Film News

ನಾನು ಆ ರೀತಿಯಾಗಿ ಹೇಳಿಯೇ ಇಲ್ಲ, ಅವೆಲ್ಲವೂ ಸುಳ್ಳು ಎಂದು ಕೃತಿ ಶೆಟ್ಟಿ, ಸ್ಟಾರ್ ಹಿರೋ ಮಗನ ಕಿರುಕುಳದ ಬಗ್ಗೆ ಸ್ಪಷ್ಟನೆ…!

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಸಾಲಿಗೆ ಯಂಗ್ ನಟಿ ಕೃತಿ ಶೆಟ್ಟಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡ ಈಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.  ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಕೆಲವು ದಿನಗಳ ಸ್ಟಾರ್‍ ನಟನ ಪುತ್ರನೋರ್ವ ಕೃತಿ ಶೆಟ್ಟಿಗೆ ಕಿರುಕುಳ ಕೊಟ್ಟಿದ್ದ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಈ ಸುದ್ದಿಗೆ ಕೃತಿ ಇದೀಗ ಕ್ಲಾರಿಟಿ ಕೊಟ್ಟಿದ್ದಾರೆ.

ಉಪ್ಪೇನಾ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೃತಿ ಶೆಟ್ಟಿ, ಕಡಿಮೆ ಸಮಯದಲ್ಲೇ  ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡರು. ಕರ್ನಾಟಕ ಮೂಲದ ನಟಿ ಕೃತಿ ಉಪ್ಪೆನಾ ಸಿನೆಮಾದ ಮೂಲಕ ಟಾಲಿವುಡ್ ನ ಬಹುಬೇಡಿಕೆ ನಟಿಯರ ಸಾಲಿನಲ್ಲಿ ಸೇರಿಕೊಂಡರು. ಈ ಸಿನೆಮಾದ ಬಳಿಕ ಆಕೆ  ಶ್ಯಾಮ್ ಸಿಂಗ್ ರಾಯ್, ಬಂಗರಾರಾಜು ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಸಹ ಪಡೆದುಕೊಂಡರು. ಈ ಸಿನೆಮಾಗಳ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಪಡೆದುಕೊಂಡರು. ಸರಿಯಾದ ಸಕ್ಸಸ್ ಗಾಗಿ ಕಾಯುತ್ತಿರುವ ಕೃತಿ ಶೆಟ್ಟಿಗೆ ಸಂಬಂಧಿಸಿದ ಸುದ್ದಿಯೊಂದು ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಸಂದರ್ಶನವೊಂದರಲ್ಲಿ ಕೃತಿ ಶೆಟ್ಟಿ ಓ ಸ್ಟಾರ್‍ ನಟನ ಮಗ ತನಗೆ ಕಿರಿಕಿರಿ ನೀಡಿದ್ದ ಎಂದು ಹೇಳಿರುವುದಾಗಿ ಸುದ್ದಿಗಳು ಜೋರಾಗಿಯೇ ಹರಿದಾಡಿತ್ತು. ಈ ರೂಮರ್‍ ಜೋರಾಗಿ ಹರದಾಡುತ್ತಿದ್ದಂತೆ ಕೃತಿ ಶೆಟ್ಟಿ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ನಟಿ ಕೃತಿ ಶೆಟ್ಟಿಗೆ ಓರ್ವ ಸ್ಟಾರ್‍ ಹಿರೋ ಮಗ ಕಿರುಕುಳ ಕೊಡುತ್ತಿದ್ದಾನೆ. ಸ್ನೇಹದ ಮುಸುಕಿನಲ್ಲಿ ಕಿರುಕುಳ ಕೊಡುತ್ತಿದ್ದಾನೆ. ಎಲ್ಲಿಗೆ ಹೋದರು ಬಾ ಎನ್ನುತ್ತಾ, ಎಷ್ಟಾದರೂ ಹಣ ಕೊಡುತ್ತೇನೆ ಎಂದು ಹೇಳುತ್ತಿದ್ದ ಎಂಬಂತೆ ಕೆಲ ಸುದ್ದಿಗಳು ಜೋರಾಗಿಯೇ ಹರಿದಾಡಿತ್ತು. ಈ ಕಾಮೆಂಟ್ಸ್ ಕೃತಿ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಕೆಲವು ದಿನಗಳಿಂದ ಸುದ್ದಿ ವೈರಲ್ ಆಗುತ್ತಿದೆ. ಇದೀಗ ಈ ಬಗ್ಗೆ ರಿಯಾಕ್ಟ್ ಆಗಿರುವ ಕೃತಿ ಶೆಟ್ಟಿ ಈ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಎಂದೂ ಸಹ ಆ ರೀತಿಯಾಗಿ ಹೇಳಿಲ್ಲ. ಈ ರೂಮರ್‍ ಗಳನ್ನು ಪರಿಗಣಿಸಬೇಡಿ ಎಂದು ಭಾವಿಸಿದ್ದೆ. ಆದರೆ ಅತಿಯಾಗಿ ಹರಿದಾಡುತ್ತಿರುವ ಕಾರಣದಿಂದ ನಾನು ರಿಯಾಕ್ಟ್ ಆಗಬೇಕಿದೆ. ಆ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಯಾರು ನಂಬಬೇಡಿ ಎಂದು ಕೃತಿ ಟ್ವೀಟ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಈ ರೂಮರ್‍ ಗಳನ್ನು ಯಾರು ಹರಿಬಿಡುತ್ತಿದ್ದಾರೆ ನಿಲ್ಲಿಸಿಬಿಡಿ, ಇನ್ನು ಮುಂದೆಯಾದರೂ ಅಂತಹ ವಿಚಾರಗಳ ಬಗ್ಗೆ ಸುದ್ದಿ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ಮಿಡಿಯಾ ಸಂಸ್ಥೆಗಳಿಗೂ ಕೃತಿ ಮನವಿ ಮಾಡಿದ್ದಾರೆ. ಸದ್ಯ ಕೃತಿಶೆಟ್ಟಿ ತಮಿಳಿನಲ್ಲಿ ಜಯಂ ರವಿ ಜೊತೆಗೆ ಒಂದು ಸಿನೆಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂ ಹಾಗೂ ಟಾಲಿವುಡ್ ನಲ್ಲೂ ಸಹ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Most Popular

To Top