Film News

ಬಂಗಾರಂ ಎಂದು ಕಾಮೆಂಟ್ ಮಾಡಿದ ನಿಹಾರಿಕಾ, ವೈರಲ್ ಆದ ಪೋಸ್ಟ್….!

ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಹಾಗೂ ಆಕೆಯ ಪತಿ ಚೈತನ್ಯ ಜೊತೆಗೆ ಬೇರೆಯಾಗಲಿದ್ದಾರೆ, ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ರೂಮರ್‍ ವೈರಲ್ ಆದ ಬಳಿಕ ನಿಹಾರಿಕಾ ಏನೆ ಪೋಸ್ಟ್ ಮಾಡಿದರೂ ಕ್ಷಣದಲ್ಲೆ ವೈರಲ್ ಆಗುತ್ತಿರುತ್ತವೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿರುವ ನಿಹಾರಿಕಾ ಇತ್ತಿಚಿಗೆ ವೈಯುಕ್ತಿಕ ಜೀವನದ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಅದಕ್ಕೆ ಕಾರಣಗಳೂ ಸಹ ಕೇಳಿಬರುತ್ತಿವೆ. ಚೈತನ್ಯ ನಿಹಾರಿಕಾ ಜೊತೆಗಿರುವ ಪೊಟೋಗಳು ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದು, ಬಳಿಕ ಒಬ್ಬರನ್ನೊಬ್ಬರು ಸೋಷಿಯಲ್ ಮಿಡಿಯಾ ಖಾತೆಯಿಂದ ಅನ್ ಫಾಲೋ ಮಾಡಿದ್ದು, ಬಳಿಕ ನಿಹಾರಿಕಾ ಸಹ ಪೊಟೋಗಳನ್ನುಡಿಲೀಟ್ ಮಾಡಿದ್ದು, ಈ ಎಲ್ಲವುಗಳ ಕಾರಣದಿಂದ ಅವರಿಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಜೋಡಿಯನ್ನು ಮತ್ತೆ ಒಂದು ಮಾಡಲು ಚಿರಂಜೀವಿ ಸಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂತು. ಈ ರೂಮರ್‍ ಬಳಿಕ ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಆ ಪೋಸ್ಟ್ ಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಿಹಾರಿಕಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಒಂದು ಸಖತ್ ವೈರಲ್ ಆಗಿದೆ. ಜಿಮ್ ನಲ್ಲಿರುವ ಪೊಟೋ ಒಂದನ್ನು ಶೇರ್‍ ಮಾಡಿ ಐಯಾಮ್ ಡೆತ್ಡ್ ಬಂಗಾರಂ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೊಸ್ಟ್ ಹೊರಬಂದ ಕೂಡಲೇ ನಿಹಾರಿಕಾ ಬಂಗಾರಂ ಎಂದು ಹೇಳಿದ್ದು ಯಾರ ಬಗ್ಗೆ ಯಾರು ಆ ಅದೃಷ್ಟವಂತ ಎಂಬ ಚರ್ಚೆಗಳು ಶುರುವಾಗಿದೆ. ಇನ್ನೂ ಅನೇಕರು ನಿಹಾರಿಕಾ ಪೋಸ್ಟ್ ಗಳು ಅಷ್ಟು ಈಸಿಯಾಗಿ ಅರ್ಥ ಆಗುವುದಿಲ್ಲ ಎಂದೂ ಸಹ ಅನೇಕರು ಹೇಳುತ್ತಿದ್ದಾರೆ. ಇನ್ನೂ ಆಕೆ ಬಂಗಾರಂ ಎಂದು ಕರೆದಿದ್ದು ಯಾರಿಗೆ ಎಂಬ ವಿಚಾರವನ್ನು ತಿಳಿಯಲು ಮತಷ್ಟು ದಿನಗಳು ಕಾಯಬೇಕಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ನಿಹಾರಿಕಾ ಸಿನೆಮಾಗಳಲ್ಲಿ ಮತ್ತೆ ಬ್ಯುಸಿಯಾಗಲಿದ್ದಾರೆ ಎಂಬ ಸುದ್ದಿಗಳೂ ಸಹ ಕೇಳಿಬರುತ್ತಿದೆ. ಇನ್ನೂ ಈಗಾಗಲೇ ನಟಿಯಾಗಬೆಕೆಂಬ ಮಹದಾಸೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ನಿಹಾರಿಕಾ ಸ್ಟಾರ್‍ ನಟಿಯಾಗಲು ವಿಫಲರಾದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಾದರೂ ಆಕೆ ಸ್ಟಾರ್‍ ನಟಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top