Film News

ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಯಂಗ್ ಬ್ಯೂಟಿ ಶ್ರೀಲೀಲಾ, ಈ ಹಾಡಿಗಾಗಿ ಆಕೆ ಭಾರಿ ಮೊತ್ತ ಡಿಮ್ಯಾಂಡ್, ವೈರಲ್ ಆದ ಕ್ರೇಜಿ ರೂಮರ್…..!

ಇಡೀ ವಿಶ್ವದಾದ್ಯಂತ ಭಾರಿ ಸಂಚಲನ ಮೂಡಿಸಿದ ಪುಷ್ಪಾ ಸಿನೆಮಾ ಭಾರಿ ಸಕ್ಸಸ್ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಿನೆಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದ್ದು, ಇನ್ನೂ ಈ ಸಿನೆಮಾದ ಹಾಡುಗಳು ಹಾಗೂ ಡೈಲಾಗ್ ಗಳು ಜನರ ಬಾಯಲ್ಲೇ ಇದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಇಡೀ ದೇಶದಲ್ಲಿರುವ ಪುಷ್ಪಾ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಎಂದರೇ ತಪ್ಪಾಗಲಾರದು. ಈ ಸಿನೆಮಾದ ಬಗ್ಗೆ ಆಗಾಗ ಕೆಲವೊಂದು ಕ್ರೇಜಿ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಪುಷ್ಪಾ-2 ಸಿನೆಮಾದಲ್ಲಿ ಯಂಗ್ ಬ್ಯೂಟಿ ಶ್ರೀಲೀಲಾ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದು, ಅದಕ್ಕಾಗಿ ಆಕೆ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ.

ಖ್ಯಾತ ನಿರ್ದೇಶಕ ಸುಕುಮಾರ್‍ ಪುಷ್ಪಾ-2 ಸಿನೆಮಾವನ್ನು ತುಂಬಾನೆ ಪ್ರತಿಷ್ಟೆಯಾಗಿ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಶುರುವಾದಾಗಿನಿಂದ ತುಂಬಾನೆ ಹೈಪ್ ಕ್ರಿಯೇಟ್ ಮಾಡಿದೆ ಎಂದೇ ಹೇಳಬಹುದಾಗಿದೆ. ಈ ಸಿನೆಮಾದಲ್ಲೂ ಸಹ ಅನೇಕ ಸ್ಟಾರ್‍ ಗಳು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಕನ್ನಡದ ನಟಿ ಶ್ರೀಲೀಲಾ ಪುಷ್ಪಾ-2 ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಆಕೆ ಸ್ಪೇಷಲ್ ಸಾಂಗ್ ನಲ್ಲಿ ಸೊಂಟ ಬಳುಕಿಸಲಿದ್ದಾಳೆ. ಪುಷ್ಪಾ-1 ರಲ್ಲಿ ಹೂ ಅಂಟಾವಾ ಸಾಂಗ್ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಈ ಹಾಡಿನಲ್ಲಿ ಸಮಂತಾ ನೃತ್ಯಕ್ಕೆ ಪಡ್ಡೆ ಹುಡುಗರಂತೂ ಈಗಲೂ ಸಹ ನಿದ್ದೆಗೆಡಿಸಿಕೊಳ್ಳುತ್ತಿದ್ದಾರೆ. ಓರ್ವ ಸ್ಟಾರ್‍ ನಟಿ ಐಟಂ ಸಾಂಗ್ ನಲ್ಲಿ ಈ ರೇಂಜ್ ಗೆ ಕುಣಿದಿದ್ದರು. ಈ ನೃತ್ಯಕ್ಕಾಗಿ ಸಮಂತಾ 5 ಕೋಟಿ ಸಂಭಾವನೆ ಸಹ ಪಡೆದುಕೊಂಡಿದ್ದಾರೆ. ಆದ್ದರಿಂದ ಪುಷ್ಪಾ-2 ನಲ್ಲಿ ಸ್ಪೇಷಲ್ ಹಾಡಿಗೆ ನಟಿ ಶ್ರೀಲೀಲಾ ರವರನ್ನು ಆಯ್ಕೆ ಮಾಡಲಾಗಿದೆ. ಆಕೆ ಈ ಹಾಡಿಗಾಗಿ 2 ಕೋಟಿ ಸಂಭಾವನೆ ಸಹ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ.

ಇನ್ನೂ ನಟಿ ಶ್ರೀಲೀಲಾ ಇತ್ತೀಚಿಗಷ್ಟೆ ತೆರೆಕಂಡ ಗುಂಟೂರು ಖಾರಂ ಸಿನೆಮಾದಲ್ಲಿ ಮಹೇಶ್ ಬಾಬು ರವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಶ್ರೀಲೀಲಾ ಆಗಲಿ ಅಥವಾ ಪುಷ್ಪಾ ಚಿತ್ರತಂಡವಾಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ.

Most Popular

To Top