ಸಮಂತಾ ಹೊಸ ಸಿನೆಮಾ ಪೋಸ್ಟರ್ ರಿಲೀಸ್, ರಕ್ತಸಿಕ್ತ ಲುಕ್ ನಲ್ಲಿ ಕಾಣಿಸಿಕೊಂಡ ಸ್ಯಾಮ್, ವೈರಲ್ ಆದ ಪೋಸ್ಟರ್…..!

Follow Us :

ದೇಶದ ಸಿನಿರಂಗದಲ್ಲಿ ಟಾಪ್ ನಟಿಯರಲ್ಲಿ ಸ್ಟಾರ್‍ ನಟಿ ಸಮಂತಾ ಸಹ ಒಬ್ಬರಾಗಿದ್ದಾರೆ. ಇತ್ತೀಚಿಗೆ ಅವರು ಸಿನೆಮಾಗಳಿಗಿಂತ ಹೆಚ್ಚು ವೈಯುಕ್ತಿಕ ವಿಚಾರಗಳಿಂದಲೇ ಸುದ್ದಿಯಾದ ವಿಚಾರ ತಿಳಿದೇ ಇದೆ. ಎಲ್ಲವನ್ನೂ ಆಕೆ ಮೆಟ್ಟಿನಿಂತು ಇದೀಗ ಅನೇಕ ಯುವತಿಯರಿಗೆ ಮಾದರಿಯಾಗಿದ್ದಾರೆ ಎಂದೇ ಹೇಳಬಹುದು. ಇದೀಗ ಸಮಂತಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಕೆಯ ಹುಟ್ಟುಹ್ಹಬದ ನಿಮತ್ತ ತಮ್ಮ ಮುಂದಿನ ಸಿನೆಮಾದ ಅಪ್ಟೇಟ್ ಒಂದು ಸಿಕ್ಕಿದ್ದು, ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಲುಕ್ ನಲ್ಲಿ ಕಾಣಿಸಿಕೊಂಡ ಪೋಸ್ಟರ್‍ ಒಂದು ಹೊರಹಬಂದಿದೆ.

ನಟಿ ಸಮಂತಾ ಏಮಾಯಾ ಚೇಸ್ಯಾವೋ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಂಡು ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಭಾರಿ ಸಂಭಾವನೆಯನ್ನು ಪಡೆದುಕೊಳ್ಳುವಂತಹ ಬಹುಬೇಡಿಕೆ ನಟಿಯಾದರು. ಕೆರಿಯರ್‍ ಚೆನ್ನಾಗಿ ಸಾಗುತ್ತಿದ್ದ ಸಮಯದಲ್ಲೇ ಆಕೆ ನಟ ಅಕ್ಕಿನೇನಿ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಕೆಲವೇ ವರ್ಷಗಳಲ್ಲೇ ಅವರು ಕೆಲವೊಂದು ಕಾರಣಗಳಿಂದ ಬೇರೆಯಾದರು. ಇದಾದ ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಸಹ ಗುರಿಯಾದರು. ಈ ಕಾರಣದಿಂದ ಆಕೆ ಅಜ್ಞಾತದಲ್ಲಿದ್ದರು. ಬಳಿಕ ಮತ್ತೆ ಸಿನೆಮಾಗಳಲ್ಲಿ ನಟಿಸಲು ಮುಂದಾದರು. ಮತ್ತೆ ಆಕೆ ಆರೋಗ್ಯ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದು ದೂರವಿದ್ದರು. ಈ ನಡುವೆ ಆಕೆ ಸಿನೆಮಾಗಳನ್ನು ಬಿಡಲಿದ್ದಾರೆ ಎಂಬ ರೂಮರ್‍ ಗಳು ಸಹ ಕೇಳಿಬಂದಿತ್ತು.

ಆದರೆ ಇದೀಗ ಸಮಂತಾ ರವರ ಹೊಸ ಸಿನೆಮಾದ ಪೋಸ್ಟರ್‍ ಬಿಡುಗಡೆಯಾಗಿದ್ದು, ಆಕೆಯ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಸಮಂತಾ ರವರ ಮುಂದಿನ ಸಿನೆಮಾದ ಪೋಸ್ಟರ್‍ ರಿಲೀಸ್ ಆಗಿದ್ದು, ಈ ಪೋಸ್ಟರ್‍ ನಲ್ಲಿ ಆಕೆ ಕೈಯಲ್ಲಿ ಗನ್ ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಹಣೆಯಲ್ಲಿ ಕುಂಕುಮ, ಕತ್ತಲ್ಲಿ ತಾಳಿ, ಕೆಂಪು ಬಣ್ಣದ ಸೀರೆಯನ್ನು ಧರಿಸಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾಗೆ ಬಂಗಾರಮ್ ಎಂಬ ಟೈಟಲ್ ಸಹ ಇಡಲಾಗಿದೆ. ಈ ಪೋಸ್ಟರ್‍ ಅನ್ನು ಸಮಂತಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ಸಿನೆಮಾದ ಶೂಟಿಂಗ್ ಸಹ ಶೀಘ್ರದಲ್ಲೇ ಶುರುವಾಗಲಿದೆ ಎಂದು ಹೇಳಲಾಗಿದೆ. ಈ ಪೋಸ್ಟರ್‍ ನೋಡಿದರೇ, ಈ ಸಿನೆಮಾ ಆಕ್ಷನ್ ಹಾಗೂ ಮಾಸ್ ಸಿನೆಮಾ ಆಗಿರಬಹುದು ಎನ್ನಬಹುದಾಗಿದೆ. ಅಂದಹಾಗೆ ಈ ಸಿನೆಮಾವನ್ನು ಸಮಂತಾ ತಮ್ಮ ಸ್ವಂತ ಬ್ಯಾನರ್‍ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಆಕೆಯ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.