Film News

ಪುಲ್ ಎನರ್ಜಿಟಿಕ್, ಸ್ಟೈಲಿಶ್ ಆಗಿ ಕಾಣಿಸಿಕೊಂಡ ಸಮಂತಾ, ವೈರಲ್ ಆದ ಪೊಟೋಸ್……!

ಸದ್ಯ ಸ್ಟಾರ್‍ ನಟಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿರುವ ಬಗ್ಗೆ ತಿಳಿದೇ ಇದೆ. ಸಿನೆಮಾಗಳಿಂದ ಆಕೆ ದೂರವಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಆರೋಗ್ಯದ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದು, ಇದೀಗ ಆಕೆಯ ಲೇಟೆಸ್ಟ್ ಲುಕ್ಸ್ ನೋಡಿದರೇ ಆಕೆ ಪುಲ್ ಎನರ್ಜಿಟಿಕ್ ಆಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಸಮಂತಾ ಮಯೋಸೈಟೀಸ್ ವ್ಯಾದಿಗೆ ಗುರಿಯಾಗಿದ್ದರು. ಈ ಕಾರಣದಿಂದ ಅನೇಕ ದಿನಗಳ ಕಾಲ ಅಜ್ಞಾತವಾಗಿಯೇ ಇದ್ದರು. ಬಳಿಕ ಯಶೋಧ ಸಿನೆಮಾದ ಪ್ರಮೋಷನ್ ಸಮಯದಲ್ಲಿ ಆಕೆ ತನ್ನ ವ್ಯಾಧಿಯ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಎಲ್ಲರಿಗೂ ವಿಚಾರ ತಿಳಿಸಿದರು. ಈ ಮಾರಕ ಕಾಯಿಲೆಯಿಂದ ಸಮಂತಾ ಹೊರಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. ಜೊತೆಗೆ ಅನೇಕ ಸ್ಟಾರ್‍ ಸೆಲೆಬ್ರೆಟಿಗಳೂ ಸಹ ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಆರೋಗ್ಯದಿಂದ ಕೊಂಚ ಚೇತರಿಸಿಕೊಂಡ ಬಳಿಕ ಆಕೆ ಶಾಕುಂತಲಂ, ಖುಷಿ ಸಿನೆಮಾದಲ್ಲಿ ನಟಿಸಿದ್ದರು. ಈ ವರ್ಷ ಎರಡೂ ಸಿನೆಮಾಗಳು ತೆರೆಕಂಡಿದ್ದು, ಶಾಕುಂತಲಂ ಆಲ್ ಟೈಮ್ ಡಿಜಾಸ್ಟರ್‍ ಆಗಿದ್ದರೇ, ಖುಷಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.

ಈ ಸಿನೆಮಾಗಳ ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಈ ಸಿರೀಸ್ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಈ ಎಲ್ಲಾ ಪ್ರಾಜೆಕ್ಟ್ ಗಳನ್ನು ಮುಗಿಸಿದ ಸಮಂತಾ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು. ಸಂಪೂರ್ಣ ಆರೋಗ್ಯದ ದೃಷ್ಟಿಯಿಂದ ಆಕೆ ಬ್ರೇಕ್ ಪಡೆದುಕೊಂಡು ಆಧ್ಯಾತ್ಮಿಕ ಕೇಂದ್ರಗಳು, ಪ್ರಾಕೃತಿಕ ತಾಣಗಳಿಗೆ ಭೇಟಿ ನೀಡಿ ಆರೋಗ್ಯ ವೃದ್ದಿಸಿಕೊಳ್ಳುತ್ತಿರುವುದಾಗಿ ಹೇಳಲಾಗಿದೆ. ಸಿನೆಮಾಗಳಿಗೆ ಬ್ರೇಕ್ ನೀಡಿದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿಯೇ ಇದ್ದರು. ಬ್ಯಾಕ್ ಟು ಬ್ಯಾಕ್ ಅಪ್ಡೇಟ್ಸ್ ಗಳನ್ನು ಅಭಿಮಾನಿಗಳಿಗೆ ನೀಡುತ್ತಿದ್ದರು. ಇದೀಗ ಆಕೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ಪುಲ್ ಜೋಷ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಮಂತಾ ತುಂಬಾ ಎನರ್ಜಿಟಿಕ್ ಆಗಿ, ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ನೋಡಿದರೇ ಆಕೆ ಮಯೋಸೈಟಿಸ್ ವ್ಯಾಧಿಯಿಂದ ಸಂಪೂರ್ಣವಾಗಿ ಹೊರಬಂದರೇ ಎಂಬ ಭಾವನೆ ಮೂಡುತ್ತಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಅಭಿಮಾನಿಗಳು ಈ ಪೊಟೋಗಳಿಗೆ ಲೈಕ್ ಗಳನ್ನು ಕಾಮೆಂಟ್ ಗಳನ್ನು ಮಾಡುತ್ತಾ ಪೊಟೊಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದೆ. ಜೊತೆಗೆ ಆಕೆ ಮುಂದಿನ ಪ್ರಾಜೆಕ್ಟ್ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Most Popular

To Top