Film News

ಅನಿರೀಕ್ಷಿತ ಅಪಘಾತದ ಕಾರಣದಿಂದ ಮಾನಸಿಕ ಹಾಗೂ ಶಾರೀರಿಕವಾಗಿ ಖಿನ್ನತೆಗೆ ಒಳಗಾಗಿದ್ದೇ ಎಂದ ನಟಿ ನಭಾ ನಟೇಶ್ ಪೋಸ್ಟ್…!

ತೆಲುಗಿನಲ್ಲಿ ಸೂಪರ್‍ ಹಿಟ್ ಹೊಡೆದ ರಾಮ್ ಪೋತುನೇನಿ ಅಭಿನಯದ ಇಸ್ಮಾರ್ಟ್ ಶಂಕರ್‍ ಸಿನೆಮಾದಲ್ಲಿ ನಾಯಕಿಯಾಗಿ ದೊಡ್ಡ ಫೇಮ್ ದಕ್ಕಿಸಿಕೊಂಡ ಕನ್ನಡ ಮೂಲದ ನಟಿ ನಭಾ ನಟೇಶ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆದರೆ ಆಕೆ ಕಳೆದ 2022 ರ ವರ್ಷದಲ್ಲಿ ಯಾವುದೇ ಸಿನೆಮಾ ಬರಲಿಲ್ಲ. ಅದಕ್ಕೆ ಕಾರಣವಾದರೂ ಏನು ಎಂಬುದರ ಬಗ್ಗೆ ಅನೇಕ ಕಥನಗಳೂ ಸಹ ಕೇಳಿಬಂದವು. ಆದರೆ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇರಲು ಪ್ರಮುಖ ಕಾರಣವನ್ನು ಆಕೆ ರಿವೀಲ್ ಮಾಡಿದ್ದಾರೆ. ಆ ಕಾರಣದಿಂದಲೇ ಆಕೆ ಸಿನೆಮಾಗಳಿಂದ ವಿರಾಮ ಪಡೆದಿದ್ದಾಗಿ ಪೋಸ್ಟ್ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

ನಟಿ ನಭಾ ನಟೇಶ್ ಇಸ್ಮಾರ್ಟ್ ಶಂಕರ್‍ ಸಿನೆಮಾದ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಬ್ರೇಕ್ ನೀಡುವಂತಹ ಯಾವುದೇ ಸಿನೆಮಾ ಬರಲಿಲ್ಲ. ಸಾಲು ಸಾಲು ಅಪಜಯಗಳ ಕಾರಣದಿಂದ ಆಕೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದವು ಎಂದು ಅನೇಕರು ಭಾವಿಸಿದ್ದರು. ಇದೀಗ ಆಕೆಗೆ ಸಿನೆಮಾಗಳಿಂದ ದೂರವುಳಿಯಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ಇತ್ತಿಚಿಗೆ ತಾನು ಅಪಘಾತಕ್ಕೆ ಗುರಿಯಾಗಿದ್ದು, ಆ ಕಾರಣದಿಂದಲೇ ಸಿನೆಮಾಗಳಲ್ಲಿ ನಟಿಸಲು ಆಗಲಿಲ್ಲ. ಸಂಪೂರ್ಣವಾಗಿ ಗುಣಮುಖಳಾಗಿದ್ದು, ಸಿನೆಮಾಗಳಲ್ಲಿ ನಟಿಸಲು ಸಿದ್ದವಾಗಿದ್ದೇನೆ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇನ್ನೂ ನಭಾ ನಟೇಶ್ ತನ್ನ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವಂತೆ, ನಾನು ಕಳೆದ ವರ್ಷ ಯಾವುದೇ ಸಿನೆಮಾಗಳನ್ನು ಮಾಡಲಿಲ್ಲ. ನನಗೂ ಸಹ ನಿಮ್ಮಂತೆ ಸಿನೆಮಾಗಳಿಂದ ಮಿಸ್ ಆದ ಫೀಲಿಂಗ್ ಇದೆ. 2022 ರಲ್ಲಿ ನಾನು ಒಂದು ಅಪಘಾತಕ್ಕೆ ಗುರಿಯಾಗಿದ್ದೆ. ನನ್ನ ಎಡ ಭುಜಕ್ಕೆ ತುಂಬಾ ಪೆಟ್ಟಾಗಿದೆ. ಚಿಕಿತ್ಸೆಯ ಭಾಗವಾಗಿಯೇ ಕೆಲವು ಬಾರಿ ಸರ್ಜರಿಗಳನ್ನು ಸಹ ಮಾಡಿಸಿಕೊಳ್ಳಬೇಕಾಗಿತ್ತು. ಇದರಿಂದಾಗಿ ನಾನು ಮಾನಸಿಕವಾಗಿ, ಶಾರೀರಕವಾಗಿ ತುಂಬಾ ಖಿನ್ನತೆಗೆ ಒಳಗಾದೆ. ಆದರೆ ಇದೀಗ ನಾನು ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ನಾನು ತುಂಬಾ ಇಷ್ಟಪಡುವ ಸಿನೆಮಾ ರಂಗದಲ್ಲಿ ನಟಿಸಲು ಸಿದ್ದವಾಗಿದ್ದೇನೆ. ನಿಮ್ಮ ಪ್ರೀತಿ ಅಭಿಮಾನದ ಕಾರಣದಿಂದಲೇ ನಾನು ಗುಣಮುಖಳಾದೆ. ನಾನು ಸಿದ್ದವಾಗಿದ್ದೇನೆ 2023 ಎಂದು ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ಇನ್ನೂ ನಭಾ ಹಂಚಿಕೊಂಡ ಪೋಸ್ಟ್ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳೂ ಶುಭಾಷಯಗಳನ್ನು ಕೋರುತ್ತಿದ್ದಾರೆ. ಜೊತೆಗೆ ಪುನಃ ಆಕೆಯನ್ನು ಸಿನೆಮಾಗಳಲ್ಲಿ ನೊಡಲು ಆಸಕ್ತಿ ತೋರುತ್ತಿದ್ದಾರೆ. ಜೊತೆಗೆ ಅಪಘಾತಗಳಿಗೆ ತುತ್ತಾಗದೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಸಲಹೆ ಗಳನ್ನು ನೀಡುತ್ತಿದ್ದಾರೆ.

Most Popular

To Top