Film News

ಮಿಸ್ ಯು ಎಂದು ಪತಿಯೊಂದಿಗಿನ ಪೊಟೋ ಹಂಚಿಕೊಂಡ ಬನ್ನಿ ವೈಫ್ ಸ್ನೇಹಾ ರೆಡ್ಡಿ, ವೈರಲ್ ಆದ ಪೊಟೋ…!

ತೆಲುಗು ಸಿನಿರಂಗದ ಕ್ಯೂಟ್ ಅಂಡ್ ಬೆಸ್ಟ್ ಕಪುಲ್ಸ್ ನಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಜೋಡಿ ಒಂದಾಗಿದೆ. ಅಲ್ಲು ಅರ್ಜುನ್ ಹಾಗೂ ಸ್ನೇಹಾ ರವರ ಮದುವೆ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿದೆ. ಇನ್ನೂ ಅವರ ಪ್ರೀತಿಗೆ ಸಂಕೇತವಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ಮದುವೆ ಬಳಿಕವೂ ಸಹ ಪತ್ನಿಯ ಸಹಕಾರದೊಂದಿಗೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಇನ್ನೂ ಪುಷ್ಪಾ ಸಿನೆಮಾದ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಸ್ನೇಹಾರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ಫ್ಯಾಷನ್ ಐಕಾನ್ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ.

ನಟ ಅಲ್ಲು ಅರ್ಜುನ್ ಸಹ ಸಿನೆಮಾಗಳ ಜೊತೆಗೆ ತನ್ನ ಕುಟುಂಬಕ್ಕೂ ಸಹ ತುಂಬಾನೆ ಪ್ರಾಶಸ್ತ್ಯ ಕೊಡುತ್ತಿರುತ್ತಾರೆ. ತನ್ನ ಕುಟುಂಬದೊಂದಿಗೆ ಬಿಡುವು ಸಿಕ್ಕಾಗಲೆಲ್ಲಾ ವಿದೇಶಗಳಿಗೆ ಹಾರುತ್ತಿರುತ್ತಾರೆ. ಅನೇಕ ಕಾರ್ಯಕ್ರಮಗಳಲ್ಲಿ ಪತ್ನಿಯೊಂದಿಗೆ ಭಾಗಿಯಾಗಿ ಆಕೆಯನ್ನು ಎಲ್ಲರಿಗೂ ಪರಿಚಯ ಸಹ ಮಾಡಿದ್ದಾರೆ. ಇನ್ನೂ ನಟ ಅಲ್ಲು ಅರ್ಜುನ್ ರಂತೆ ಆತನ ಪತ್ನಿ ಸ್ನೇಹಾ ರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಂತೆ ಕ್ರೇಜ್ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ತನ್ನ ಪತಿ, ಮಕ್ಕಳ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ಜೊತೆಗೆ ಆಕೆ ಸ್ಟಾರ್‍ ನಟಿಯರಂತೆ ಕ್ರೇಜ್ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾ ಬಳಸಿಕೊಂಡೇ ಆಕೆ ಸ್ಟಾರ್‍ ನಟಿಯರಂತೆ ಇಮೇಜ್ ಗಿಟ್ಟಿಸಿಕೊಂಡಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸ್ನೇಹಾರೆಡ್ಡಿ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಸ್ನೇಹಾ ತನ್ನ ಪತಿ ಅಲ್ಲು ಅರ್ಜುನ್ ರವರನ್ನು ಹಗ್ ಮಾಡುಕೊಂಡಿರುವ ಪೊಟೋ ಶೇರ್‍ ಮಾಡಿ, ಆತನನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಮಿಸ್ ಯು ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಆಕೆಯ ಈ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಪೊಟೋ ನೋಡಿದ ಅಭಿಮಾನಿಗಳು ಬನ್ನಿ ಅವರು ಎಲ್ಲಿ ಹೋಗುತ್ತಿದ್ದಾರೆ, ಏಕೆ ಮಿಸ್ ಆಗುತ್ತಿದ್ದಿರಾ ಎಂದು ಪ್ರಶ್ನೆಗಳನ್ನು ಸಹ ಮಾಡುತ್ತಿದ್ದಾರೆ. ಜೊತೆಗೆ ಅನೇಕರು ಪುಷ್ಪಾ ಸಿನೆಮಾ ಶೂಟಿಂಗ್ ಗಾಗಿ ಅಲ್ಲು ಅರ್ಜುನ್ ದೂರ ಹೋಗುತ್ತಿದ್ದಾರೆ. ಈ ಕಾರಣದಿಂದಲೇ ಆಕೆ ಈ ಪೋಸ್ಟ್ ಮಾಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಅದು ಏನೇ ಕಾರಣವಿರಲಿ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸ್ನೇಹಾ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಆಕೆ ಸಿನೆಮಾಗಳಲ್ಲಿ ನಟಿಸಲು ಸಿದ್ದರಾಗಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಮಲಯಾಳಂ ಸಿನೆಮಾದಲ್ಲಿ ಅಲ್ಲು ಸ್ನೇಹಾ ನಟಿಸಲಿದ್ದಾರೆ ಎಂಬ ಮಾತುಗಳು ಸುಮಾರು ದಿನಗಳಿಂದ ಕೇಳಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಕೆಲವರು ಇದು ಕೇವಲ ಕಲ್ಪಿತ ಸುದ್ದಿಗಳು ಎಂದು ಹೇಳುತ್ತಿದ್ದಾರೆ. ಅಲ್ಲು ಕುಟುಂಬ ಸಹ ಆಕೆ ಸಿನೆಮಾಗಳಲ್ಲಿ ನಟಿಯಾಗಿ ಹೆಜ್ಜೆ ಇಡುವುದಿಲ್ಲ ಎಂದು ಕ್ಲಾರಿಟಿ ಸಹ ನೀಡಿದೆ.

Most Popular

To Top