ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ತುಂಬಾ ಗೌರವಯುತವಾಗಿದೆ ಎಂದ ತೆಲುಗು ನಟಿ ಶೋಭಿತಾ ಧೂಳಿಪಾಲ….!

ತೆಲುಗು ಮೂಲದ ನಟಿ ಶೋಭಿತಾ ಧೂಳಿಪಾಲ ತೆಲುಗು ಸಿನೆಮಾಗಳಿಗಿಂತ ಬಾಲಿವುಡ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಇಲ್ಲಿಯವರೆಗೂ ತೆಲುಗು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದಂತಹ ನಟಿ ಶೋಭಿತಾ ಇದೀಗ ಹಾಲಿವುಡ್ ಸಿನಿರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ತೆರೆಕಂಡ ಮಂಕಿ ಮ್ಯಾನ್ ಎಂಬ ಸಿನೆಮಾದಲ್ಲಿ ಶೋಭಿತಾ ಪ್ರಮುಖ ಪಾತ್ರವೊದರಲ್ಲಿ ನಟಿಸಿದ್ದರು. ಇದೀಗ ಆಕೆ ಈ ಸಿನೆಮಾದಲ್ಲಿನ ಆಕೆಯ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಯಂಗ್ ನಟಿ ಶೋಭಿತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಕೆಲವು ದಿನಗಳಿಂದ ಶೋಭಿತಾ ರವರ ಹೆಸರು ಮಿಡಿಯಾದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರ ನಡುವೆ ಅಪೈರ್‍ ನಡೆಯುತ್ತಿದೆ ಎಂಬೆಲ್ಲಾ ರೂಮರ್‍ ಗಳು ಹರಿದಾಡುತ್ತಲೇ ಇದೆ. ಆದರೆ ಶೋಭಿತಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗೆ ತೆರೆಕಂಡ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸಿರೀಸ್ ನಲ್ಲಿ ಆಕೆ ಬೆಡ್ ರೂಂ ದೃಶ್ಯಗಳಲ್ಲಿ ನಟಿಸಿ ಮತ್ತಷ್ಟು ಪಾಪ್ಯುಲಾರಿಟಿಯನ್ನು ಪಡೆದುಕೊಂಡರು. ಮಂಕಿ ಮ್ಯಾನ್ ಎಂಬ ಸಿನೆಮಾದ ಮೂಲಕ ಆಕೆ ಹಾಲಿವುಡ್ ಸಿನಿರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾ ದೇವ್ ಪಾಟಿಲ್ ನಿರ್ದೇಶನ ಮಾಡಿದ್ದು, ಏ.5 ರಂದು ಅಮೇರಿಕಾದಲ್ಲಿ ರಿಲೀಸ್ ಆಗಿದ್ದು, ಪಾಸಿಟೀವ್ ರಿವ್ಯೂ ಪಡೆದುಕೊಂಡಿದೆ.

ಮಂಕಿ ಮ್ಯಾನ್ ಸಿನೆಮಾವನ್ನು ಭಾರತದಲ್ಲಿ ಏ.26 ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾದಲ್ಲಿ ಶೋಭಿತಾ ವೇಶ್ಯೇಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿನ ತನ್ನ ಪಾತ್ರದ ಬಗ್ಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಶೋಭಿತಾ ಮಂಕಿ ಮ್ಯಾನ್ ಸಿನೆಮಾದಲ್ಲಿನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಸೀತ ಎಂಬ ವೇಶ್ಯೆಯ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಅಂತಹ ವೈವಿಧ್ಯಮಯವಾದ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ತುಂಬಾನೆ ಗೌರವವಿದೆ. ಜೊತೆಗೆ ಸಿನೆಮಾದಲ್ಲಿನ ನನ್ನ ಪಾತ್ರಕ್ಕೆ ತುಂಬಾನೆ ಪ್ರಧಾನ್ಯತೆಯಿದೆ. ಪ್ರೇಕ್ಷಕರನ್ನು ಪಕ್ಕಾ ರಂಜಿಸುತ್ತದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಿನೆಮಾದ ಮೂಲಕ ದೇವ್ ಪಾಟೀಲ್ ನಿರ್ದೇಶಕರಾಗಿ ಪರಿಚಯವಾಗಿದ್ದಾರೆ. ಈ ಸಿನೆಮಾದ ಬಗ್ಗೆ ಮಾತನಾಡುತ್ತಾ ಶೋಭಿತಾ ಕೇವಲ ಸುಂದರವಾದ ಹಿರೋಯಿನ್ ಮಾತ್ರವಲ್ಲ ಆಕೆ ದೊಡ್ಡ ನಟಿ ಎಂದು ಪ್ರಶಂಸೆ ಮಾಡಿದ್ದರು. ಇನ್ನೂ ಶೋಭಿತಾ ತೆಲುಗು ಮೂಲದ ನಟಿಯಾದರೂ ಹಿಂದಿ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡರು. ಇದೀಗ ಆಕೆ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮಂಕಿ ಮ್ಯಾನ್ ಸಿನೆಮಾದ ಮೂಲಕ ಆಕೆ ಮತಷ್ಟು ಕ್ರೇಜ್ ಬೆಳೆಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.