Film News

ಯಂಗ್ ಬ್ಯೂಟಿ ಶ್ರೀಲೀಲಾ ನಟಿಯ ವೈಯುಕ್ತಿಕ ವಿಚಾರ ರಿವೀಲ್, ಇಂಟ್ರಸ್ಟಿಂಗ್ ವಿಚಾರ ವೈರಲ್…!

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ಇದೆ ಎನ್ನಬಹುದಾಗಿದೆ. ಈ ಹಾದಿಯಲ್ಲೇ ಯಂಗ್ ಬ್ಯೂಟಿ ಶ್ರೀಲೀಲಾ ಸದ್ಯ ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಟಾಲಿವುಡ್ ನಲ್ಲಿ ಮೊದಲನೇ ಸಿನೆಮಾ ಮೂಲಕವೇ ತೆಲುಗು ಪ್ರೇಕ್ಷಕರ ಮನ ಗೆದ್ದ ನಟಿ ಶ್ರಿಲೀಲಾ ಸ್ಯಾಂಡಲ್ ವುಡ್ ಮೂಲಕ ಸಿನೆಮಾ ರಂಗಕ್ಕೆ ಪ್ರವೇಶ ಕೊಟ್ಟು ಇದೀಗ ಟಾಲಿವುಡ್ ನಲ್ಲಿ ಬೇಡಿಕೆ ನಟಿಯಾಗಿದ್ದಾರೆ. ಪೆಳ್ಳಿಸಂದಡಿ ಎಂಬ ಸಿನೆಮಾ ಮೂಲಕ ಎಲ್ಲರನ್ನು ಮಾಯೆ ಮಾಡಿದ್ದಾರೆ. ಇತ್ತೀಚಿಗೆ ತೆರೆಕಂಡ ಧಮಾಕಾ ಸಿನೆಮಾದ ಮೂಲಕ ಆಕೆ ಮತಷ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಸೋಲು ಗೆಲುವಿನ ಮೆಟ್ಟಿಲು ಎಂಬಂತೆ ನಟಿ ಶ್ರೀಲೀಲಾ ಅಭಿನಯದ ಮೊದಲನೆ ಸಿನೆಮಾ ಪೆಳ್ಳಿಸಂದಡಿ ಬಾಕ್ಸ್ ಆಫೀಸ್ ನಲ್ಲಿ ಡಿಜಾಸ್ಟರ್‍ ಆಗಿತ್ತು. ಬಳಿಕ ಆಕೆ ರವಿತೇಜ ಅಭಿನಯದ ಧಮಾಕಾ ಸಿನೆಮಾದ ಮೂಲಕ ನೂರು ಕೋಟಿ ಕ್ಲಬ್ ಗೆ ಎಂಟ್ರಿ ಕೊಟ್ಟರು. ಧಮಾಕಾ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ತನ್ನ ತೆಕ್ಕೆಗೆ ಹಾಕಿಕೊಂಡ ಶ್ರೀಲೀಲಾ ಇದೀಗ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಹೆಸರು ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರಾಗಿಯೇ ಹರಿದಾಡುತ್ತಿದೆ. ಇದೀಗ ಶ್ರೀಲೀಲಾ ಗೆ ಸಂಬಂಧಿಸಿದ ವೈಯುಕ್ತಿಕ ವಿಚಾರವೊಂದು ಹೊರಬಂದಿದೆ. ಶ್ರೀಲೀಲಾ ನಿಜ ಸ್ವರೂಪವೊಂದು ಹೊರಬಂದಿದೆ. ಆಕೆಗೆ ಕೋಪ ಬಂದರೇ ತುಂಬಾನೆ ವೈಲೆಂಟ್ ಆಗುತ್ತಾರಂತೆ. ಕೋಪ ಬಂದರೇ ಆಕೆ ಏನು ಮಾಡುತ್ತಾರೆ ಎಂಬ ವಿಚಾರ ಆಕೆಯೆ ಹೊರಹಾಕಿದ್ದಾರೆ.

ಇತ್ತೀಚಿಗೆ ಶ್ರೀಲೀಲಾ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ವೈಯುಕ್ತಿಕ ವಿಚಾರಗಳನ್ನು ಹೊರಹಾಕಿದ್ದಾರೆ. ನೋಡಲು ತುಂಬಾ ಸಿಂಪಲ್ ಆಗಿರುವಂತಹ  ಶ್ರೀಲೀಲಾ ಕೋಪ ಬಂದರೇ ಮಾತ್ರ ಉಗ್ರ ರೂಪ ತಾಳುತ್ತಾರಂತೆ. ಕೋಪ ಬಂದರೇ ಅಪರಿಚಿತುಡು ಸಿನೆಮಾದಲ್ಲಿನ ವಿಕ್ರಂ ರಂತೆ ಆಗುತ್ತಾರಂತೆ. ಎಂತಹ ಮೂಡ್ ನಲ್ಲಿದ್ದರೂ ಸಹ ಆಕೆಯ ಎದುರು ಯಾರು ನಿಲ್ಲಲು ಸಾಧ್ಯವಿಲ್ಲವಂತೆ. ಅದರಲ್ಲೂ ಮುಖ್ಯವಾಗಿ ತನಗೆ ಇಷ್ಟವಾಗದ ಮಾತುಗಳನ್ನಾಡಿದರೇ ಮಾತ್ರ ಕೋಪ ದುಪ್ಪಟ್ಟಾಗುತ್ತದೆಯಂತೆ. ಬಾಯಿಗೆ ಬಂದಂತೆ ಬೈದುಬಿಡುತ್ತಾರಂತೆ. ಜೊತೆಗೆ ಆಕೆಗೆ ಎಷ್ಟು ಬೇಗ ಕೋಪ ಬರುತ್ತದೆಯೋ ಅಷ್ಟೇ ಬೇಗ ಕೋಪ ತಣಿಯುತ್ತದೆಯಂತೆ. ಕೋಪದಲ್ಲಿ ಬೈದು ಬಿಟ್ಟೆ ಎಂದು ದುಃಖದಿಂದ ಅಳುತ್ತಾರಂತೆ. ಜೊತೆಗೆ ಆಕೆಯ ತಾಯಿ ಸಹ ಆಕೆಯ ಕೋಪವನ್ನು ಭರಿಸುತ್ತಾರಂತೆ. ಬೇರೆಯವರಾದರೇ ಆಕೆಯಿಂದ ದೂರ ಓಡಿಹೋಗುತ್ತಾರಂತೆ. ಆ ಮೂಲಕ ತನ್ನ ನಿಜ ಸ್ವರೂಪವನ್ನು ಹೊರಹಾಕಿದ್ದಾರೆ.

ಸದ್ಯ ಶ್ರೀಲೀಲಾ ತುಂಬಾ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಆಕೆಯನ್ನು ಹುಡುಕಿಕೊಂಡು ಬರುತ್ತಿವೆ.ಜೊತೆಗೆ ಆಕೆ ತನ್ನ ಸಂಭಾವನೆಯನ್ನೂ ಸಹ ಏರಿಸಿದ್ದಾರಂತೆ. ಈ ಹಾದಿಯಲ್ಲೇ ಆಕೆ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನ SSMB28 ಸಿನೆಮಾಗೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ ಕಾರಣದಿಂದ ಹಾಗೂ ಆಕೆ ಹಾಕಿದ ಹೊಸ ಕಂಡಿಷನ್ಸ್ ಕಾರಣ ಆಕೆಯನ್ನು ಪ್ರಾಜೆಕ್ಟ್ ನಿಂದ ದೂರವಿಟ್ಟಿದ್ದಾರೆ ಎನ್ನಲಾಗುತ್ತಿದೆ.

Most Popular

To Top