ಪವನ್ ಕಲ್ಯಾಣ್ ರವರ ಹಾಡಿಗೆ ಕ್ಯೂಟ್ ಎಕ್ಸ್ ಪ್ರೆಷನ್ಸ್ ಕೊಟ್ಟ ಸುಪ್ರೀತಾ, ವೈರಲ್ ಆದ ವಿಡಿಯೋ…..!

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಹನಟಿಯರಲ್ಲಿ ಸುರೇಖಾವಾಣಿ ಸಹ ಒಬ್ಬರಾಗಿದ್ದಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರಿತಾ ಮಾಡುವ ರೀಲ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಪವನ್ ಕಲ್ಯಾಣ್ ರವರ ಬಂಗಾರಂ ಸಿನೆಮಾದಲ್ಲಿನ ಹಾಡಿಗೆ ಸುಪ್ರೀತಾ ರೀಲ್ಸ್ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ತೆಲುಗಿನ ಅನೇಕ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾವಾಣಿಗೆ ಸುಪ್ರಿತಾ ಎಂಬ ಮಗಳೂ ಸಹ ಇದ್ದಾಳೆ. ಇಬ್ಬರೂ ಶಾಪಿಂಗ್ ಗೆ ಹೋಗುತ್ತಾ, ವೆಕೇಷನ್ ಗೆ ಹೋಗುತ್ತಾ ಸದಾ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರು ಹಂಚಿಕೊಳ್ಳುವ ಪೊಟೋಗಳು, ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತಾರೆ. ತಾಯಿ-ಮಗಳು ಸಹ ಸದಾ ಟ್ರೋಲಿಂಗ್ ಆಗುತ್ತಿರುತ್ತಾರೆ. ಜೊತೆಗೆ ಟ್ರೋಲರ್‍ ಗಳಿಗೆ ಆಗಾಗ ಕೌಂಟರ್‍ ಸಹ ನೀಡುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಪೋಸ್ಟ್ ಮೂಲಕ ಸದ್ದು ಮಾಡುವ ಸುಪ್ರೀತಾ ಇದೀಗ ಪವನ್ ಕಲ್ಯಾಣ್ ರವರ ಅಭಿನಯದ ಬಂಗಾಂರಂ ಸಿನೆಮಾದಲ್ಲಿನ ಸ್ಪೇಷಲ್ ಸಾಂಗ್ ಗೆ ರೀಲ್ಸ್ ಮಾಡಿದ್ದಾರೆ. ತಾಡು ಬಂಗರಂ ತಳಾ ತಳಾ ಉಂಗರಂ ಎಂಬ ಲಿರಿಕ್ಸ್ ಗೆ ಕ್ಯೂಟ್ ಎಕ್ಸ್ ಪ್ರೆಷನ್ಸ್ ಕೊಟ್ಟಿದ್ದಾರೆ. ಈ ಹಾಡಿಗೆ ಅನೇಕರು ರೀಲ್ಸ್ ಮಾಡಿದ್ದಾರೆ. ಆದರೆ ಸುಪ್ರೀತಾ ದಿ ಬೆಸ್ಟ್ ಎಂಬಂತೆ ತುಂಬಾ ಚೆನ್ನಾಗಿ ಎಕ್ಸ್ ಪ್ರೆಷನ್ಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರಲ್ಲಿ ಆಕೆ ಅಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡದೇ ಇದ್ದರೂ ಸಹ ಎಕ್ಸ್ ಪ್ರೇಷನ್ಸ್ ಸಹ ಚೆನ್ನಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಆಕೆಯ ಎಕ್ಸ್ ಪ್ರೇಷನ್ಸ್ ಮೆಚ್ಚಿ ಕಾಮೆಂಟ್ಸ್ ಹರಿಬಿಡುತ್ತಿದ್ದಾರೆ.

ಇನ್ನೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರೀತಾ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಗಳಾಗಿದ್ದಾರೆ ಎನ್ನಲಾಗಿದೆ. ಇನ್ನೂ ಸುಪ್ರೀತಾ ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಸುಪ್ರೀತಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.