Film News

ಸಮಂತಾ ನೀನು ಜೀವನದ ಜೊತೆ ವರ್ಷದಿಂದ ಎಷ್ಟರ ಮಟ್ಟಿಗೆ ಹೋರಾಟ ಮಾಡುತ್ತಿದ್ದಿಯಾ ಎಂಬುದು ಯಾರಿಗೂ ತಿಳಿದಿಲ್ಲ ಎಂದ ವಿಜಯ್….!

ಸ್ಟಾರ್‍ ನಟಿ ಸಮಂತಾ ಇತ್ತೀಚಿಗಷ್ಟೆ ಮಯೋಸೈಟೀಸ್ ಎಂಬ ಭಯಾನಕ ವ್ಯಾದಿಯಿಂದ ನೋವನ್ನು ಅನುಭವಿಸಿ, ಇದೀಗ ಕೊಂಚ ಕೊಂಚ ಅದರಿಂದ ಹೊರಬಂದು ಮತ್ತೆ ಮೊದಲ ಸ್ಥಿತಿಗೆ ಬಂದಿದ್ದು, ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಆಕೆ ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು, ಆಕೆಗೆ ಅನೇಕ ಸೆಲೆಬ್ರೆಟಿಗಳು ಶುಭಾಷಯಗಳನ್ನು ಕೋರುತ್ತಿದ್ದಾರೆ. ಇದೀಗ ರೌಡಿ ಹಿರೋ ವಿಜಯದೇವರಕೊಂಡ ಸಮಂತಾ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸುದೀರ್ಘವಾದ ನೋಟ್ ಒಂದನ್ನು ಬರೆದಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಮಂತಾ ಮಯೋಸೈಟಿಸ್ ಕಾರಣದಿಂದ ಹೊರಗಿನ ಪ್ರಪಂಚಕ್ಕೆ ದೂರವಾಗಿ ಸುಮಾರು ತಿಂಗಳುಗಳ ಕಾಲ ಅಜ್ಞಾತದಲ್ಲೇ ವಾಸ ಮಾಡಿದ್ದರು. ಬಳಿಕ ಆಕೆ ಯಶೋಧ ಸಿನೆಮಾದ ಸಮಯದಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲೇ ಆಕೆ ತಾನು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ವಿಚಾರ ಹಂಚಿಕೊಂಡರು. ಆಗ ಅನೇಕ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ಆಕೆಗೆ ಧೈರ್ಯ ತುಂಬಿದರು. ಕಠಿಣ ಶ್ರಮ ಹಾಗೂ ಧೈರ್ಯದಿಂದ ಮಯೋಸೈಟಿಸ್ ಸಮಸ್ಯೆಯನ್ನು ಎದುರಿಸಿದ್ದರು. ಯಶೋಧ ಸಿನೆಮಾದ ಬಳಿಕ ಸಮಂತಾ ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನೆಮಾ ಏ.14 ರಂದು ಬಿಡುಗಡೆಯಾಗಿದೆ. ಶಾಕುಂತಲಂ ಸಿನೆಮಾ ಒಳ್ಳೆಯ ಸಕ್ಸಸ್ ಕಾಣಲಿ ಎಂದು ಸಮಂತಾ ಹಾಗೂ ಚಿತ್ರತಂಡಕ್ಕೆ ಎಲ್ಲಾ ಕಡೆಯಿಂದ ಶುಭಾಷಯಗಳು ಹರಿದುಬರುತ್ತಿವೆ.

ಇನ್ನೂ ವಿಜಯದೇವರಕೊಂಡ ಸಮಂತಾ ಬಗ್ಗೆ ಒಂದು ನೋಟ್ ಹಂಚಿಕೊಂಡಿದ್ದಾರೆ. ಸ್ಯಾಮಿ, ನೀನು ತುಂಬಾ ಪ್ರೀತಿಯಿಂದ ಸದಾ ಸರಿಯಾ ಕೆಲಸ ಮಾಡುತ್ತಾ ಉತ್ಸಾಹದಿಂದ ಇರುತ್ತೀರಾ, ಈಗಾಗಲೇ ಸಿನೆಮಾಗಳಲ್ಲಿ ಪ್ರತಿಯೊಂದು ಶಾಟ್ ಗಾಗಿ ತುಂಬಾ ಶ್ರಮ ವಹಿಸುತ್ತಿದ್ದಿಯಾ. ಅದರ ಮೇಲೇಯೆ ಕರಿಯರ್‍ ಸಹ ಅವಲಂಭಿಸಿದೆ. ಆದರೆ ಕಳೆದ ಒಂದು ವರ್ಷದಿಂದ ನೀನು ಜೀವನದಲ್ಲಿ ತುಂಬಾ ಹೋರಾಟ ಮಾಡುತ್ತಿದ್ದಿಯಾ. ಇದು ಯಾರಿಗೂ ತಿಳಿಯದೇ ಇರಬಹುದು. ಆದರೂ ನಗುತ್ತಾ ಸಿನೆಮಾಗಳಲ್ಲಿ ಮುಂದೆ ಬರುತ್ತಿದ್ದೀಯಾ, ನಿನ್ನ ಶರೀರ ವಿಶ್ರಾಂತಿ ಪಡೆದುಕೊ ಎಂದು ಹೇಳುತ್ತಿದ್ದರೂ, ಕೆಲಸಕ್ಕೆ ಬ್ರೇಕ್ ಅವಸರವಿದೆ ಎಂದು ಹೇಳುತ್ತಿದ್ದರೂ ಮುಂದೆ ಸಾಗುತ್ತಿದ್ದೀಯಾ. ಅಂತಹ ಸನ್ನಿವೇಶದಲ್ಲಿ ಬಿಡುಗಡೆಯಾದ ಶಾಕುಂತಲಂ ಸಿನೆಮಾ ಜಯ ಗಳಿಸಲಿ ಎಂದು ನಾನು ಹಾರೈಸುತ್ತಿದ್ದೇನೆ. ನಿನ್ನ ಛಲ, ಅಭಿಮಾನಿಗಳ ಪ್ರೀತಿ ನಿನ್ನು ಸದಾ ಸುರಕ್ಷಿತವಾಗಿಯೇ ಇಡುತ್ತದೆ. ಇನ್ನು ಮುಂದೆ ಎಲ್ಲ ಒಳ್ಳೆಯದೇ ಆಗುತ್ತದೆ, ಇಂತಿ ನಿನ್ನ ಪ್ರೀತಿಯ ವಿಜಯ್ ಎಂದು ನೋಟ್ ಹಂಚಿಕೊಂಡಿದ್ದಾರೆ.

ಇನ್ನೂ ಈ ಪೋಸ್ಟ್ ಗೆ ಸಮಂತಾ ಸಹ ರಿಯಾಕ್ಟ್ ಆಗಿದ್ದಾರೆ. ಇಂತಹ ಸಮಯದಲ್ಲೇ ನನಗೆ ಬೇಕಾಗಿದ್ದು ಇಂತಹ ಬೆಂಬಲ. ಮಾತುಗಳು ಸಹ ಬರುತ್ತಿಲ್ಲ. ಥ್ಯಾಂಕ್ಯೂ ಮೈ ಹಿರೋ ಎಂದು ರಿಪ್ಲೆ ಕೊಟ್ಟಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಖುಷಿ ಸಿನೆಮಾ ಸೆಟ್ಟೇರಿದ್ದು, ಭರದಿಂದ ಶೂಟಿಂಗ್ ಸಾಗುತ್ತಿದೆ. ಸೆ.1 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ.

Most Popular

To Top