ಬಸ್ ನಲ್ಲಿ ಸೀಟಿಲ್ಲದೇ ಮಗುವನ್ನು ಲಗೇಜ್ ಹಾಕುವ ಜಾಗದಲ್ಲಿ ಮಲಗಿಸಿದ ತಾಯಿ, ವೈರಲ್ ಆದ ವಿಡಿಯೋ……!

ಉದ್ಯೋಗ ಹರಸಿ ಬೇರೆ ಊರುಗಳಲ್ಲಿ ಹೋದವರು ಹಬ್ಬ ಹರಿದಿನಗಳಂದು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿರುತ್ತಾರೆ. ಇದೀಗ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಹಿಂದೆ-ಹಿಂದೆ ಬಂದಿದ್ದು, ಜನರು ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಈ ಕಾರಣದಿಂದ  ಬಸ್ ಗಳೂ ಸಹ ಪುಲ್ ರಶ್ ಆಗಿ, ಪ್ರಯಾಣಿಕರಿಗೆ ಸೀಟುಗಳು ಸಿಗದೇ ಪರದಾಡುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಬಸ್ ನಲ್ಲಿ ಸೀಟಿಲ್ಲದ ಕಾರಣ ತನ್ನ ಮಗುವನ್ನು ಲಗೇಜ್ ಕ್ಯಾರಿಯರ್‍ ನಲ್ಲಿ ಮಲಗಿಸಿದ್ದಾಳೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು-ಕಲರ್ಬುಗಿ ಮಾರ್ಗದಲ್ಲಿ ತೆರಳುತ್ತಿದ್ದ ಬಸ್ ತುಂಬಾ ಪ್ರಯಾಣಿಕರು ತುಂಬಿದ್ದರು. ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸೀಟ್ ಇಲ್ಲದ ಕಾರಣ ತನ್ನ ಮಗುವನ್ನು ಲಗೇಜ್ ಇಡುವ ಜಾಗದಲ್ಲಿ ಮಲಗಿಸಿದ್ದಾಳೆ. ರಾಜ್ಯದಲ್ಲಿ ಶಕ್ತಿ ಯೋಜನೆ ಸಹ ಜಾರಿಯಲ್ಲಿದ್ದು, ಇದರಿಂದ ಬಹುತೇಕ ಸರ್ಕಾರಿ ಬಸ್ ಗಳು ಪುಲ್ ರಶ್ ಆಗಿದೆ. ಹೊರಗೆ ಬೇರೆ ಸುಡು ಬಿಸಿಲು ಇದರಿಂದ ಉಸಿರಾಡಲು ತುಂಬಾ ಕಷ್ಟಕರವಾಗಿದೆ. ಇದರ ಜೊತೆಗೆ ಬಸ್ ನಲ್ಲಿ ಒಬ್ಬರನ್ನೊಬ್ಬರು ತಳ್ಳಾಡುತ್ತಾ ನಿಂತುಕೊಂಡು ಪ್ರಯಾಣಿಸಬೇಕಿದೆ.

ಲಿಂಗಸಗೂರು-ಕಲರ್ಬುಗಿ ಮಾರ್ಗದಲ್ಲಿ  ಚಲಿಸುತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡು ಪ್ರಯಾಣಿಸುವುದು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಲಗೇಜ್ ಇಡುವ ಕ್ಯಾರಿಯರ್‍ ನಲ್ಲಿ ಮಲಗಿಸಿದ್ದಾಳೆ. ಇನ್ನೂ ಮಹಿಳೆಯ ಈ ಪ್ಲಾನ್ ನೋಡಿ ಸಹ ಪ್ರಯಾಣಿಕರು ಶಾಕ್ ಆಗಿದ್ದಾರೆ. ಬಸ್ ನಲ್ಲಿದ್ದ ಓರ್ವ ತನ್ನ ಮೊಬೈಲ್ ಮೂಲಕ ವಿಡಿಯೋ ಮಾಡಿಕೊಂಡಿದ್ದು, ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಪ್ರತಿಕ್ರಿಯೆಗಳು ಹರಿದುಬರುತ್ತಿವೆ.