Film News

ಸೂಪರ್ ಹಿಟ್ ಸಿನೆಮಾ ಗೀತಾಗೋವಿಂದಂ ಸೀಕ್ವೆಲ್ ಬರಲಿದೆಯಂತೆ, ಮತ್ತೊಮ್ಮೆ ರಶ್ಮಿಕಾ-ವಿಜಯ್ ದೇವರಕೊಂಡ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?

ಸಿನಿರಂಗದಲ್ಲಿ ಕೆಲವು ಸಿನೆಮಾಗಳು ಸಣ್ಣ ಸಿನೆಮಾಗಳಾದರೂ ಸಹ ಚರಿತ್ರೆ ಸೃಷ್ಟಿಸುತ್ತಿರುತ್ತವೆ. ಅನೇಕ ರೆಕಾರ್ಡ್‌ಗಳನ್ನು ಸೃಷ್ಟಿ ಮಾಡುತ್ತವೆ. ಈ ಹಾದಿಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ಗೀತಗೋವಿಂದಂ ಸಿನೆಮಾ ಸಹ ಭಾರಿ ಸಕ್ಸಸ್ ಕಂಡುಕೊಂಡ ಸಿನೆಮಾ ಆಗಿದೆ. ನಟ ವಿಜಯ್ ದೇವರಕೊಂಡ ಬಿಗ್ ಬ್ರೇಕ್ ನೀಡಿದ ಸಿನೆಮಾ ಇದಾಗಿದ್ದು, ಈ ಸಿನೆಮಾಗೆ ಸೀಕ್ವೆಲ್ ಪ್ಲಾನ್ ಮಾಡುತ್ತಿದ್ದಾರಂತೆ ಚಿತ್ರತಂಡ. ಇನ್ನೂ ರಶ್ಮಿಕಾ ವಿಜಯ್ ಕೆಮಿಸ್ಟ್ರಿ ಮತ್ತೆ ವರ್ಕೌಟ್ ಆಗುತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾವುದೇ ಆಡಂಬರವಿಲ್ಲದೆ, ಯಾವುದೇ ನಿರೀಕ್ಷೆಯಿಲ್ಲದೇ ಬಂದಂತಹ ಸಿನೆಮಾ ಗೀತಾಗೋವಿಂದಂ. ಈ ಸಿನೆಮಾ ನಿರ್ಮಾಪಕರಿಗೆ ಒಳ್ಳೆಯ ಲಾಭವನ್ನು ತಂದುಕೊಟ್ಟಿತ್ತು. ಟಾಲಿವುಡ್ ಸಿನೆಮಾಗಳಲ್ಲಿ ಒಳ್ಳೆಯ ಸಕ್ಸಸ್ ರೆಕಾರ್ಡ್ ಪಡೆದುಕೊಂಡ ಸಿನೆಮಾ ಇದಾಗಿದೆ ಎನ್ನಬಹುದಾಗಿದೆ. ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಮಾಸ್ ಹಿರೋ ಆದ ವಿಜಯ್ ದೇವರಕೊಂಡಗೆ ಗೀತಾ ಗೋವಿಂದಂ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಜೊತೆಗೆ ಈ ಸಿನೆಮಾದಲ್ಲಿ ರಶ್ಮಿಕಾ ಹಾಗೂ ವಿಜಯ್ ನಡುವೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಸಹ ಆಗಿತ್ತು. ಈ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಂದಿಗೂ ಸಹ ಅವರ ನಡುವೆ ಲವ್ ಟ್ಯ್ರಾಕ್ ನಡೆಯುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಈ ಸಿನೆಮಾದ ಸೀಕ್ವೆಲ್ ಹೊರತರಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಗೀತಾಗೋವಿಂದಂ ಗೆ ಸೀಕ್ವೆಲ್ ಹೊರತರಲು ಖ್ಯಾತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ ಬ್ಯಾನರ್ಸ್‌ ಪ್ಲಾನ್ ಮಾಡುತ್ತಿದೆಯಂತೆ. ಇನ್ನೂ ಈ ಸಿನೆಮಾದ ನಿರ್ದೇಶಕ ಪರಶುರಾಮ್ ರವರಿಗೂ ಸಹ ಗೀತಾ ಆರ್ಟ್ ಕರೆ ಮಾಡಿದೆ ಎನ್ನಲಾಗುತ್ತಿದೆ. ಗೀತಾ ಗೋವಿಂದಂ ಸಿನೆಮಾಗೆ ಸೀಕ್ವೆಲ್ ಗೆ ಕಥೆ ಸಿದ್ದ ಮಾಡಲು ತಿಳಿಸಿದೆ ಎನ್ನಲಾಗುತ್ತಿದೆ.  ಈಗಾಗಲೇ ಸಿನಿರಂಗದಲ್ಲಿ ಸೀಕ್ವೆಲ್ ಗಳ ಟ್ರೆಂಡ್ ನಡೆಯುತ್ತಿದ್ದು, ಇದು ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಈ ಹಾದಿಯಲ್ಲೇ ಗೀತಾ ಆರ್ಟ್ಸ್ ಸೀಕ್ವೆಲ್ ಗೆ ಪ್ಲಾನ್ ಮಾಡುತ್ತಿದೆಯಂತೆ. ಇನ್ನೂ ಈ ಸೀಕ್ವೆಲ್ ನಲ್ಲಿ ವಿಜಯ್ ಹಾಗೂ ರಶ್ಮಿಕಾ ನಟಿಸುತ್ತಾರಾ ಅಥವಾ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬುದು ಇನ್ನೂ ನಿಗೂಡವಾಗಿದೆ. ಒಂದು ವೇಳೆ ರಶ್ಮಿಕಾ ಹಾಗೂ ವಿಜಯ್ ರವರೇ ನಟಿಸಿದರೇ ಮತ್ತೊಮ್ಮೆ ಅವರಿಬ್ಬರ ಕುರಿತು ಮತಷ್ಟು ರೂಮರ್‍ ಗಳು ಜೋರಾಗಲಿದೆ ಎನ್ನಬಹುದಾಗಿದೆ.

ಇನ್ನೂ ಗೀತಾಗೋವಿಂದ ಸಿನೆಮಾ ಬರೊಬ್ಬರಿ 75 ಕೋಟಿ ವರೆಗೂ ಷೇರ್‍ ಗಳಿಸಿದೆ. ಇನ್ನೂ ಈ ಸಿನೆಮಾದ ಬಳಿಕ ರಶ್ಮಿಕಾ ಹಾಗೂ ವಿಜಯ್ ನಡುವೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಪ್ರಾರಂಭವಾಗಿ ಇಂದಿಗೂ ಸಹ ಈ ಸುದ್ದಿ ಹರಿದಾಡುತ್ತಲೇ ಇದೆ. ಸದ್ಯ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ. ನಟಿ ರಶ್ಮಿಕಾ ಸಹ ಪುಷ್ಪಾ ಸೀಕ್ವೆಲ್ ನಲ್ಲಿ ಹಾಗೂ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಗೀತಾಗೋವಿಂದಂ ಸಿನೆಮಾ ಸೀಕ್ವೆಲ್ ಬರುತ್ತಾ ಇಲ್ಲವಾ ಎಂಬುದು ಶೀಘ್ರದಲ್ಲೇ ಸ್ಪಷ್ಟನೆ ಸಿಗಬಹುದು ಎನ್ನಲಾಗಿದೆ.

Most Popular

To Top