Film News

ನಯನತಾರಾ ಸಿನೆಮಾದ ಕಟೌಟ್ ಬಗ್ಗೆ ಸಮಂತಾ ಹೇಳಿದ್ದು ಏನು, ಇಂಟ್ರಸ್ಟಿಂಗ್ ಕಾಮೆಂಟ್ ವೈರಲ್…!

ಸಿನಿರಂಗದಲ್ಲಿ ಇದೀಗ ಸ್ಟಾರ್‍ ನಟರಂತೆ ನಟಿಯರೂ ಸಹ ಅದೇ ರೇಂಜ್ ನಲ್ಲಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ ಜೊತೆಗೆ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಲೇಡಿ ಓರಿಯೆಂಟೆಂಡ್ ಸಿನೆಮಾಗಳ ಮೂಲಕ ಅನೇಕ ನಟಿಯರು ಸ್ಟಾರ್‍ ನಟರಂತೆ ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಸಮಂತಾ, ನಯನತಾರಾ, ಅನುಷ್ಕಾ ರವಂತಹ ಸ್ಟಾರ್‍ ನಟಿಯರು ಲೇಡಿ ಓರಿಯೆಂಟೆಂಡ್ ಸಿನೆಮಾಗಳ ಮೂಲಕ ಮತಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ ಜೊತೆಗೆ ಅದೇ ರೇಂಜ್ ನಲ್ಲೇ ಕಲೆಕ್ಷನ್ ಸಹ ಮಾಡುತ್ತಿವೆ.

ಸೌತ್ ಸಿನಿರಂಗದಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂತಲೇ ಖ್ಯಾತಿ ಪಡೆದುಕೊಂಡ ನಟಿ ನಯನತಾರಾ ಇತ್ತಿಚಿಗೆ ಬಹಳಷ್ಟು ಲೇಡಿ ಓರಿಯೆಂಟೆಂಡ್ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇತ್ತಿಚಿಗೆ ಆಕೆ ನಟಿಸಿದ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಇತ್ತೀಚಿಗಷ್ಟೆ ಕನೆಕ್ಟ್ ಎಂಬ ಹಾರರ್‍ ಸಿನೆಮಾದ ಮೂಲಕ ತೆರೆಗೆ ಬಂದಿದ್ದರು. ಆದರೆ ಈ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ವಿಫಲವಾದರೂ ಸಹ ನಯನತಾರಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಒಬ್ಬರು ನಯನತಾರಾ ಕನೆಕ್ಟ್ ಸಿನೆಮಾಗಾಗಿ ಭಾರಿ ಬ್ಯಾನರ್ಸ್ ಹಾಗೂ ಕಟೌಟ್ ಗಳನ್ನು ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ಸಮಂತಾ ಆಸಕ್ತಿಕರವಾದ ಕಾಮೆಂಟ್ಸ್ ಮಾಡಿದ್ದಾರೆ.

ಒಬ್ಬ ನಟಿಯ ಸಿನೆಮಾಗೆ ಈ ಮಟ್ಟಿಗೆ ದೊಡ್ಡ ದೊಡ್ಡ ಹೋರ್ಡಿಂಗ್ಸ್ ಮಾಡಿದ್ದು ಸಮಂತಾ ರವರನ್ನು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷದ ಹಿಂದೆ ಇಂತಹ ಸ್ಥಿತಿಗಳಿರಲಿಲ್ಲ. ಆದರೆ ಇದೀಗ ಸ್ಟಾರ್‍ ನಟರಂತೆ ನಟಿಯರು ಸಹ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡಿದ್ದಾರೆ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಮಂತಾ ಸಹ ರಿಯಾಕ್ಟ್ ಆಗಿದ್ದು ವಿಶೇಷವಾಗಿದೆ. ಸಮಂತಾ ಈ ಬಗ್ಗೆ ರಿಯಾಕ್ಟ್ ಆಗಿದ್ದು, ಮಹಿಳೆಯರು ಅಭಿವೃದ್ದಿಯಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಆಕೆ ಹೇಳಿಕೆ ವೈರಲ್ ಆಗುತ್ತಿದೆ.

ಇನ್ನೂ ಕಳೆದ ವರ್ಷ ಸಮಂತಾ ಹಾಗೂ ನಯನತಾರಾ ಕನ್ಮಣಿ ರಾಂಬೋ ಖತಿಜಾ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಬಳಿಕ ಸಮಂತಾ ಹಾಗೂ ನಯನತಾರಾ ನಡುವೆ ಒಳ್ಳೆಯ ಬಾಂಡಿಂಗ್ ಸಹ ಉಂಟಾಗಿದೆ. ಇನ್ನೂ ಸಮಂತಾ ಸಹ ಇತ್ತಿಚಿಗೆ ಯಶೋಧ ಸಿನೆಮಾದ ಮೂಲಕ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಲೇಡಿ ಓರಿಯೆಂಟೆಂಡ್ ಸಿನೆಮಾ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಫೆಬ್ರವರಿ ಮಾಹೆಯಲ್ಲಿ ಸಮಂತಾ ಅಭಿನಯದ ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾ ಸಹ ರಿಲೀಸ್ ಆಗಲಿದೆ.

Most Popular

To Top