ಪಿಂಕ್ ಸೀರೆಯಲ್ಲಿ ನೆಹಾ ಶೆಟ್ಟಿ ಸ್ಟನ್ನಿಂಗ್ ಪೋಸ್, ಬ್ಯೂಟಿಪುಲ್ ಲುಕ್ಸ್ ನೊಂದಿಗೆ ಮಸ್ಮರೈಜ್ ಮಾಡಿದ ಬ್ಯೂಟಿ…..!

Follow Us :

ಚಂದನವನದ ನಟಿ ನೇಹಾ ಶೆಟ್ಟಿ ಸಿನಿರಂಗದಲ್ಲಿ ಎಂಟ್ರಿ ಕೊಟ್ಟು ಬಿಗ್ ಬ್ರೇಕ್ ನೀಡುವ ಸಿನೆಮಾಗಾಗಿ ಕಾಯುತ್ತಿದ್ದರು. ಆಗ ಆಕೆಗೆ ಅದೃಷ್ಟ ತಂದುಕೊಟ್ಟಿದ್ದು ಮಾತ್ರ ತೆಲುಗಿನ ಡಿ.ಜೆ. ಟಿಲ್ಲು ಸಿನೆಮಾ ಎನ್ನಲಾಗುತ್ತಿದೆ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದ್ದು, ನೇಹಾ ಶೆಟ್ಟಿ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಪಿಂಕ್ ಕಲರ್‍ ಸೀರೆಯಲ್ಲಿ ಟ್ರೆಡಿಷನಲ್ ಲುಕ್ಸ್ ಕೊಟ್ಟಿದ್ದಾರೆ. ಟ್ರೆಡಿಷನಲ್ ವೇರ್‍ ನಲ್ಲೂ ಸಹ ಬ್ಯೂಟಿಪುಲ್ ಅಂಡ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಯಂಗ್ ಬ್ಯೂಟಿ ನೇಹಾ ಶೆಟ್ಟಿ ಕನ್ನಡದ ಮುಂಗಾರು ಮಳೆ-2 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆಕೆ ನಟಿಸಿದ್ದು ಬೆರಳೆಣಿಗೆ ಸಿನೆಮಾಗಳಲ್ಲಿ ಮಾತ್ರ. ಆದರೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಮೆಹಬೂಬ, ಗಲ್ಲಿ ರೌಡಿ, ಡಿಜೆ ಟಿಲ್ಲು ಮೊದಲಾದ ಸಿನೆಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ‌ಪ್ರದರ್ಶನ ಮಾಡಿ ಯುವಜನತೆಯ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಡಿಜೆ ಟಿಲ್ಲು ಸಿನೆಮಾ ಆಕೆಗೆ ಬಿಗ್ ಬ್ರೇಕ್ ನೀಡಿದ ಸಿನೆಮಾ ಎಂದೇ ಹೇಳಬಹುದಾಗಿದೆ. ಈ ಸಿನೆಮಾದ ಮೂಲಕ ಅನೇಕ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಡಿಜೆ ಟಿಲ್ಲು ಸಿನೆಮಾದಲ್ಲಿ ನಟಿ ನೆಹಾಶೆಟ್ಟಿ ಹೆಚ್ಚಾಗಿ ಸೀರೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ತಮ್ಮ ಸೌಂದರ್ಯವನ್ನು ಮುಚ್ಚಿಡದೇ ಪ್ರದರ್ಶನ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಪ್ರದರ್ಶನ ಮಾಡಬೇಕೊ ಅಷ್ಟರ ಮಟ್ಟಿಗೆ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ.

ಇನ್ನೂ ನಟಿ ನೇಹಾ ಶೆಟ್ಟಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಆಕೆಯ ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕ ಸಹ ಸಖತ್ ಸದ್ದು ಮಾಡುತ್ತಿರುತ್ತಾರೆ. ಟ್ರೆಂಡಿ, ಟ್ರೆಡಿಷನಲ್ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಪಿಂಕ್ ಕಲರ್‍ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ಕಾಣಿಸಿಕೊಂಡರು ಆಕೆ ಮಾದಕತೆಯನ್ನು ತೋರಿದ್ದಾರೆ. ಸೀರೆಯಲ್ಲಿ ಮೈಮರೆಸುವಂತಹ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಅದರಲ್ಲೂ ಮತ್ತೇರಿಸುವ ನೋಟದ ಮೂಲಕ ಯುವಕರ ಹೃದಯ ಕದ್ದಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕಾಮೆಂಟ್ ಗಳು, ಲೈಕ್ ಗಳು ಹರಿದು ಬರುತ್ತಿವೆ.

ಸದ್ಯ ನೇಹಾ ಶೆಟ್ಟಿ ಬೆದುರುಲಂಕ 2012 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ತೆಲುಗು ನಟ ಕಾರ್ತಿಕೇಯ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಆಕೆ ರೂಲ್ಸ್ ರಂಜನ್ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾಗಳ ಆಕೆಗೆ ಯಾವ ರೀತಿಯಲ್ಲಿ ಸಕ್ಸಸ್ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.