಮೊದಲಾದ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡ ಅನನ್ಯಾ ಇತ್ತೀಚಿಗೆ ಶಾಕುಂತಲಂ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಆಕೆ ತನಗೆ ಯಾರೂ ಪ್ರಪೋಸ್ ಮಾಡುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದು, ಅಭಿಮಾನಿಗಳು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಯಂಗ್ ಬ್ಯೂಟಿ ಅನನ್ಯಾ ನಾಗಳ್ಳ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಹಾಟ್ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಆಗಾಗ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಾ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಲೇಟೆಸ್ಟ್ ಚಿಟ್ ಚಾಟ್ ನಲ್ಲಿ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳನ್ನು ಉತ್ತರ ನೀಡಿದ್ದಾರೆ. ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೈವ್ ನಲ್ಲಿ ಅಭಿಮಾನಿಯೊಬ್ಬ ನಿಮ್ಮ ಬಾಯ್ ಫ್ರೆಂಡ್, ಆತನ ಇನ್ಸ್ಟಾ ಐಡಿ ಏನು ಎಂದು ಕೇಳಿದ್ದಾರೆ. ಅದಕ್ಕೆ ಅನನ್ಯಾ ಶಾಕಿಂಗ್ ಉತ್ತರ ನೀಡಿದ್ದಾರೆ.

ಇನ್ನೂ ಅಭಿಮಾನಿಯ ವಿಚಿತ್ರ ಪ್ರಶ್ನೆಗೆ ಅನನ್ಯಾ ಸಹ ಉತ್ತರ ನೀಡಿದ್ದಾರೆ. ಬಾಯ್ ಫ್ರೆಂಡ್ ನನಗೆ ಯಾರೂ ಇಲ್ಲ, ಅಷ್ಟು ಸೀನ್ ಸಹ ಇಲ್ಲ, ಎಲ್ಲರೂ ನನಗೆ ಬಾಯ್ ಫ್ರೆಂಡ್ ಇದ್ದಾರೆ ಎಂದು ಅಂದುಕೊಂಡಿದ್ದಾರೆ. ಆದ್ದರಿಂದಲೇ ನನ್ನನ್ನು ಯಾರೂ ಟ್ರೈ ಮಾಡುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ಈ ಕಾರಣದಿಂದಲೇ ನನಗೆ ಯಾರೂ ಪ್ರಪೋಜ್ ಮಾಡುತ್ತಿಲ್ಲ ಎಂದು ವಿಭಿನ್ನವಾದ ಉತ್ತರ ನೀಡಿದ್ದಾರೆ.  ಇನ್ನೂ ಆಕೆಯ ಈ ಉತ್ತರ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಆಕೆಗೆ ಯಾರೂ ಪ್ರಪೋಜ್ ಸಹ ಮಾಡುತ್ತಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಕೆಗೆ ಪ್ರಪೋಸ್ ಮಾಡುತ್ತಿದ್ದಾರೆ. ನಾನು ರೆಡಿ ನನ್ನನ್ನು ಪ್ರೀತಿಸು, ನನ್ನನ್ನು ಪ್ರೀತಿಸು ಎಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ಅನನ್ಯಾ ನಾಗಳ್ಳ ಸಿನೆಮಾಗಳಲ್ಲಿ ಸ್ಟಾರ್‍ ಆಗಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

Most Popular

To Top