News

ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ಆಕೆ ಸರ್ಕಾರದಿಂದ ಬರೊಬ್ಬರಿ 98 ಲಕ್ಷ ಬಾಚಿಕೊಂಡ ಮಹಿಳೆಯ ಬಂಧನ….!

ಇಟಲಿ ದೇಶದಲ್ಲಿನ ಕಾರ್ಮಿಕರ ಕಾನೂನಿನಂತೆ ಹೆರಿಗೆಯಾದ ಮಹಿಳಿಗೆ ಸುಮಾರು 6 ತಿಂಗಳುಗಳ ಕಾಲ ವೇತನ ಸಹಿತ ರಜೆಯನ್ನು ತಾಯಂದಿರಿಗೆ ನೀಡಲಾಗುತ್ತದೆ. ಜೊತೆಗೆ ಆರ್ಥಿಕ ನೆರವು ಸಹ ನೀಡಲಾಗುತ್ತದೆ. ಈ ಕಾನೂನನ್ನು ಸದ್ಬಳಕೆ ಮಾಡಿಕೊಂಡ ಮಹಿಳೆಯೊಬ್ಬಳು ತಾನು 17 ಬಾರಿ ಗರ್ಭಿಣಿಯಾಗಿದ್ದೇನೆಂದು ಸುಳ್ಳು ಹೇಳಿ 98 ಲಕ್ಷ ಪಡೆದುಕೊಂಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಪಂಚದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಇಟಲಿಯ ಬಾರ್ಬರ ಐಯೋಲೆ (50) ಮಹಿಳೆ ಬರೊಬ್ಬರಿ ತಾನು 17 ಬಾರಿ ಸುಳ್ಳು ಹೇಳಿ 98 ಲಕ್ಷಕ್ಕೂ ಅಧಿಕ ಹಣವನ್ನು ಸರ್ಕಾರದಿಂದ ಪಡೆದುಕೊಂಡಿದ್ದಾಳೆ. ಇಟಲಿಯಲ್ಲಿ ಕಾರ್ಮಿಕ ಕಾನೂನಿನಂತೆ ಹೆರಿಗೆಯಾದ ದಿನದಿಂದ 6 ತಿಂಗಳುಗಳ ಕಾಲ ವೇತನ ಸಹಿತ ರಜೆಯ ಜೊತೆಗೆ ಸರ್ಕಾರದಿಂದಲೂ ಆರ್ಥಿಕ ನೆರವು ನೀಡಲಾಗುತ್ತದೆ. ಈ ಕಾನೂನನ್ನು ಬಾರ್ಬರಾ ಐಯೋಲೆ ದುರುಪಯೋಗ ಮಾಡಿಕೊಂಡಿದ್ದಾರೆ. ತಾನು 24 ವರ್ಷಗಳಿಂದ ಗರ್ಭಿಣಿಯೆಂದು ನಾಟವಾಡುತ್ತಾ ಬಂದಿದ್ದಾಳೆ.  ಇಲ್ಲಿಯವರೆಗೆ ತಾನು ಐದು ಮಕ್ಕಳಿಗೆ ಜನ್ಮ ನೀಡಿದ್ದಾಗಿ ಹಾಗೂ 12 ಬಾರಿ ಗರ್ಭಪಾತಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾಳೆ. ಕಾನೂನಿನಂತೆ 98 ಲಕ್ಷಕ್ಕೂ ಹೆಚ್ಚು ಸರ್ಕಾರಿ ಪ್ರಯೋಜನ ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಪ್ರತಿ ಬಾರಿ 6 ತಿಂಗಳು ಕೆಲಸಕ್ಕೆ ಹೋಗದೇ ಆರಾಮಾದ ಜೀವನ ಸಾಗಿಸಿದ್ದಾರೆ.

ಇನ್ನೂ ಆಕೆ ಗರ್ಭಧಾರಣೆಯಾಗಿದೆ ಎಂದು ಕಂಪನಿಯಿಂದ ರಜೆ ಹಾಗೂ ಸರ್ಕಾರದಿಂದ ಸಿಗುವ ಹಣವನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾಗ ಮೇಲಾಧಿಕಾರಿಗಳಿಗೆ ಅನುಮಾನ ಬಂದಿದೆ. ಈ ಕುರಿತು ತನಿಖೆ ನಡೆಸಿದಾಗ ಮಹಿಳೆಯ ಅಸಲೀ ಸ್ವರೂಪ ಬಯಲಾಗಿದೆ. ಆಕೆ ಗರ್ಭಿಣಿ ಎಂದು ನಂಬಿಸಲು ಹೊಟ್ಟೆಗೆ ದಿಂಬುಗಳನ್ನು ಬಳಸಿಕೊಳ್ಳುತ್ತಿದ್ದರು. ಅಷ್ಟೇಅಲ್ಲದೇ ಗರ್ಭಧಾರಣೆ ಹಾಗೂ ಹೆರಿಗೆಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸಹ ಸೃಷ್ಟಿಸಿದ್ದಾರೆ. ತಾನು ಗರ್ಭಿಣಿಯಂತೆ ನಟಿಸಿದ್ದಾಳೆ ಎಂದು ಆಕೆಯ ಪತಿ ಡೇವಿಡ್ ಪಿಜ್ಜಿನಾಟೋ ಸಹ ಆಕೆಯ ವಿರುದ್ದ ಸಾಕ್ಷಿ ಹೇಳಿದ್ದಾನೆ. ಬಾರ್ಬರ ಐಯೋಲೆ ತಪ್ಪು ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಗೆ ಕಾನೂನಿನಂತೆ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Most Popular

To Top