ಬಾಲಿವುಡ್ ಗೆ ಹೋಗುತ್ತಿದ್ದಂತೆ ಮತಷ್ಟು ಬೋಲ್ಡ್ ಆದ ಮಹಾನಟಿ, ಕೀರ್ತಿ ಸುರೇಶ್ ನೆಕ್ಸ್ಟ್ ವರ್ಷನ್ ಎಂದ ಫ್ಯಾನ್ಸ್…..!

Follow Us :

ಸೌತ್ ಸಿನಿರಂಗದಲ್ಲಿನ ಬಹುಬೇಡಿಕೆಯುಳ್ಳ ನಟಿಯರ ಸಾಲಿಗೆ ಮಹಾನಟಿ ಎಂದೇ ಕರೆಯಲಾಗುವ ಕೀರ್ತಿ ಸುರೇಶ್ ಸಹ ಒಬ್ಬರಾಗಿದ್ದಾರೆ. ಮೊದಲಿಗೆ ಹೋಮ್ಲಿಯಾಗಿ ಕಾಣಿಸಿಕೊಂಡ ಕೀರ್ತಿ ಸುರೇಶ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಶೋ ಮಾಡುತ್ತಿದ್ದಾರೆ. ಗ್ಲಾಮರ್‍ ಪ್ರದರ್ಶನಕ್ಕೆ ಇರುವಂತಹ ಎಲ್ಲಾ ಬೌಂಡರಿಗಳನ್ನೂ ಸಹ ಮೀರಿ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಇದೀಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟ ಕೀರ್ತಿ ಸುರೇಶ್ ಮತಷ್ಟು ಬೋಲ್ಡ್ ಆಗಿದ್ದಾರೆ. ಇದೀಗ ಶೂಟಿಂಗ್ ಸ್ಪಾಟ್ ನಿಂದ ಕೆಲವೊಂದು ಪೊಟೋಗಳು ಲೀಕ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಒಳ್ಳೆಯ ಕ್ರೇಜ್ ಇರುವಂತಹ ಬ್ಯೂಟಿಯರಲ್ಲಿ ಕೀರ್ತಿ ಸುರೇಶ್ ಸಹ ಒಬ್ಬರಾಗಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಿಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತನ್ನ ನಟನೆಯ ಮೂಲಕ ಭಾರಿ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸದ್ಯ ತೆಲುಗು ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಇದೀಗ ಬಾಲಿವುಡ್ ನಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು, ಬಾಲಿವುಡ್ ನಲ್ಲಿ ತನ್ನ ಹವಾ ಸೃಷ್ಟಿ ಮಾಡಲಿದ್ದಾರೆ. ತೆಲುಗಿನಲ್ಲಿ ಮಹಾನಟಿ ಸಿನೆಮಾಗಾಗಿ ಆಕೆ ರಾಷ್ಟ್ರೀಯ ಅವಾರ್ಡ್ ಸಹ ಪಡೆದುಕೊಂಡರು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಆದರೆ ಆಕೆಯ ಕೆರಿಯರ್‍ ಕೊಂಚ ಡಲ್ ಆಗಿತ್ತು. ಈ ಕಾರಣದಿಂದ ಆಕೆ ಕೊಂಚ ಗ್ಲಾಮರ್‍ ಡೋಸ್ ಏರಿಸಿದರು. ಸರ್ಕಾರು ವಾರಿ ಪಾಠ ಸಿನೆಮಾದಲ್ಲಂತೂ ಆಕೆ ಮತಷ್ಟು ಗ್ಲಾಮರ್‍ ಶೋ ಮಾಡಿದರು. ಬಳಿಕ ಆಕೆಯ ಕ್ರೇಜ್ ಸಹ ಬಯಲಾಯಿತು. ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಸಹ ತೆಕ್ಕೆಗೆ ಹಾಕಿಕೊಂಡರು.

ಸದ್ಯ ನಟಿ ಕೀರ್ತಿ ಸುರೇಶ್ ಬಾಲಿವುಡ್ ಅಂಗಳಕ್ಕೆ ಧುಮುಕಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಂತೆ ಆಕೆ ಮತಷ್ಟು ಗ್ಲಾಮರಸ್ ಆಗಿ ಬೋಲ್ಡ್ ಆಗಿದ್ದಾರೆ. ಸದ್ಯ ಆಕೆ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ಜೊತೆಗೆ ಬೇಬಿ ಜಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸೆಟ್ ನಿಂದ ಕೆಲವೊಂದು ಪೊಟೊಗಳು ಲೀಕ್ ಆಗಿದೆ. ವರುಣ್ ಧವನ್ ಹುಟ್ಟುಹಬ್ಬವನ್ನು ಬೇಬಿ ಜಾನ್ ಶೂಟಿಂಗ್ ಸೆಟ್ಸ್ ನಲ್ಲಿ ಆಚರಿಸಿಕೊಂಡಿದ್ದರು. ಅದೇ ದಿನ ಸಿನೆಮಾದ ಶೂಟಿಂಗ್ ಸಹ ನಡೆದಿತ್ತು. ಈ ಶೂಟಿಂಗ್ ನ ವಿರಾಮದ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ಸಮಯದಲ್ಲಿ ತೆಗೆದಂತಹ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿದ್ದಾರೆ ಎಂಬುದನ್ನು ಈ ಪೊಟೋ ನೋಡಿದರೇ ತಿಳಿಯಬಹುದಾಗಿದೆ.

ಇನ್ನೂ ಕೀರ್ತಿ ಸುರೇಶ್ ಪೊಟೋ ಸಖತ್ ವೈರಲ್ ಆಗುತ್ತಿದ್ದು, ಪೊಟೋಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ಕೀರ್ತಿ ಸುರೇಶ್ ನೆಕ್ಟ್ ಲೆವೆಲ್ ಹಾಟ್ ನೆಸ್ ಎಂಬೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಬಾಲಿವುಡ್ ಗೆ ಹೋದ ಕಾರಣದಿಂದ ಅಷ್ಟೊಂದು ಬೋಲ್ಡ್ ಆಗೋದು ಬೇಕಿತ್ತಾ ಎಂಬ ವಿಮರ್ಶೆ ಸಹ ಮಾಡುತ್ತಿದ್ದಾರೆ.