ಡಿಜೆ ಟಿಲ್ಲು ಹಾಡಿಗೆ ಕ್ರಿಕೆಟ್ ಮೈದಾನದಲ್ಲಿ ಸ್ಟೆಪ್ಸ್ ಹಾಕಿದ ಕೊಹ್ಲಿ, ವೈರಲ್ ಆದ ವಿಡಿಯೋ….!

Follow Us :

ಟೀಂ ಇಂಡಿಯಾ ಸ್ಟಾರ್‍ ವಿರಾಟ್ ಕೊಹ್ಲಿ ಸ್ಟಾರ್‍ ನಟರಿಗಿಂತ ಕಡಿಮೆಯಿಲ್ಲ ಎಂಬಂತೆ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ.  ಆತ ಕ್ರಿಕೆಟ್ ಗ್ರೌಂಡ್ ನಲ್ಲಿದ್ದರೇ ಅಭಿಮಾನಿಗಳು ಪುಲ್ ಖುಷಿಯಲ್ಲಿರುತ್ತಾರೆ. ಬ್ಯಾಟಿಂಗ್ ನಲ್ಲಿ ಅವರ ಸ್ಟೈಲ್, ಶಾಟ್ಸ್, ಮಾಸ್ ಆಟಿಟ್ಯೂಡ್ ಕ್ರಿಕೆಟ್ ಅಭಿಮಾನಿಗಳನ್ನು ಫಿದಾ ಮಾಡುತ್ತವೆ. ಜೊತೆಗೆ ಅವರು ಫೀಲ್ಡಿಂಗ್ ಸ್ಟೈಲ್ ಅನೇಕರನ್ನು ಆಕರ್ಷಣೆ ಮಾಡುತ್ತದೆ. ಫಿಲ್ಡಿಂಗ್ ಸಮಯದಲ್ಲೂ ಸಹ ಕೊಹ್ಲಿ ಸುಮ್ಮನೆ ಇರುವುದಿಲ್ಲ. ತನ್ನದೇ ಆದ ಸ್ಟೈಲ್ ನಲ್ಲಿ ಪ್ಯಾಪುಲರ್‍ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಾರೆ. ಇದೀಗ ಡಿಜೆ ಟಿಲ್ಲು ಹಾಡಿಗೆ ಸ್ಟೆಪ್ಸ್ ಹಾಕಿದ್ದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕ್ರಿಕೆಟ್ ಗ್ರೌಂಡ್ ನಲ್ಲಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಲೇ ಟ್ರೆಂಡಿಂಗ್ ನಲ್ಲಿರುವ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾರೆ. ಈ ಹಿಂದೆ ಬಾರ್ಡರ್‍ ಗವಾಸ್ಕರ್‍ ಟೆಸ್ಟ್ ಸೀರಿಸ್ ಸಮಯದಲ್ಲಿ ಅಲ್ ರೌಂಡರ್‍ ರವಿಂದ್ರ ಜಡೇಜಾ ಜೊತೆಗೆ ಬ್ಲಾಕ್ ಬ್ಲಸ್ಟರ್‍ ಪಠಾನ್ ಸಿನೆಮಾದ ಹಾಡಿಗೆ ಸ್ಟೆಪ್ಸ್ ಹಾಕಿ ಎಲ್ಲರನ್ನೂ ರಂಜಿಸಿದ್ದರು. ಕ್ರಿಕೆಟ್ ಜೊತೆಗೆ ಸಿನೆಮಾ ಹಾಡಿಗೂ ಸಹ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ಜೊತೆಗೆ ಆಸ್ಟ್ರೇಲಿಯಾದ ಜೊತೆಗೆ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒನ್ ಡೇ ಮ್ಯಾಚ್ ನಲ್ಲಿ ಆಸ್ಕಾರ್‍ ಅವಾರ್ಡ್ ಪಡೆದುಕೊಂಡ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿ ಎಲ್ಲರನ್ನೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಇದೀಗ ಕಳೆದ ಏ.25 ರಂದು ಹೈದರಾಬಾದ್ ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಸನ್ ರೈಜರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯಾವಳಿಯ ವೇಲೆ ಅವರು ಡಿಜೆ ಟಿಲ್ಲು ಸಿನೆಮಾದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಹೈದರಾಬಾದ್ ನ ಉಪ್ಪಲ್ ಸ್ಟೇಡಿಯಂ ನಲ್ಲಿ ಡಿಜೆ ಟಿಲ್ಲು ಹಾಡು ಪ್ಲೇ ಮಾಡಲಾಗಿದೆ. ಈ ಸಮಯದಲ್ಲಿ ವಿರಾಟ್ ಕೊಹ್ಲಿ ಫಿಲ್ಡಿಂಗ್ ಮಾಡುತ್ತಿದ್ದರು. ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಮಯದಲ್ಲಿ ಸ್ಟೇಡಿಯಂನಲ್ಲಿದ್ದ ಲೌಡ್ ಸ್ಪೀಕರ್‍ ಗಳಲ್ಲಿ ಡಿಜೆ ಟಿಲ್ಲು ಹಾಡ್ ಪ್ಲೇ ಮಾಡಲಾಗಿತ್ತು. ಈ ಹಾಡು ಪ್ರಸಾರವಾಗುತ್ತಿದ್ದಂತೆ ಕೊಹ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಪ್ಲೇ ಆಗಿದ ಸಮಯದಲ್ಲಿ ಪುಲ್ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಅಭಿಮಾನಿಗಳು ಹಾಗೂ ಟಿಲ್ಲು ಅಭಿಮಾನಿಗಳು ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಾ ವಿಡಿಯೋ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.