ಮೈಚಾಂಗ್ ಚಂಡಮಾರುತದ ಸಂತ್ರಸ್ತರಿಗೆ ಸಹಾಯಾಸ್ತ ಚಾಚಿದ ನಟರು, 10 ಲಕ್ಷ ದೇಣಿಗೆ ನೀಡಿದ ಸ್ಟಾರ್ ಬ್ರದರ್ಸ್…..!

Follow Us :

ಮೈಚಾಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿಹೋಗಿದೆ. ಅದರಲ್ಲೂ ಚೆನೈನಲ್ಲಂತೂ ಮೈಚಾಂಗ್ ಆರ್ಭಟಕ್ಕೆ ಪ್ರವಾಹವೇ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರ ತುಂಬಾನೆ ಸಮಸ್ಯೆಗೆ ಗುರಿಯಾಗಿದ್ದಾರೆ. ಇದೀಗ ಸಂತ್ರಸ್ತರ ನೆರವಿಗೆ ಕಾಲಿವುಡ್ ಸ್ಟಾರ್‍ ಬ್ರದರ್ಸ್ ಧಾವಿಸಿದ್ದಾರೆ. ತಮಿಳಿನ ಸ್ಟಾರ್‍ ನಟರಾದ ಸೂರ್ಯ ಹಾಗೂ ಕಾರ್ತಿ  ಸಂತ್ರಸ್ತರಿಗೆ ಧನಸಹಾಯ ಮಾಡಿದ್ದಾರೆ.

ಕಳೆದೆರಡಿ ದಿನಗಳ ಹಿಂದೆಯಷ್ಟೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಮೈಚಾಂಗ್ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದದೆ. ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಚೆನೈನಲ್ಲಿ ಕೆಲವೊಂದು ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಜನರು ಪರದಾಡುವಂತಾಗಿದೆ. ಜನರ ಸಂಕಷ್ಟ ಕಂಡ ಕಾಲಿವುಡ್ ಸ್ಟಾರ್‍ ಗಳಾದ ಸೂರ್ಯ ಹಾಗೂ ಕಾರ್ತಿ ಸಹೋದರರು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಪರಿಹಾರದ ಕಾರ್ಯಗಳಿಗಾಗಿ ಹತ್ತು ಲಕ್ಷ ದೇಣಿಗೆ ನೀಡಿದ್ದಾರೆ. ನಟರ ಈ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ. ತಮಿಳು ಸಿನಿರಂಗದಿಂದ ಈ ಸಹೋದದರು ಆರ್ಥಿಕ ನೆರವು ಘೋಷಣೆ ಮಾಡಿರುವುದು ಗಮನಾರ್ಹವಾದ ಸಂಗತಿ ಎನ್ನಲಾಗಿದೆ.

ಇನ್ನೂ ಸ್ಟಾರ್‍ ಸಹೋದದರ ಅಭಿಮಾನಿಗಳ ಸಂಘಗಳಿಂದ ಹಣಕಾಸಿನ ಬೆಂಬಲ ಸಹ ನೀಡಲಾಗುತ್ತಿದೆ. ಜೊತೆಗೆ ಅಭಿಮಾನಿ ಸಂಘದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನೂ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಐದು ಸಾವಿರ ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಹ ಮಾಡಿದ್ದಾರೆ. ಚೆನೈ, ತಿರುವಳ್ಳೂರು, ಕಾಂಚಿಪುರಂ, ಚಂಗಲ್ ಪೇಟೆ ಮೊದಲಾದ ನಗರಗಳು ತೀವ್ರ ಸಂಕಷ್ಟದಲ್ಲಿದೆ ಎನ್ನಲಾಗಿದೆ. ಅನೇಕ ರಸ್ತೆಗಳು, ಸುರಂಗ ಮಾರ್ಗಗಳು ನೀರಿನಲ್ಲಿ ಮುಳುಗಿದೆ. ಒಟ್ಟಿನಲ್ಲಿ ಮೈಂಚಾಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ.