Film News

ಕಳೆದ ವರ್ಷವೇ ರಕುಲ್ ಪ್ರೀತ್ ಸಿಂಗ್ ಗೆ ಮದುವೆಯಾಗಿದೆಯಂತೆ, ಅದಕ್ಕೆ ರಕುಲ್ ಕೊಟ್ಟ ರಿಯಾಕ್ಷನ್?

ಸಿನಿರಂಗದ ಸೆಲೆಬ್ರೆಟಿಗಳು ಸಿನೆಮಾಗಳ ಜೊತೆ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ. ಸುಮಾರು ದಿನಗಳಿಂದ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಟ ಜಾಕಿ ಭಗ್ನಾನಿ ಡೇಟಿಂಗ್ ನಲ್ಲಿದ್ದಾರೆ. ಅವರು ಸುದ್ದಿ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಲೇ ಇರುತ್ತದೆ. ಇದೀಗ ಮತ್ತೊಂದು ರೂಮರ್‍ ಕೇಳಿಬರುತ್ತಿದ್ದು, ಅದರಂತೆ ರಕುಲ್ ಪ್ರೀತ್ ಸಿಂಗ್ ಗೆ ಕಳೆದ ವರ್ಷವೇ ಮದುವೆಯಾಗಿದೆಯಂತೆ. ಇದಕ್ಕೆ ರಕುಲ್ ಸಹ ರಿಯಾಕ್ಟ್ ಆಗಿದ್ದು, ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸೌತ್ ಅಂಡ್ ನಾರ್ತ್ ನಲ್ಲಿ ಬೇಡಿಕೆಯುಳ್ಳ ನಟಿ ರಕುಲ್ ಪ್ರೀತ್ ಸಿಂಗ್ ಇತ್ತಿಚಿಗೆ ಹೆಚ್ಚಾಗಿ ತಮ್ಮ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ರಕುಲ್ ಪ್ರೀತ್ ಸಿಂಗ್ ಗೆ ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿಯೇ ಮದುವೆಯಾಗಿದೆ ಎಂಬ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ. ಇನ್ನೂ ರಕುಲ್ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಸೋಷಿಯಲ್ ಮಿಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಇಬ್ಬರೂ ಅನೇಕ ಕಡೆ ಜೋಡಿಯಾಗಿ ತಿರುಗಾಡುತ್ತಿದ್ದು, ಕೆಲವೊಂದು ಪೊಟೋಗಳೂ ಸಹ ಹರಿದಾಡಿದೆ. ಬಳಿಕ ರಕುಲ್ ಮದುವೆಗೆ ಸಿದ್ದವಾಗಿದ್ದಾರೆ ಎಂದು ರಕುಲ್ ಸಹೋದರ ಅಮನ್ ಸಹ ಸೋಷಿಯಲ್ ಮಿಡಿಯಾದಲ್ಲಿ ತಿಳಿಸಿದ್ದರು. ಈ ಸುದ್ದಿ ಕೆಲವು ದಿನಗಳ ಕಾಲ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡಿತ್ತು. ಇದೀಗ ರಕುಲ್ ಗೆ ಕಳೆದ ವರ್ಷವೇ ಮದುವೆಯಾಗಿದೆ ಎಂಬ ರೂಮರ್‍ ಜೋರಾಗಿಯೇ ಕೇಳಿಬರುತ್ತಿದೆ.

ಈ ಬಗ್ಗೆ ರಕುಲ್ ರಿಯಾಕ್ಟ್ ಆಗಿದ್ದಾರೆ. ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿ ನನ್ನ ಮದುವೆಯಾಗಿದೆಯಂತೆ. ಆದರೆ ಅದು ಹೇಗೆ ನಡೆಯಿತು ಎಂದು ನನಗೆ ತಿಳಿದಿಲ್ಲ. ಪ್ರತಿ ವಾರಕ್ಕೆ ಒಂದು ರೂಮರ್‍ ನನ್ನ ಬಗ್ಗೆ ಕೇಳಿಬರುತ್ತಿದೆ. ಅದರಂತೆ ಇದೀಗ ಕಳೆದ ವರ್ಷ ನವೆಂಬರ್‍ ಮಾಹೆಯಲ್ಲಿ ನಾನು ಮದುವೆಯಾಗಿದ್ದೇನೆ ಎಂದು ಸುದ್ದಿ ಕೇಳಿಬರುತ್ತಿದೆ. ಆದರೆ ಈ ಮದುವೆ ಹೇಗೆ ನಡೆಯಿತು ಎಂಬುದನ್ನು ಮಾತ್ರ ಯಾರೂ ನನಗೆ ಹೇಳಲಿಲ್ಲ. ಸದ್ಯ ನನಗೆ ಸಿನೆಮಾಗಳಲ್ಲಿ ನಟಿಸುವುದು ಮಾತ್ರ ಆಸಕ್ತಿಯಿದೆ. ಅದು ಹೇಗೆ ಇಂತಹ ರೂಮರ್‍ ಗಳು ಹುಟ್ಟಿಕೊಳ್ಳುತ್ತವೆ ಎಂಬುದು ಮಾತ್ರ ತಿಳಿಯುವುದಿಲ್ಲ ಎಂದು ರೂಮರ್‍ ಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನೂ ನಾನು ಹೆಚ್ಚು ಗೂಗಲ್ ಮಾಡುವುದು ಆಹಾರದ ಬಗ್ಗೆ. ಹೆಚ್ಚು ಊಟ, ಆರೋಗ್ಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿರುತ್ತೇನೆ. ಸದ್ಯ ರಕುಲ್ ಮದುವೆಯ ರೂಮರ್‍ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೂ ಸಾಮಾನ್ಯವಾಗಿ ಸೆಲೆಬ್ರೆಟಿಗಳ ವಿಚಾರ ನಿಜವಿರಲಿ ಅಥವಾ ಸುಳ್ಳಾಗಿರಲಿ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತದೆ. ಇನ್ನೂ ಆಕೆ ಬಹುನಿರೀಕ್ಷಿತ ಇಂಡಿಯನ್-2 ಸಿನೆಮಾದಲ್ಲಿ ರಕುಲ್ ನಟಿಸುತ್ತಿದ್ದಾರೆ.

Most Popular

To Top