ಹೆಚ್.ಡಿ.ಕೆ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ, ಕುಮಾರಸ್ವಾಮಿ ಓರ್ವ ನಾಡದ್ರೋಹಿ ಎಂದು ಫೈರ್ ಆದ ಡಿಸಿಎಂ…..!

Follow Us :

ಕರ್ನಾಟದಲ್ಲಿ ಸದ್ಯ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್‍ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. ಸದ್ಯ ಕೇಂದ್ರ ಬಿಜೆಪಿ ಸರ್ಕಾರ ಬರ ಪರಿಹಾರ ಕೊಟ್ಟಿದ್ದು, ಈಗ ಕೊಟ್ಟಿರುವ ಪರಿಹಾರವೇ ಸಾಕು ಬಿಡಿ ಎಂದು ಕುಮಾರಸ್ವಾಮಿ ಹೇಳಿದ್ದು ಈ ಹೇಳಿಕೆಯನ್ನು ವಿರೋಧಿಸಿದ ಡಿಕೆಶಿ ನೀವೊಬ್ಬ ನಾಡದ್ರೋಹಿ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಕೆಶಿ ಕೇಂದ್ರದಿಂದ ಕರ್ನಾಟಕಕ್ಕೆ 3454ಕೋಟಿ ಬರ ಪರಿಹಾರ ಬಂದಿದೆ ಎಂಬ ಪತ್ರ ಬಂದಿದೆ. ಆದರೆ ಆ ಪರಿಹಾರ ಖಾತೆಗೆ ಯಾವಾಗ ಜಮೆ ಆಗುತ್ತೆ ಎಂಬುದು ಗೊತ್ತಿಲ್ಲ ಅವರು ಮಾಡಲಿ ಬಿಡಲಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಆದರೆ ಇದು ರಾಜಕೀಯ ವಿಚಾರವಲ್ಲ. ರಾಜ್ಯಕ್ಕೆ ಆಗುತ್ತಿರುವ ದೊಡ್ಡ ದ್ರೋಹದ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಕೆಲ ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದಾರೆ. ಸಾಕು ಬಿಡಿ ಈಗ ಕೊಟ್ಟಿರೋದು ಅಂತಾ ಹೇಳ್ತಾ ಇದ್ದಾರೆ. ಅದೇನು ಅವರ ಮನೆ ಆಸ್ತಿನಾ, ದೇಶಕ್ಕೆಲ್ಲಾ ಅಂತಹವರು ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಸಾಕು ಬಿಡಿ ಕೊಟ್ಟಿರುವುದು ಎಂದು ಹೇಳಿದ್ದಾರೆಂತೆ ನೀನೊಬ್ಬ ನಾಡದ್ರೋಹಿ ಎಂದು ಕುಮಾರಸ್ವಾಮಿಯವರ ವಿರುದ್ದ ಕಿಡಿಕಾರಿದ್ದಾರೆ. ಸದ್ಯ ಕುಮಾರಸ್ವಾಮಿ ಏನೇನೋ ಮಾತನಾಡುತ್ತಿದ್ದಾರೆ. ಒಂದೇ ದಿನ ಕೈಹಿಡಿದು ಬರೆಸ್ತಾರಂತೆ, ಈ ಕೆಲಸ ಅವರು ಮೊದಲೇ ಮಾಡಬಹುದಿತ್ತಲ್ಲವೇ?  ನಮಗೆ ವೋಟ್ ಕೊಡಿ ನಾವು ಮಾಡಿಸುತ್ತೇವೆ ಎಂದು ಹೇಳ್ತಾ ಇದ್ದಾರೆ. ಅಧಿಕಾರಕ್ಕೆ ಕೊಟ್ಟರೇ ಮಾತ್ರ ಅವರಿಗೆ ರಾಜ್ಯದ ಬಗ್ಗೆ ಕಾಳಜಿ, ಅಧಿಕಾರವಿಲ್ಲದೇ ಇದ್ದರೇ ಅವರಿಗೆ ರಾಜ್ಯದ ಮೇಲೆ ಯಾವುದೇ ರೀತಿಯ ಕಾಳಜಿ ಇರೊಲ್ಲ ಎಂದು ಕೌಂಟರ್‍ ಕೊಟ್ಟಿದ್ದಾರೆ.