Film News

66 ವರ್ಷದ ಸೀನಿಯರ್ ನಟನೊಂದಿಗೆ ಲಿಪ್ ಲಾಕ್ ಮಾಡಿದ ಯಂಗ್ ಬ್ಯೂಟಿ ಶೋಭಿತಾ ಧೂಲಿಪಾಲ…!

ಆಂಧ್ರ ನಾಡಲ್ಲಿ ಜನಿಸಿ ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಯುವ ನಟಿ ಶೋಭಿತಾ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ಗಳನ್ನು ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಎಫೈರ್‍ ಇದೆ ಎಂಬ ಗುಸುಗುಸು ಜೋರಾಗಿಯೇ ಕೇಳಿಬರುತ್ತಲೇ ಇದೆ. ಇದೀಗ ಮತ್ತೊಂದು ವಿಚಾರದಿಂದ ಶೋಭಿತಾ ಸಖತ್ ಸುದ್ದಿಯಾಗಿದ್ದಾರೆ. ಅದು 66 ವರ್ಷದ ಸೀನಿಯರ್‍ ನಟನೊಂದಿಗೆ ರೊಮ್ಯಾನ್ಸ್ ಮಾಡುವ ಮೂಲಕ ಆಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.

ನಟಿ ಶೋಭಿತಾ ಮೂಲತಃ ತೆಲುಗು ಹುಡುಗಿಯಾದರೂ ಬಾಲಿವುಡ್ ಸಿನೆಮಾಗಳಲ್ಲಿ ಹೆಚ್ಚು ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾಗಿದ್ದಾರೆ. ಜೊತೆಗೆ ಸೌತ್ ನ ಸಿನೆಮಾಗಳಲ್ಲೂ ಸಹ ಶೋಭಿತಾ ನಟಿಸುತ್ತಿದ್ದಾರೆ. ಆದರೆ ಆಕೆ ಹೆಚ್ಚು ಆಸಕ್ತಿ ಮಾತ್ರ ಬಾಲಿವುಡ್ ಸಿನೆಮಾಗಳ ಮೇಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಸಿನೆಮಾಗಳಲ್ಲಿ ಆಕೆ ಬೋಲ್ಡ್ ದೃಶ್ಯಗಳು, ಲಿಪ್ ಲಾಕ್ ನಲ್ಲೂ ಸಹ ಯಾವುದೇ ಕಂಡಿಷನ್ಸ್ ಇಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ ಸೀನಿಯರ್‍ ನಟನೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಅದರಲ್ಲೂ ಲಿಪ್ ಲಾಕ್ ದೃಶ್ಯದಲ್ಲೂ ಸಹ ಆಕೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಶೋಭಿತಾ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತಿಚಿಗಷ್ಟೆ ಈ ವೆಬ್ ಸಿರೀಸ್ ನ ಟ್ರೈಲರ್‍ ಸಹ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್‍ ನಲ್ಲಿ ಶೋಭಿತಾ ಎಷ್ಟರ ಮಟ್ಟಿಗೆ ಹಾಟ್ ಡೋಸ್ ಏರಿಸಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಈ ಸಿರೀಸ್ ನಲ್ಲಿ ಲಿಪ್ ಕಿಸ್ ಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಲಿಪ್ ಕಿಸ್ ಗಳು ಸಾಮಾನ್ಯವಾಗಿಯೇ ಇರುತ್ತವೆ ಆದರೆ ಆಕೆ ಯಂಗ್ ನಟನೊಂದಿಗೆ ಲಿಪ್ ಕಿಸ್ ಮಾಡಿದ್ದರೇ ಈ ಸುದ್ದಿ ಅಷ್ಟೊಂದು ಹೈಪ್ ಪಡೆದುಕೊಳ್ಳುತ್ತಿರಲಿಲ್ಲ. 30 ವರ್ಷದ ನಟಿ 66 ವಯಸ್ಸಿನ ಬಾಲಿವುಡ್ ಸೀನಿಯರ್‍ ಸ್ಟಾರ್‍ ನಟ ಅನೀಲ್ ಕಪೂರ್‍ ಜೊತೆಗೆ ಲಿಪ್ ಲಾಕ್ ಮಾಡಿದ್ದಾರೆ. ಈ ಕಾರಣದಿಂದ ಈ ವಿಚಾರ ಇದೀಗ ಹಾಟ್ ಟಾಪಿಕ್ ಆಗಿದೆ. ಜೊತೆಗೆ ಅನೇಕ ವಿಮರ್ಶೆಗಳಿಗೂ ಸಹ ಕಾರಣವಾಗಿದೆ.

ಒಟ್ಟು ನಾಲ್ಕು ಎಪಿಸೋಡ್ ಇರುವ ಈ ಸಿರೀಸ್ ನ ಮೊದಲ ಭಾಗದಲ್ಲಿ ಶೋಭಿತಾ ಪಾತ್ರಕ್ಕೆ ಅಷ್ಟೊಂದು ಆಕ್ಟಿಂಗ್ ಸ್ಕೋಪ್ ಇಲ್ಲ. ಆದರೆ ಈ ಸೀರಿಸ್ ನಲ್ಲಿ ಶೋಭಿತಾ ನಟಿಸಲು ಆಕೆಗೆ ಅವಕಾಶಗಳ ಕೊರತೆ ಎಂದು ವಿಮರ್ಶೆ ಮಾಡಲಾಗುತ್ತಿದೆ. ಇನ್ನೂ ಶೋಭಿತಾಗೆ ಈಗಾಗಲೇ ಒಳ್ಳೆಯ ಅವಕಾಶಗಳು ಬರುತ್ತಿದ್ದರೂ ಸಹ ಆಕೆ ಇಂತಹ ದೃಶ್ಯಗಳಲ್ಲಿ ನಟಿಸಿರುವುದು ಆಕೆಯ ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಸಿನಿವಲಯದಲ್ಲಿ ಶೋಭಿತಾ ಹಾಗೂ ಅನೀಲ್ ಕಪೂರ್‍ ರೊಮ್ಯಾನ್ಸ್ ಸುದ್ದಿ ವೈರಲ್ ಆಗುತ್ತಿದೆ.

Most Popular

To Top