Film News

ಲಾಂಗ್ ಶರ್ಟ್ ಧರಿಸಿ, ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್, ರಮ್ಯಾ ಹಾಟ್ ಅವತಾರಕ್ಕೆ ಫೈರಿಂಗ್ ಕಾಮೆಂಟ್ಸ್…….!

ಕನ್ನಡ ಸಿನಿರಂಗದಲ್ಲಿ ದಶಕಗಳ ಹಿಂದೆ ಸಾಲು ಸಾಲು ಸಿನೆಮಾಗಳ ಮೂಲಕ ಸ್ಟಾರ್‍ ನಟಿಯಾಗಿದ್ದ ಮೋಹಕತಾರಾ ರಮ್ಯಾ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನವೆಂಬರ್‍ 29 ಕ್ಕೆ ಆಕೆ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ಅಭಿನಯದ ಅಭಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಪಡೆದುಕೊಂಡರು. ಸುಮಾರು ವರ್ಷಗಳ ಬಳಿಕ ರಮ್ಯಾ ಇದೀಗ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದಾರೆ. ಇದೀಗ ರಮ್ಯಾ ಹಂಚಿಕೊಂಡ ಲೇಟೆಸ್ಟ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಚಂದನವನದ ಮೋಹಕ ತಾರೆ ನಟಿ ರಮ್ಯಾ ಅಭಿ ಸಿನೆಮಾದ ಮೂಲಕ ಆಕೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದು, ಕುತ್ತು ಎಂಬ ತಮಿಳು ಸಿನೆಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟರು. ತಮಿಳಿನಲ್ಲಿ ಈ ಸಿನೆಮಾ ಭರ್ಜರಿಯಾಗಿ ಪ್ರದರ್ಶನಗೊಂಡಿತ್ತು. ಕಾಲಿವುಡ್ ನಲ್ಲಿ ರಮ್ಯಾರವರನ್ನು ಕುತ್ತು ರಮ್ಯಾ ಎಂತಲೇ ಕರೆಯುತ್ತಾರೆ. ನಟಿ ರಮ್ಯಾ ಸಿನಿರಂಗದಲ್ಲಿ ಸಾಲು ಸಾಲು ಹಿಟ್ ಸಿನೆಮಾಗಳಿವೆ. ಎಕ್ಸ್ ಕ್ಯೂಸ್ ಮಿ, ಆಕಾಶ್, ಅರಸು, ಜೊತೆ ಜೊತೆಯಲಿ, ಅಮೃತಧಾರೆ ಸೇರಿದಂತೆ ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿವೆ. ಆಕೆ 2016ರಲ್ಲಿ ತೆರೆಕಂಡ ನಾಗರಹಾವು ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ಆಕೆ ಸುಮಾರು ಆರು ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಇನ್ನೂ ರಾಜಕೀಯಕ್ಕೆ ತೆರೆಳಿದ ಬಳಿಕ ರಮ್ಯಾ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಂಡರು. ಅದು ಸಿನೆಮಾ ಕಾರ್ಯಕ್ರಮವಾಗಿರಲಿ ಅಥವಾ ರಾಜಕೀಯ ಕಾರ್ಯಕ್ರಮವಿರಲಿ ಆಕೆ ಸೀರೆಯಲ್ಲೇ ಮಿಂಚುತ್ತಿದ್ದರು.

ಇನ್ನೂ ರಮ್ಯಾ ಇದೀಗ ವಿದೇಶಿ ಪ್ರವಾಸದಲ್ಲಿದ್ದಾರೆ. ಸುಮಾರು ದಿನಗಳಿಂದ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರಮ್ಯಾ ಇದೀಗ ಲಾಂಗ್ ಶರ್ಟ್ ಧರಿಸಿ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಯೂರೋಪ್ ಪ್ರವಾಸದಲ್ಲಿರುವ ರಮ್ಯಾ ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಆಕೆ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಪೊಟೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಈ ಪೊಟೋಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನೆಮಾದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಈ ಸಿನೆಮಾ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದೆ. ಇದರ ಜೊತೆಗೆ ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಶುರುವಾಗಿಲ್ಲ. ಸದ್ಯ ರಮ್ಯಾ ಹಂಚಿಕೊಂಡ ಪೊಟೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Most Popular

To Top