ನಿಜವಾದ ಪ್ರೀತಿ ಏನು ಎಂಬುದು ಮೌನಿಕಾರನ್ನು ಲವ್ ಮಾಡಿದ ಬಳಿಕ ಗೊತ್ತಾಯ್ತು, ಮತ್ತೆ ಹುಟ್ಟಿಬಂದೆ ಎಂದ ಮಂಚು ಮನೋಜ್…..!

Follow Us :

ಕೆಲವು ತಿಂಗಳುಗಳ ಹಿಂದೆಯಷ್ಟೆ ಟಾಲಿವುಡ್ ನಟ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ನಡೆಯಿತು. ಈ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮನೋಜ್ ಸಹೋದರಿ ಮಂಚು ಲಕ್ಷ್ಮೀ ವಹಿಸಿಕೊಂಡಿದ್ದರು. ಅವರ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬಂದವು. ಅವರಿಬ್ಬರ ಮದುವೆ ಮೋಹನ್ ಬಾಬು ರವರಿಗೆ ಇಷ್ಟವಿರಲಿಲ್ಲ ಎಂಬ ಸುದ್ದಿಗಳೂ ಸಹ ಕೇಳಿಬಂದಿತ್ತು. ಸದ್ಯ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮನೋಜ್ ಮೌನಿಕಾ ಲವ್ ಬಗ್ಗೆ ಎಮೋಷನಲ್ ಕಾಮೆಂಟ್ಸ್ ಮಾಡಿದ್ದಾರೆ.

ಮಂಚು ಮನೋಜ್ ಉಸ್ತಾದ್ (ರಾಂಪ್ ಆಡಿದ್ದಾಂ) ಎಂಬ ಬಿಗೆಸ್ಟ್ ಗೇಂ ಶೋ ಹೋಸ್ಟ್ ಮಾಡುತ್ತಿದ್ದಾರೆ. ಪೀಪುಲ್ಸ್ ಮಿಡಿಯಾ ಫ್ಯಾಕ್ಟರಿ ಈ ಶೋ ನಿರ್ವಹಿಸುತ್ತಿದ್ದಾರೆ. ಈ ಶೋ ಡಿ.15 ರಿಂದ ಆರಂಭವಾಗಲಿದೆ. ಪ್ರತಿ ವಾರ ಈ ಶೋ ಪ್ರಸಾರವಾಗಲಿದೆ. ಈ ಶೋನಲ್ಲಿ ಸೆಲೆಬ್ರೆಟಿಗಳು ಭಾಗವಹಿಸಲಿದ್ದು, ಇಂಡಿಯಾದಲ್ಲೇ ಈ ಶೋ ಬಿಗೆಸ್ಟ್ ಗೇಂ ಶೋ ಎಂದು ಹೇಳಲಾಗುತ್ತಿದೆ. ಈ ಶೋನ ಲಾಂಚಿಂಗ್ ಪ್ರಮೋ ಬಿಡುಗಡೆಯಾಗಿದೆ. ಈ ಸಂಬಂಧ ಬುಧವಾರ ಒಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಮನೋಜ್ ನಾನು ಏಳು ವರ್ಷಗಳ ಗ್ಯಾಪ್ ಬಳಿಕ ಬರುತ್ತಿದ್ದೇನೆ. ಮೋನಿಕಾ ಜೊತೆಗೆ ಏಳು ಹೆಜ್ಜೆ ಹಾಕಿದ ಬಳಿಕ ಮತ್ತೇ ಬರುತ್ತಿದ್ದೇನೆ. ತುಂಬಾ ಎನರ್ಜಿಯಿಂದ ಬರುತ್ತಿದ್ದೇನೆ. ಜೀವನದಲ್ಲಿ ತುಂಬಾ ಸಂತೋಷದಿಂದ ಇದ್ದೇನೆ. ನಾನು ಎಂತಹ ಪರಿಸ್ಥಿತಿಯಲ್ಲಿದ್ದಾಗಲೂ ನನ್ನ ಅಭಿಮಾನಿಗಳ ಪ್ರೀತಿ ಹಾಗೆಯೇ ಇದೆ. ಮೋನಿಕಾ ಳೊಂದಿಗೆ ಪ್ರೀತಿಗೆ ಬಿದ್ದ ಬಳಿಕ ಅಭಿಮಾನಿಗಳ ಪ್ರೀತಿ ಏನು ಎಂಬುದು ತಿಳಿದಿದೆ ಎಂದಿದ್ದಾರೆ.

ಏಳು ವರ್ಷಗಳ ಬಳಿಕ ನಾನು ಬರುತ್ತಿದ್ದೇನೆ. ಇದೀಗ ನಾನು ಮತ್ತೇ ಹುಟ್ಟಿದ್ದೇನೆ. ಮತ್ತೆ ಹೊಸ ಜೀವನ ಆರಂಭಿಸುತ್ತಿದ್ದೇನೆ. ಇನ್ನು ಮುಂದೆ ರಾಂಪ್ ಆಡಿಸುತ್ತೇನೆ. ನನ್ನನ್ನು ಅಭಿಮಾನಿಗಳು ಎಂದಿನಂತೆ ಆದರಿಸುತ್ತಾರೆ ಎಂದು ನಂಬಿದ್ದೇನೆ. ಇನ್ನೂ ಉಸ್ತಾದ್ ಶೋ ಪ್ರತೀ ವಾರ ಒಂದು ಎಪಿಸೋಡ್ ಇರುತ್ತದೆ. ಇದರಲ್ಲಿ ಪ್ರತಿವಾರ ಸೆಲೆಬ್ರೆಟಿಗಳು ಬರುತ್ತಾರೆ. ಆದರೆ ಯಾವಾಗ ಯಾರು ಬರುತ್ತಾರೆ ಎಂಬುದು ಮಾತ್ರ ದೊಡ್ಡ ಸಸ್ಪೆನ್ಸ್. ನಿಮಗೆ ಮೊದಲ ಎಪಿಸೋಡ್ ಆದ ಬಳಿಕ ಅದು ಯಾರು ಎಂದು ತಿಳಿಯುತ್ತದೆ. ಇದೇ ಸಮಯದಲ್ಲಿ ಬಾಲಕೃಷ್ಣರವರ ಅನ್ ಸ್ಟಾಪುಬಲ್ ಶೋ ಬಗ್ಗೆ ಸಹ ಮಾತನಾಡಿದ ಅವರು ಅವರದ್ದು ದೊಡ್ಡ ವೃಕ್ಷಂದ ಶೋ, ಅವರೊಂದಿಗೆ ನಾವು ಹೋಲಿಸಿಕೊಳ್ಳುವುದಿಲ್ಲ. ನಮ್ಮದು ವಿಭಿನ್ನವಾದ ಪ್ರತ್ಯೇಕವಾದ ಶೋ ಎಂದು ಹೇಳಿದ್ದಾರೆ. ಆದರೆ ಈ ಶೋ ಮಾತ್ರ ಪಕ್ಕಾ ಎಂಟರ್‍ ಟೈನ್ ಕೊಡುವಂತ ಶೋ ಆಗಿರಲಿದೆ ಎಂದಿದ್ದಾರೆ. ಇನ್ನೂ ಈ ಶೋ ಈಟಿವಿ ವಿನ್ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಮನೋಜ್ ತಿಳಿಸಿದ್ದಾರೆ.