ಭಾರಿ ಆಫರ್ ಗಿಟ್ಟಿಸಿಕೊಂಡ ಕನ್ಸಣ್ಣೆ ಸುಂದರಿ ಪ್ರಿಯಾ ವಾರಿಯರ್, ಪವನ್ ಕಲ್ಯಾಣ್ ಸಿನೆಮಾದಲ್ಲಿ ಪ್ರಿಯಾ ವಾರಿಯರ್?

Follow Us :

ಕಣ್ಸನ್ನೆ ಮೂಲಕ ಅನೇಕರ ಹೃದಯ ಕದ್ದ ಕೇರಳ ಬ್ಯೂಟಿ ಪ್ರಿಯಾ ವಾರಿಯರ್‍ ಎಲ್ಲರಿಗೂ ನೆನಪು ಇದ್ದೇ ಇರುತ್ತಾಳೆ. ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ರವರನ್ನು ಸಹ ಫಿದಾ ಮಾಡಿದ ಈಕೆ ತುಂಬಾನೆ ಫೇಮಸ್ ಆಗಿದ್ದರು. ಕಣ್ಸನ್ನೆ ಮೂಲಕವೇ ದೊಡ್ಡ ಫೇಮ್ ದಕ್ಕಿಸಿಕೊಂಡ ಈಕೆ ಅನೇಕ ಯುವಕರ ಹೃದಯ ಕದ್ದು ಹವಾ ಸೃಷ್ಟಿ ಮಾಡಿದ್ದರು. ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಹಾಟ್ ಟ್ರೀಟ್ ಮೂಲಕ ಎಲ್ಲರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಪ್ರಿಯಾ ಪವನ್ ಕಲ್ಯಾಣ್ ರವರ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ನಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿ ಪ್ರಿಯಾ ಸದ್ಯ ಮಲಯಾಳಂ ನಲ್ಲಿ ಬಹುಬೇಡಿಕೆ ನಡಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಒರು ಆಧಾರ್‍ ಲವ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಖ್ಯಾತಿ ಪಡೆದುಕೊಂಡರು. ಈ ಸಿನೆಮಾ ಅಷ್ಟೊಂದು ಹಿಟ್ ಆಗದೇ ಇದ್ದರೂ ಸಹ ಪ್ರಿಯಾ ವಾರಿಯರ್‍ ಮಾತ್ರ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಚೆಕ್, ಇಷ್ಕ್ ಎಂಬ ಸಿನೆಮಾದಲ್ಲಿ ನಟಿಸಿದ್ದರೂ ಈ ಸಿನೆಮಾಗಳೂ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಬಳಿಕ ಆಕೆಗೆ ಆಫರ್‍ ಗಳು ಕಡಿಮೆಯಾದವು ಎನ್ನಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ತುಂಬಾನೆ ಬ್ಯುಸಿಯಾಗಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಇದೀಗ ನಟಿ ಪ್ರಿಯಾ ಪ್ರಕಾಶ್ ವಾರಿಯರ್‍ ತೆಲುಗು ಸಿನೆಮಾ ಒಂದರಲ್ಲಿ ನಟಿಸಲಿದ್ದು, ಈ ಸಿನೆಮಾದ ಮೂಲಕ ಆಕೆ ಮತ್ತೊಮ್ಮೆ ತೆಲುಗು ಪ್ರೇಕ್ಷರನ್ನು ರಂಜಿಸಲಿದ್ದಾರೆ. ಈ ಸಿನೆಮಾ ಬೇರೆ ಯಾವುದೂ ಅಲ್ಲ ನಿನ್ನೆಯಷ್ಟೆ ಲಾಂಚ್ ಆದ ಪವನ್ ಕಲ್ಯಾಣ್ ಅವರ ಸಿನೆಮಾ. ಖ್ಯಾತ ತಮಿಳು ನಟ ಕಂ ನಿರ್ದೇಶಕ ಸಮುದ್ರಖನಿ ಸಾರಥ್ಯದಲ್ಲಿ ಮೂಡಿದ ಬಂದ ಸೂಪರ್‍ ಹಿಟ್ ತಮಿಳು ಸಿನೆಮಾ ವಿನೋದಯ ಸೀತಂ ಎಂಬ ಸಿನೆಮಾದ ರಿಮೇಕ್ ನಲ್ಲಿ ಪ್ರಿಯಾ ಪ್ರಕಾಶ್ ನಟಿಸಲಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಇಬ್ಬರೂ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಈ ಸಿನೆಮಾದ ಲಾಂಚ್ ಕಾರ್ಯಕ್ರಮ ಪೀಪುಲ್ ಮಿಡಿಯಾ ಫ್ಯಾಕ್ಟರಿ ಆಫೀಸ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮುದ್ರಖನಿ, ತ್ರಿವಿಕ್ರಮ್, ಥಮನ್, ವಿವೇಕ್ ಕೂಚಿ ಭೋಟ್ಲ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನೂ ಸಾಯಿ ಧರಮ್ ತೇಜ್ ಸಹ ತನ್ನ ಮಾವ ಪವನ್ ಕಲ್ಯಾಣ್ ಜೊತೆಗೆ ನಟಿಸಲು ತುಂಬಾ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಇನ್ನೂ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ರವರಿಗೆ ಜೋಡಿ ಯಾರು ಎಂದು ಇನ್ನೂ ಸುದ್ದಿ ಹೊರಬಂದಿಲ್ಲ. ಸಾಯಿಧರಮ್ ತೇಜ್ ಗೆ ಪ್ರಿಯಾ ವಾರಿಯರ್‍ ಜೋಡಿಯಾಗಿ ನಟಿಸಲಿದ್ದಾರೆ.