News

ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ಮೇಲೆ ಹಲ್ಲೆ ಮಾಡಿದ ಗಂಡ, ವೈರಲ್ ಆದ ವಿಡಿಯೋ, ಇದು ಅಸಲೀ ವಿಡಿಯೋನಾ?

ಇತ್ತಿಚಿಗಷ್ಟೆ ಪಬ್ ಜಿ ಆಟದ ಮೂಲಕ ಪರಿಚಯವಾದ ಪಾಕಿಸ್ತಾನ ಮೂಲದ ಸೀಮಾ ಹೈದರ್‍ ಹಾಗೂ ಭಾರತದ ಸಚಿನ್ ರವರ ಲವ್ ಸ್ಟೋರಿ ತುಂಬಾನೆ ಸದ್ದು ಮಾಡುತ್ತಿದೆ. ತನ್ನ ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್‍ ಹಾಗೂ ಸಚಿನ್ ಮದುವೆಯಾಗಿದ್ದಾರೆ. ಈ ಜೋಡಿಯ ಕಿರುತ ಸಿನೆಮಾ ಒಂದು ಸಹ ಸೆಟ್ಟೇರಿದೆ. ಇದೀಗ ಸೀಮಾ ಹೈದರ್‍ ಮೇಲೆ ಆಕೆಯ ಪತಿ ಹಲ್ಲೆ ಮಾಡಿದ್ದಾನೆ ಎಂಬ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋ ಅಸಲೀ ಅಲ್ಲ ಇದೊಂದು ಡೀಫ್ ಫೇಕ್ ವಿಡಿಯೋ ಎಂದು ಹೇಳಲಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಸೀಮಾ ಹೈದರ್‍ ರವರ ಕಣ್ಣುಗಳು ಊದಿಕೊಂಡಿದೆ, ಒಡೆದಿರುವಂತ ತುಟಿಗಳ ದೃಶ್ಯವಿದೆ. ಆದರೆ ಇದು ಡೀಫ್ ಫೇಕ್ ವಿಡಿಯೋ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಹಾಗೂ ರಾಜಕೀಯ ನಾಯಕರ ಡೀಪ್ ಫೇಕ್ ವಿಡಿಯೋ ಭಾರಿ ಸದ್ದು ಮಾಡಿತ್ತು. ಇದೀಗ ಸೀಮಾ ಹೈದರ್‍ ಡೀಫ್ ಫೇಕ್ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸೀಮಾ ಹೈದರ್‍ ಊದಿಕೊಂಡಿರುವ ಕಣ್ಣುಗಳನ್ನು ತೋರಿಸಿದ್ದಾಳೆ. ಹಲ್ಲೆ ಮಾಡಿದ ಕಾರಣದಿಂದ ಒಡೆದಿರುವ ತುಟಿಗಳನ್ನು ತೋರಿಸಿದ್ದಾಳೆ. ಬಲಭಾಗದ ಕಣ್ಣಿನ ಭಾಗ ಸಹ ಊದಿಕೊಂಡಿದೆ. ರಕ್ತ ಹೆಪ್ಪು ಗಟ್ಟಿದಂತಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದ್ದು, ಇದು ಡೀಫ್ ಫೇಕ್ ವಿಡಿಯೋ ಎನ್ನಲಾಗಿದೆ.

ಡೀಫ್ ಫೇಕ್ ತಂತ್ರಜ್ಞಾನ ಬಳಸಿ ಭಾರತಕ್ಕೆ ಕೆಟ್ಟ ಹೆಸರು ತರಲು ಈ ಕೆಲಸ ಮಾಡಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರೀತಿಯನ್ನು ಬಯಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಮೇಲೆ ಸಚಿನ್ ಹಲ್ಲೆ ಮಾಡಿದ್ದಾನೆ ಎಂಬ ರೂಮರ್‍ ಗಳನ್ನು ಹಬ್ಬಿಸಲಾಗುತ್ತಿದೆ. ಜೊತೆಗೆ ಭಾರತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನ ಮಾಡೋಕೆ ಈ ವಿಡಿಯೋ ಹರಿಬಿಡಲಾಗಿದೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top