News

ನೀರಿನ ಬಕೆಟ್ ನಲ್ಲಿ ಮುಳಗಿ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಸಾವು, ಪೋಷಕರ ನಿರ್ಲಕ್ಷ್ಯಕ್ಕೆ ಮಗು ಬಲಿ…..!

ಮನೆಯಲ್ಲಿ ಪುಟ್ಟ ಮಕ್ಕಳಿರುವಾಗ ಪೋಷಕರು ಎಚ್ಚರಿಕೆಯಿಂದ ಇರುವುದು ತುಂಬಾನೆ ಅಗತ್ಯವಾಗಿದೆ. ಮಕ್ಕಳ ಯಾವ ಸಮಯದಲ್ಲಿ ಏನು ಮಾಡುತ್ತಾರೋ ತಿಳಿದಿರುವುದಿಲ್ಲ. ಮಕ್ಕಳು ಯಾವುದು ಅಪಾಯ ಎಂಬುದರ ಅರಿವು ಇರುವುದಿಲ್ಲ. ಮನೆಯಲ್ಲಿ ಪೋಷಕರ ನಿರ್ಲಕ್ಷ್ಯ ದಿಂದ ಅನೇಕ ಮಕ್ಕಳು ಮೃತಪಟ್ಟಿರುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಅಂತಹುದೇ ಪ್ರಕರಣವೊಂದು ನಡೆದಿದೆ. ತಾಯಿಯ ನಿರ್ಲಕ್ಷ್ಯದ ಕಾರಣದಿಂದ ನೀರು ತುಂಬಿದ್ದ ಬಕೆಟ್ ನಲ್ಲಿ ಒಂದೂವರೆ ವರ್ಷದ ಮಗು ಮುಳುಗಿ ಮೃತಪಟ್ಟಿದೆ.

ಪಂಜಾಬ್ ನ ನಂಗಲ್ ನ ಮೊಹಲ್ಲಾ ಪುರಾನ್ ಗುರುದ್ವಾರ ಎಂಬಲ್ಲಿ ಒಂದೂವರೆ ವರ್ಷದ ಮಗು ನೀರು ತುಂಬಿದ ಬಕೆಟ್ ನಲ್ಲಿ ಮುಳಗಿ ಪ್ರಾಣಬಿಟ್ಟಿದೆ. ಒಂದೂವರೆ ವರ್ಷದ ಮಗು ಆಗಷ್ಟೆ ನಡೆಯಲು ಕಲಿಯುತ್ತಿತ್ತು. ಮನೆಯ ಹಾಲ್ ನಲ್ಲಿ ಆಟ ಆಡುತ್ತಿತ್ತು. ಮಗು ಆಟವಾಡುತ್ತಾ ಬಾತ್ ರೂಂಗೆ ಹೋಗಿದೆ. ಆದರೆ ಇದನ್ನು ಯಾರು ಗಮನಿಸಿಲ್ಲ. ಬಾತ್ ರೂಂನಲ್ಲಿ ನೀರುವ ತುಂಬಿದ ಬಕೆಟ್ ಇದ್ದು, ಈ ಬಕೆಟ್ ನಲ್ಲಿರುವ ನೀರಿನಲ್ಲಿ ಆಟವಾಡಲು ಹೋಗಿದೆ. ಬಕೆಟ್ ತುಂಬಾ ನೀರು ಇರುವ ಕಾರಣದಿಂದ ಮಗು ಉಲ್ಟಾ ಬಿದ್ದಿದ್ದು ಮೃತಪಟ್ಟಿದೆ. ಸ್ವಲ್ಪ ಸಮಯದ ಬಳಿಕ ಮಗು ಬಕೆಟ್ ನಲ್ಲಿ ತಲೆ ಕೆಳಗಾಗಿ ಬಿದ್ದಿರುವುದನ್ನು ಮತ್ತೊಂದು ಮಗು ನೋಡಿದೆ. ಆ ಮಗು ಓಡಿಬಂದು ಮನೆಯವರಿಗೆ ತಿಳಿಸಿದೆ. ಈ ಸಮಯದಲ್ಲಿ ಮಗು ಬಕೆಟ್ ನಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದಿದೆ.

ಇನ್ನೂ ನೀರಿಗೆ ಬಿದ್ದ ಮಗುವನ್ನು ಹೊರತೆಗೆದು ನಾನಾ ರೀತಿಯಲ್ಲಿ ಎಬ್ಬಿಸಲು ಪ್ರಯತ್ನ ಮಾಡಲಾಗಿದೆ. ಏನು ಮಾಡಿದರೂ ಮಗು ಎಚ್ಚರಗೊಂಡಿಲ್ಲ. ಬಳಿಕ ಮಗುವಿನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನೂ ತಮ್ಮ ಮಗು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾವು ಸ್ವಲ್ಪ ಎಚ್ಚರಿಕೆಯಿಂದ ಇದ್ದಿದ್ದರೇ ಈ ರೀತಿಯಾಗುತ್ತಿರಲ್ಲಿಲ್ಲ ಎಂದು ಕಣ್ಣಿರಾಕಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ಪುಟ್ಟ ಮಕ್ಕಳಿರುವ ಮನೆಗಳಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ.

Most Popular

To Top