Film News

150 ಮಕ್ಕಳನ್ನು ದತ್ತು ಪಡೆದ ನಟ ರಾಘವ ಲಾರೆನ್ಸ್, ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು….!

ಸೌತ್ ಸಿನಿರಂಗದ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟನಾಗಿ, ಕೊರಿಯೋಗ್ರಾಫರ್‍ ಆಗಿ ನಿರ್ದೇಶಕನಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ರಾಘವ ಲಾರೆನ್ಸ್ ರವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ನಟ ರಾಘವ ಲಾರೆನ್ಸ್ ರವರು 150 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಅವರಿಗೆ ವಿದ್ಯಾಭ್ಯಾಸ ಒದಗಿಸುವ ಭರವಸೆ ಸಹ ಕೊಟ್ಟಿದ್ದಾರೆ. ಇನ್ನೂ ಆ ಮಕ್ಕಳೊಂದಿಗೆ ರಾಘವ ಸೆಲ್ಫಿ ತೆಗೆದುಕೊಂಡಿದ್ದು. ಈ ಸೆಲ್ಫಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳ ಜೊತೆಗೆ ಸಿನೆಮಾ ಸೆಲಬ್ರೆಟಿಗಳೂ ಸಹ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ನಟ ರಾಘವ ಲಾರೆನ್ಸ್ ಸಿನೆಮಾಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಟ್ವಿಟರ್‍ ನಲ್ಲಿ ಸಹ ರಾಘವ ಆಕ್ಟಿವ್ ಆಗಿರುತ್ತಾರೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ಹಾದಿಯಲ್ಲೇ ರಾಘವ ಲಾರೆನ್ಸ್ 150 ಮಕ್ಕಳನ್ನು ದತ್ತು ಪಡೆದುಕೊಂಡು ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ತಮ್ಮ ಹೊಸ ಸಿನೆಮಾ ರುಧ್ರ ಆಡಿಯೋ ಲಾಂಚ್ ಕಾರ್ಯಕ್ರಮದ ಮೂಲಕ ಈ ಸುದ್ದಿಯನ್ನು ರಾಘವ ಲಾರೆನ್ಸ್ ಹಂಚಿಕೊಂಡಿದ್ದಾರೆ. 150 ಮಕ್ಕಳಿಗೆ ನಮ್ಮ ರುಧ್ರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಕ್ಕಳನ್ನು ದತ್ತು ಪಡೆದುಕೊಂಡಿದ್ದೇನೆ. ನಿಮ್ಮ ಜೊತೆ ಈ ಖುಷಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮ ಆರ್ಶಿವಾದ ನನ್ನ ಮೇಲೆ ಸದಾ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಲಾರೆನ್ಸ್ ರುಧ್ರುಡು ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೇ ಈ ವಿಚಾರ ತಿಳಿಸಿದ್ದಾರೆ. ಜೊತೆಗೆ ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳಲು ಕಷ್ಟಪಡುತ್ತಿದ್ದರೇ ಅಥವಾ ಹೃದಯಕ್ಕೆ ಸಂಬಂಧಿಸಿದ ಏನಾದರೂ ಸಮಸ್ಯೆಗಳಿದ್ದರೇ ನನ್ನನ್ನು ಸಂಪರ್ಕ ಮಾಡಿ ಎಂದು ಕಾರ್ಯಕ್ರಮದಲ್ಲೇ ರಾಘವ ಲಾರೆನ್ಸ್ ಹೇಳಿದ್ದಾರೆ. ಇನ್ನೂ ರಾಘವ ಲಾರೆನ್ಸ್ ರವರ ಈ ಸಾಮಾಜಿಕ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಮ್ಮದು ಗೋಲ್ಡನ್ ಹಾರ್ಟ್, ನಿಮ್ಮಿಂದ ಅನೇಕ ಮಕ್ಕಳ ಜೀವನದಲ್ಲಿ ಜ್ಞಾನ ಜ್ಯೋತಿ ಬೆಳಗಲಿದೆ. ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಸಹ ಲಾರೆನ್ಸ್ ಪೋಸ್ಟ್ ಗೆ ರಿಯಾಕ್ಟ್ ಆಗಿದ್ದಾರೆ. respect ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ನಟ ರಾಘವ ಲಾರೆನ್ಸ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ.  ಅವರ ಟ್ರಸ್ಟ್ ಮೂಲಕ ಕಳೆದ ಕೋವಿಡ್ ಸಮಯದಲ್ಲೂ ಸಹ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದರು. ಕೋವಿಡ್ ಪರಿಹಾರಕ್ಕಾಗಿ ಮೂರು ಕೋಟಿ ಸಹ ನೀಡಿದ್ದರು. ಅವರ ಸಮಾಜ ಸೇವೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Most Popular

To Top