Film News

2022 ನೇ ವರ್ಷ ನನಗೆ ಹೊಸ ವ್ಯಕ್ತಿಯನ್ನು ಪರಿಚಯಿಸಿತು ಎಂದು ಚಿರು ಪುತ್ರಿ ಶ್ರೀಜಾ, ಮೂರನೇ ಮದುವೆಯ ಬಗ್ಗೆ ವದಂತಿ ಶುರು…!

ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಇತ್ತಿಚಿಗೆ ಮದುವೆಗೆ ಸಂಬಂಧಿಸಿದ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಈಗಾಗಲೇ ಎರಡು ಮದುವೆ ಮಾಡಿಕೊಂಡ ಶ್ರೀಜಾ ಇದೀಗ ಮೂರನೇ ಮದುವೆಗೆ ಸಿದ್ದವಾಗಿದ್ದಾರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದ್ದಾರೆ. ಮೊದಲಿಗೆ ಪ್ರೀತಿಸಿ ಮದುವೆಯಾದ ಶ್ರೀಜಾ ಆತನೊಂದಿಗೆ ಬೇರೆಯಾಗಿ ನಟ ಕಲ್ಯಾಣ್ ದೇವ್ ರನ್ನು ಮದುವೆಯಾದರು. ಆತನಿಂದಲೂ ಸಹ ಶ್ರೀಜಾ ಬೇರೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಶ್ರೀಜಾ ಮೂರನೇ ಮದುವೆಗೆ ಸಿದ್ದರಾಗಿದ್ದಾರೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಮೆಗಾಸ್ಟಾರ್‍ ಚಿರಂಜೀವಿಯವರ ಕಿರಿಯ ಪುತ್ರಿ ಶ್ರೀಜಾ ಸೋಷಿಯಲ್ ಮಿಡಿಯಾದಲ್ಲಿ ಒಂದು ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಕೆ “ಡಿಯರ್‍ 2022, ನನ್ನ ಜೀವನದಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು, ನನ್ನ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿ, ನನ್ನನ್ನು ತುಂಬಾ ಪ್ರೀತಿಸುವ ವ್ಯಕ್ತಿ, ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಾ, ಕಷ್ಟ ಸುಖಗಳಲ್ಲೂ ಜೊತೆಗಿರುವಂತಹ ವ್ಯಕ್ತಿ, ಸದಾ ನನಗೆ ಸಪೋರ್ಟ್ ಆಗಿರುವಂತಹ ಆ ವ್ಯಕ್ತಿ ಬೇರೆಯಾರೂ ಅಲ್ಲ ಅದು ನಾನೇ. ಈ ವರ್ಷದಲ್ಲಿ ನನ್ನ ಬಗ್ಗೆ ನಾನು ಹೆಚ್ಚಾಗಿ ತಿಳಿದುಕೊಂಡಿದ್ದು ನನಗೆ ತುಂಬಾ ಆನಂದವಾಗಿದೆ, ಹೊಸ ಪ್ರಯಾಣ ಶುರುವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಶ್ರೀಜಾ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈಗಾಗಲೇ ಎರಡು ಮದುವೆಯಾಗಿರುವ ಶ್ರೀಜಾ ಹಂಚಿಕೊಂಡ ಈ ಪೋಸ್ಟ್ ನೋಡಿದ ಅನೇಕರು ಆಕೆ ಮೂರನೇ ಮದುವೆಯಾಗಬಹುದು ಎನೋ ಎಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶ್ರೀಜಾ ಮಾತ್ರ ತನ್ನನ್ನು ತಾನು ಅರಿತುಕೊಂಡ ಬಗ್ಗೆ ಈ ಪೋಸ್ಟ್ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸುಮಾರು ದಿನಗಳಿಂದ ಆಕೆ ತನ್ನ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ಆದರೆ 2022 ರಲ್ಲಿ ಜರುಗಿದ ಕೆಲವೊಂದು ಘಟನೆಗಳ ಕಾರಣದಿಂದ ಆಕೆ ತನ್ನ ಬಗ್ಗೆ ಅರಿತುಕೊಳ್ಳುವಂತಹ ಅವಕಾಶ ಸಿಕ್ಕಿದೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ತನಗಾಗಿ ಮಾತ್ರ ಜೀವಿಸುವ ಕೆಲಸ ಮಾಡುತ್ತೇನೆ. 2023 ರಿಂದ ಹೊಸ ಜೀವನ ಶುರುವಾಗಿದೆ ಎಂದು ಅರ್ಥ ಬರುವ ರೀತಿಯಲ್ಲಿ ಆಕೆ ಪೋಸ್ಟ್ ಮಾಡಿದ್ದಾರೆ.

ಸದ್ಯ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಬೇರೆಯಾಗಿಯೇ ಜೀವಿಸುತ್ತಿದ್ದಾರೆ. ಕಲ್ಯಾಣ್ ದೇವ್ ಸಹ ಕೆಲವೊಂದು ಪೋಸ್ಟ್ ಗಳ ಮೂಲಕ ತಾನು ತನ್ನ ಮಗಳನ್ನು ಮಿಸ್ ಆಗುತ್ತಿರುವುದಾಗಿ ತನ್ನ ಭಾವನೆಗಳನ್ನು ತಿಳಿಸುತ್ತಿದ್ದಾರೆ. ಇದೀಗ ಶ್ರೀಜಾ ಆಗಲಿ ಅಥವಾ ಕಲ್ಯಾಣ್ ದೇವ್ ಆಗಲಿ ಯಾವುದೇ ಪೋಸ್ಟ್ ಹಂಚಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತದೆ.

Most Popular

To Top