ಅಯೋಧ್ಯೆಗೆ ಹೋಗಬೇಕೆಂಬ ಆಸೆ ನನಗೂ ಇದೆ ಎಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ….!

Follow Us :

ಸದ್ಯ ದೇಶದಾದ್ಯಂತ ಅಯೋಧ್ಯೆ ರಾಮಮಂದಿರ ಉದ್ಘಾಟನೆಯದ್ದೆ ಚರ್ಚೆ ನಡೆಯುತ್ತಿದೆ. ಪ್ರತೀ ನಿತ್ಯ ರಾಮಮಂದಿರ ಉದ್ಘಾಟನೆಯ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ರವರು ಸಹ ಅಯೋದ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಬೇಕೆಂಬ ಆಸೆ ಇದೆ ಎಂದು ಹೇಳಿದ್ದಾ

ರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿಯ ವಿದ್ಯಾ ಚೌಡೇಶ್ವರಿ ಮಠದಲ್ಲಿ ಶ್ರೀಮಠದ ವತಿಯಿಂದ ಧಾಮಿರ್ಕ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರವರು ಭಾಗಿಯಾಗಿದ್ದರು. ಇದೇ ವೇಳೆ ಮಾದ್ಯಮಗಳೊಂದಿಗೆ ದೇವೇ ಗೌಡ ರವರು ಮಾತನಾಡಿದರು. ಶ್ರೀಬಾಲ ಮಂಜುನಾಥ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಬರಲು ಆಹ್ವಾನ ನೀಡಿದ್ದರು. ವಿದ್ಯಾ ಚೌಡೇಶ್ವರಿಯ ಉತ್ತರಾಯಣ ಪುಣ್ಯಕಾಲ, ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ದಂತಿ ಉತ್ಸವ ಹಾಗೂ ಅಮ್ಮನವರ ಚಿಕ್ಕಮ್ಮ ಜಾತ್ರೆ ಸಹ ಶಾಸ್ತ್ರೋಕ್ತವಾಗಿ ನಡೆಇದೆ. ಈ ಕಾರ್ಯಕ್ರಮದ ಅಂಗವಾಗಿ ನಾನು ಉಪವಾಸ ವ್ರತ ಮಾಡಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದೇನೆ ಎಂದರು.

ಇನ್ನೂ ಸದ್ಯ ನನ್ನ ಎರಡೂ ಮಂಡಿಗಳು ಸರಿಯಿಲ್ಲ. ಆದರೂ ಸಹ ನಾನು ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ. ಶ್ರೀ ವಿದ್ಯಾ ಚೌಡೇಶ್ವರಿಗೆ ಒಂದು ಕಿರೀಟವನ್ನು ಸಹ ಧಾರಣೆ ಮಾಡಿಸಿದ್ದೇನೆ. ದೇವಿಯ ಶಕ್ತಿಯಿಂದ ನಾನು ಮೂರು ಬಾರಿ ಪ್ರದಕ್ಷಣೆ ಮಾಡಿದ್ದೇನೆ. ದೇವಿಗೆ ಧರಿಸಿದ ವಜ್ರದ ಕಿರೀಟ ದೇವಸ್ತಾನದಿಂದಲೇ ಕೊಟ್ಟಿರುವುದು ಎಂದು ಸ್ಪಷ್ಟನೆ ನೀಡಿದರು. ಬಳಿಕ ನನಗೂ ಸಹ ಅಯೋಧ್ಯೆಗೆ ಹೋಗಬೇಕೆಂಬ ಇಚ್ಚೆ ಇದೆ. ಸಾದ್ಯವಾದರೇ ಹೋಗುವ ಪ್ರಯತ್ನ ಮಾಡುತ್ತೇನೆ. ನನ್ನ ಆರೋಗ್ಯದ ಸಮಸ್ಯೆಯ ಬಗ್ಗೆ ಯೋಚಿಸಬೇಕಾಗುತ್ತಿದೆ. ಸಾಧ್ಯವಾದರೇ ಹೋಗುವ ಪ್ರಯತ್ನ ಮಾಡುತ್ತೇನೆ ಎಂದು ಹೆಚ್.ಡಿ.ಡಿ ಹೇಳಿದ್ದು, ಜೊತೆಗೆ ದೇವರ ಕ್ಷೇತ್ರದಲ್ಲಿ ರಾಜಕೀಯದ ಬಗ್ಗೆ ಹೇಳಿಕೆ ನೀಡೋಕೆ ಇಷ್ಟಪಡೊಲ್ಲ ಎಂದು ತಿಳಿಸಿದ್ದಾರೆ.