ನನಗೆ ನನ್ನ ತಂದೆಯೇ ವಿಲನ್, ಅರ್ಥರಾತ್ರಿ ಮನೆಯಿಂದ ಹೊರ ಹಾಕಿಸಿದ್ರು ಎಂದ ನಟಿ ವನಿತಾ…..!

Follow Us :

ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುವಂತಹ ಅನೇಕ ಕಲಾವಿದರ ತಮ್ಮ ನಿಜಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಅನೇಕ ನೋವುಗಳೂ ಸಹ ಅವರ ಜೀವನದಲ್ಲಿ ನಡೆದಿರುತ್ತವೆ. ಆದರೆ ಅವರು ಅನುಭವಿಸಿದಂತಹ ಕಹಿ ಘಟನೆಗಳ ಬಗ್ಗೆ ಕೆಲವೊಮ್ಮೆ ಹೊರಹಾಕುತ್ತಿರುತ್ತಾರೆ. ಈ ಹಾದಿಯಲ್ಲೇ ಸೌತ್ ಸಿನಿರಂಗದ ಸೀನಿಯರ್‍ ನಟಿ ವನಿತಾ ತಮ್ಮ ಜೀವನದಲ್ಲಿನ ಕೆಲವೊಂದು ಕಹಿ ಘಟನೆಗಳ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ. ತನ್ನ ಜೀವನದಲ್ಲಿ ತನಗೆ ವಿಲನ್ ತನ್ನ ತಂದೆ ಎಂದು ಹೇಳಿದ್ದಾರೆ. ಆಕೆಯ ಈ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದ ಖ್ಯಾತ ವಿಜಯ್ ಕುಮಾರ್‍ ಹಾಗೂ ಮಂಜುಳ ದಂಪತಿಯ ಹಿರಿಯ ಪುತ್ರಿಯಾದ ವನಿತಾ ಕಳೆದ 1999 ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ದೇವಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡಿತ್ತು. ಆದರೆ ಈ ಸಿನೆಮಾದ ಬಳಿಕ ಆಕೆ ಬೇರೆ ಯಾವುದೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡಿಲ್ಲ. ದೇವಿ ಸಿನೆಮಾದ ಬಳಿಕ ಆಕೆ ತಮಿಳಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೂ ಸಹ ಆಕೆ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ದೂರವೇ ಇದ್ದ ವನಿತಾ ಇದೀಗ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ತಂದೆಯೊಂದಿಗೆ ವಿವಾದ, ಬಿಗ್ ಬಾಸ್, ಸಹ ನಟಿಯರೊಂದಿಗೆ ಗಲಾಟೆ ಹೀಗೆ ಒಂದಲ್ಲ ಒಂದು ಕಾರಣದಿಂದ ಆಕೆ ವಿವಾದಗಳಿಗೆ ಎಡೆ ಮಾಡಿಕೊಡುತ್ತಿದ್ದಾರೆ.

ಸುಮಾರು ವರ್ಷಗಳ ಬಳಿಕ ವನಿತಾ ವಿಜಯ್ ಕುಮಾರ್‍ ಮಳ್ಳಿ ಪೆಳ್ಳಿ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ನರೇಶ್ ಹಾಗೂ ಪವಿತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನೆಮಾದಲ್ಲಿ ವನಿತಾ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವನಿತಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಹೆಣ್ಣಿಗೆ ತಂದೆ ಹಿರೋ ಆಗಿರುತ್ತಾರೆ. ಅಂತಹುದರಲ್ಲಿ ನನಗೆ ನನ್ನ ತಂದದೆಯೇ ವಿಲನ್ ಎಂದು ಹೇಳಲಾರೆ. ಆದರೆ ಆತ ನನ್ನ ಬಗ್ಗೆ ಕಾಳಜಿ ತೋರಿಸಲಿಲ್ಲ. ಬದಲಿಗೆ ತುಂಬಾ ಕಠಿಣವಾಗಿ ನಡೆದುಕೊಂಡಿದ್ದಾರೆ. ನನಗೂ ನಮ್ಮ ತಂದೆಯ ನಡುವೆ ಆಸ್ತಿಗೆ ಸಂಬಂಧಿಸಿದ ಗಲಾಟೆಗಳಿವೆ. ಆ ವಿಚಾರಕ್ಕಾಗಿ ಪೊಲೀಸರ ಸಹಾಯದೊಂದಿಗೆ ನನ್ನನ್ನು ಮನೆಯಿಂದ ಹೊರಹಾಕಿದರು. ಅಂದು ಎಲ್ಲಿ ಹೋಗಬೇಕು ಎಂಬುದು ತಿಳಿಯದೇ ನಡು ರಸ್ತೆಯಲ್ಲಿ ಇರಬೇಕಾಯ್ತು ಎಂದಿದ್ದಾರೆ.

ಇನ್ನೂ ಅಂದಿನ ಸರ್ಕಾರದ ಸಹಾಯದಿಂದ ಅವರು ಆ ರೀತಿ ಮಾಡಿದರು. ಆದರೆ ಈಗಿನವರು ಆ ಮಾದರಿ ಮಾಡಲು ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾನು ನನ್ನ ಮಕ್ಕಳೊಂದಿಗೆ ಮೈಸೂರಿಗೆ ಹೋಗಿದೆ. ನೀನು ಇನ್ನು ಮುಂದೆ ತಮಿಳುನಾಡಿನಲ್ಲಿ ಕಾಲಿಡಲು ಆಗುವುದಿಲ್ಲ ಎಂದು ನಮ್ಮ ತಂದೆ ಚಾಲೆಂಜ್ ಮಾಡಿದ್ದರು. ಇದೀಗ ನಾನು ಅಲ್ಲೇ ಭರ್ಜರಿಯಾಗಿ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.