ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಸಿಹಿ ಸುದ್ದಿ, ಬಸ್ ನಲ್ಲಿ ತಿರುಪತಿ ಟೂರ್ ಪ್ಯಾಕೇಜ್, ಉಚಿತ ದರ್ಶನದ ಜೊತೆಗೆ ಮತ್ತಷ್ಟು ಸೌಲಭ್ಯ…!

Follow Us :

ದೇಶದ ಶ್ರೀಮಂತ ಹಾಗೂ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಇದೀಗ ತೆಲಂಗಾಣ ಪ್ರವಾಸೋದ್ಯಮ ವತಿಯಿಂದ ಹೊಸ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಸದ್ಯ ಹೈದರಾಬಾದ್ ನಿಂದ ಮಾತ್ರ ಲಭ್ಯವಿದೆ. ಯಾದಗಿರಿ, ಗುಲ್ಬರ್ಗಾ, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದಿಂದ ತಿರುಪತಿಗೆ ಹೋಗುವ ಭಕ್ತರಿಗೆ ಈ ಪ್ಯಾಕೇಜ್ ಅನುಕೂಲವಾಗಲಿದೆ. ಈ ಪ್ಯಾಕೇಜ್ ಮೂರು ದಿನಗಳ ಕಾಲ ಇರಲಿದ್ದು, ಈ ಪ್ಯಾಕೇಜ್ ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ತಿರುಮಲ ತಿಮ್ಮಪ್ಪನ ಉತ್ತರ ಕರ್ನಾಟಕ ಭಾಗದ ಭಕ್ತರಿಗೆ ಇದು ಗುಡ್ ನ್ಯೂಸ್ ಆಗಿದೆ. ತೆಲಂಗಾಣ ಪ್ರವಾಸೋದ್ಯಮ ತಿರುಮಲ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಮೂರು ದಿನಗಳ ಕಾಲ ಇರಲಿದೆ. ಮೊದಲ ದಿನದ ಸಂಜೆ ಹೈದರಾಬಾದ್ ನ KPHP, ಸಿಕಿಂದರಾವಾದ್, ಬೇಗಂ ಪೇಟ್ ಹಾಗೂ ಬಶೀರ್‍ ಬಾಗ್ ನಲ್ಲಿ ಪ್ರವಾಸೋದ್ಯಮ ಬಸ್ ಹತ್ತಬೇಕು. ಎರಡನೇ ದಿನ ಈ ಬಸ್ ತಿರುಮಲಕ್ಕೆ ತಲುಪಲಿದೆ. ಬಳಿಕ ಕೆಲ ಸಮಯ ವಿಶ್ರಾಂತಿ ಪಡೆದು ಸ್ಥಳೀಯವಾಗಿರುವ ದೇವಾಲಯಗಳಿಗೆ ಭೇಟಿ ನೀಟಿ ಬಳಿಕ ತಿರುಮಲದಲ್ಲಿರುವ ಶ್ರೀವಾರಿಯ ದರ್ಶನ ಸಹ ಶೀಘ್ರವಾಗಿ ನಡೆಯಲಿದೆ. ದರ್ಶನದ ಬಳಿಕ ಮೂರನೇ ದಿನ ಹೈದರಾಬಾದ್ ಗೆ ವಾಪಸ್ಸು ಆಗಲಿದೆ. ಇನ್ನೂ ಈ ಪ್ಯಾಕೇಜ್ ದರದ ವಿಚಾರಕ್ಕೆ ಬಂದರೇ ವಯಸ್ಕತಿಗೆ 3700 ಮಕ್ಕಳಿಗೆ  2960 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಬಸ್ ಪ್ರಯಾಣದ ಜೊತೆಗೆ ತಿರುಮಲದಲ್ಲಿ ಉಚಿತವಾಗಿ ಹಾಗೂ ಶೀಘ್ರವಾಗಿ ದರ್ಶನ ಮಾಡಿಕೊಳ್ಳಬಹುದಾಗಿದೆ.

ಇನ್ನೂ ವಿಮಾನ ಪ್ಯಾಕೇಜ್ ಸಹ ಲಭ್ಯವಿದೆ. ಬೆಳಿಗ್ಗೆ 6.55ಕ್ಕೆ ಹೈದರಾಬಾದ್ ನ ವಿಮಾನದಲ್ಲಿ ಪ್ರಯಾಣಿಸಿದರೇ ಬೆಳಿಗ್ಗೆ 8 ಗಂಟೆಗೆ ರೇಣಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪುತ್ತದೆ. ಬಳಿಕ ಕಾರಿನಿಂದ ತಿರುಪತಿಯ ಹೋಟೆಲ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಫ್ರೇಶ್ ಆದ ಬಳಿಕ ಕಾರಿನಲ್ಲೇ ತಿರುಮಲಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಎರಡು ಗಂಟೆಯಲ್ಲಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪೂರ್ಣಗೊಳ್ಳಲಿದೆ. ಈ ಪ್ಯಾಕೇಜ್ ಬೆಲೆ 12,999 ರೂಪಾಯಿಯಾಗಿದೆ. ಈ ಪ್ಯಾಕೇಜ್ ನಲ್ಲಿ ವಿಮಾನ ಟಿಕೆಟ್, ಸ್ಥಳೀಯ ಸಾರಿಗೆ, ತಿರುಮಲದಲ್ಲಿ ವಿಶೇಷ ಪ್ರವೇಶ ದರ್ಶನ ಒಳಗೊಂಡಿದೆ. ತಾವು ಈ ಪ್ಯಾಕೇಜ್ ನ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಬುಕ್ ಮಾಡಲು https://tourism.telangana.gov.in/ ಭೇಟಿ ನೀಡಬಹುದಾಗಿದೆ.