Film News

ಅದ್ದೂರಿಯಾಗಿ ನಡೆದ ಉಪಾಸನಾ ಬೇಬಿ ಶವರ್ ಕಾರ್ಯಕ್ರಮ, ವೈರಲ್ ಆದ ಪೊಟೋಸ್….!

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಜೀವವೊಂದು ಸೇರಲಿದೆ. ಗ್ಲೋಬರ್‍ ಸ್ಟಾರ್‍ ರಾಮ್ ಚರಣ್ ಹಾಗೂ ಉಪಾಸನಾ ಕೆಲವೇ ದಿನಗಳಲ್ಲಿ ತಂದೆ ತಾಯಿಯಾಗಿ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ಈ ಜೋಡಿಗೆ ಮದುವೆಯಾದ 10 ವರ್ಷಗಳ ಬಳಿಕ ಉಪಾಸನಾ ಗರ್ಭಿಣಿಯಾಗಿದ್ದಾರೆ. ಇನ್ನೂ ಈ ಸುದ್ದಿ ಹೊರಬರುತ್ತಿದ್ದಂತೆ ಮೆಗಾ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿದ್ದರು. ಇನ್ನೂ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉಪಾಸನಾ ಬೇಬಿಶವರ್‍ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆಯೇ ಮೆಗಾಸ್ಟಾರ್‍ ಚಿರಂಜೀವಿಯವರ ಮನೆಯಲ್ಲಿ ಸ್ನೇಹಿತರು ಉಪಾಸನಾ ಗೆ ಬೇಬಿ ಶವರ್‍ ಕಾರ್ಯಕ್ರಮ ನೆರವೇರಿಸಿದ್ದರು. ಬಳಿಕ ಮತ್ತೊಮ್ಮೆ ಪತಿ ರಾಮ್ ಚರಣ್ ಜೊತೆಗೆ ದುಬೈನಲ್ಲಿ ವೇಕಷನ್ ಸಮಯದಲ್ಲೇ ಅಲ್ಲಿರುವ ಕೆಲವು ಸಂಬಂಧಿಕರು ಹಾಗೂ ಸ್ನೇಹಿತರು ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಉಪಾಸನಾ ಹಂಚಿಕೊಂಡಿದ್ದಾರೆ. ಈ ಪೊಟೊಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ದುಬೈ ವೆಕೇಷನ್ ಗೆ ಹಾರಿದ್ದ ಚರಣ್ ಅಂಡ್ ಉಪಾಸನಾ ಬಳಿಕ ಮಾಲ್ಡಿವ್ಸ್ ನಲ್ಲಿ ಎಂಜಾಯ್ ಮಾಡಿ ಇದೀಗ ಹೈದರಾಬಾದ್ ಗೆ ಮರಳಿದ್ದಾರೆ.

ಇನ್ನೂ ಹೈದರಾಬಾದ್ ನಲ್ಲಿರುವ ಮೆಗಾಸ್ಟಾರ್‍ ಚಿರಂಜೀವಿಯವರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಆದರೆ ಈ ಕಾರ್ಯಕ್ರಮವನ್ನು ಅಲ್ಲು ಅರ್ಜುನ್ ಅಣ್ಣ ಅಲ್ಲು ಬಾಬಿ ಹಾಗೂ ಆತನ ಪತ್ನಿ ಅಲ್ಲಿ ನಿಲುಷಾ ನೆರವೇರಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಪೊಟೋಗಳನ್ನು ಉಪಾಸನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೊಟೋಗಳಲ್ಲಿ ಉಪಾಸನಾ ಜೊತೆಗೆ ಅಲ್ಲು ನಿಲುಷಾ, ಚಿರಂಜೀವಿ ಪತ್ನಿ ಅಲ್ಲು ಸುರೇಖ ಸಹ ಇದ್ದಾರೆ. ಇನ್ನೂ ಈ ಪೊಟೋಗಳಿಗೆ ಅಭಿಮಾನಿಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ರಾಮ್ ಚರಣ್ ಸಹ ಉಪಾಸನಾ ಜೊತೆಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸಮಯ ಕಳೆಯುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮೆಗಾ ಕುಟುಂಬಕ್ಕೆ ಹೊಸ ಪ್ರಾಣ ಎಂಟ್ರಿ ಕೊಡಲಿದ್ದು, ಆ ಸಂತಸದ ಕ್ಷಣಕ್ಕಾಗಿ ಮೆಗಾ ಫ್ಯಾಮಿಲಿ ಜೊತೆಗೆ ಮೆಗಾ ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ರಾಮ್ ಚರಣ್ ಗೇಮ್ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top