Film News

ಸ್ಟಾರ್ ನಟಿ ಸಮಂತಾರನ್ನು ಸೈಡ್ ಮಾಡಿದ್ರಾ ಕನ್ನಡದ ನಟಿ ಶ್ರೀಲೀಲಾ? ಆ ಸಿನೆಮಾದಲ್ಲಿ ಸಮಂತಾ ಬದಲಿಗೆ ಶ್ರೀಲೀಲಾ?

ಸದ್ಯ ಸಿನಿರಂಗದಲ್ಲಿ ಸಮಂತಾ ಹೆಸರು ಜೋರಾಗಿಯೇ ಕೇಳಿಬರುತ್ತಿದೆ. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ಒಳ್ಳೆಯ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡರು. ಅದರಲ್ಲೂ ಪುಷ್ಪಾ ಸಿನೆಮಾದ ಸ್ಪೇಷಲ್ ಸಾಂಗ್ ಆಕೆಗೆ ಮತಷ್ಟು ಹೆಸರು ತಂದುಕೊಟ್ಟಿತ್ತು. ಆದರೆ ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದರು. ಇದೀಗ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕೇಳಿಬರುತ್ತಿರುವ ರೂಮರ್‍ ಪ್ರಕಾರ ಸಮಂತಾ ನಟಿಸಬೇಕಿದ್ದ ಸಿನೆಮಾದಲ್ಲಿ ಆಕೆಯ ಬದಲಿಗೆ ಕನ್ನಡದ ನಟಿ ಶ್ರೀಲೀಲಾ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳಿಂದ ಸೌತ್ ಸ್ಟಾರ್‍ ನಟಿ ಸಮಂತಾ ಹಾಲಿವುಡ್ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಚೆನೈ ಸ್ಟೋರಿ ಎಂಬ ಸಿನೆಮಾದ ಮೂಲಕ ಆಕೆ ಇಂಗ್ಲೀಷ್ ಸಿನೆಮಾಗಳಿಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಸಿನೆಮಾದಲ್ಲಿ ವಿವೇಕ್ ಕಾಲರಾ ಎಂಬ ಯಂಗ್ ನಟ ಸಮಂತಾ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿನೆಮಾ ಆಗಿದೆ. ಈ ಸಿನೆಮಾವನ್ನು ಫಿಲಿಪ್ ಜಾನ್ ಎಂಬ ನಿರ್ದೇಶನ ನಿರ್ದೇಶಿಸಲಿದ್ದಾರೆ. ಈ ಸಿನೆಮಾದಲ್ಲಿ ಚೆನೈ ಮೂಲದ ಹುಡುಗಿಯಾಗಿ ಸಮಂತಾ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಜೊರಾಗಿಯೇ ಕೇಳಿಬರುತ್ತಿದೆ. ಆದರೆ ಇದೀಗ ಮತ್ತೊಂದು ಟ್ವಿಸ್ಟ್ ಕೇಳಿಬರುತ್ತಿದೆ.

ಚೆನೈ ಲವ್ ಸ್ಟೋರಿ ಸಿನೆಮಾದಿಂದ ಸಮಂತಾ ಬದಲಿಗೆ ಯಂಗ್ ಬ್ಯೂಟಿ ಶ್ರೀಲೀಲಾ ರವರನ್ನು ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿಯೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಚಕ್ಕರ್‍ ಹೊಡೆಯುತ್ತಿದೆ. ಸಮಂತಾ ರನ್ನು ಸೈಡ್ ಟ್ರಾಕ್ ಮಾಡಿ ಶ್ರೀಲೀಲಾ ಆಫರ್‍ ಪಡೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾತ್ರ ಇಲ್ಲ ಆದರೆ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಈ ಸುದ್ದಿಯನ್ನು ಕೇಳಿದ ಅನೇಕರು ಸಮಂತಾಗೆ ಹಾಲಿವುಡ್ ಅವಕಾಶ ಮಿಸ್ ಆಯ್ತು ಎಂಬ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೆ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.

ಇನ್ನೂ ಟಾಲಿವುಡ್ ಸಿನಿರಂಗದಲ್ಲಿ ಕನ್ನಡದ ನಟಿಯರ ಹವಾ ಜೋರಾಗಿಯೇ ಇದೆ. ಕನ್ನಡದ ನಟಿ ಶ್ರೀಲೀಲಾ ಸದ್ಯ ತೆಲುಗಿನಲ್ಲಿ ಸ್ಟಾರ್‍ ನಟಿಯಾಗಿದ್ದಾರೆ. ಆಕೆ ತೆಲುಗಿಗೆ ಎಂಟ್ರಿ ಕೊಟ್ಟ ಎರಡೇ ವರ್ಷಗಳಲ್ಲಿ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಹತ್ತಕ್ಕೂ ಹೆಚ್ಚು ಸಿನೆಮಾಗಳಿವೆ ಎನ್ನಲಾಗಿದೆ. SSMB28, ಉಸ್ತಾದ್ ಭಗತ್ ಸಿಂಗ್, NBK108 ಸೇರಿದಂತೆ ಹಲವು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದು, ಸಮಂತಾ ಆಫರ್‍ ಆಕೆ ದಕ್ಕಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ ಎಂಬ ಅಭಿಪ್ರಾಯಗಳೂ ಸಹ ಕೇಳಿಬರುತ್ತಿವೆ.

Most Popular

To Top