ಸ್ಟಾರ್ ನಟ ಮಹೇಶ್ ಬಾಬು ರವರಿಗೆ ಹುಟ್ಟುಹಬ್ಬದ ಸಂಭ್ರಮ, ಸ್ಪೇಷಲ್ ಆಗಿ ವಿಷ್ ಮಾಡಿದ ಪತ್ನಿ ನಮ್ರತಾ…..!

ಟಾಲಿವುಡ್ ಸೂಪರ್‍ ಸ್ಟಾರ್‍ ಮಹೇಶ್ ಬಾಬು ರವರು ಇಂದಿಗೆ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆ.9 ರಂದು ಅವರ ಹುಟ್ಟುಹಬ್ಬವಾಗಿದ್ದು, ಕೇವಲ ತೆಲುಗುನಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಸಿನಿರಂಗದ ಸೆಲೆಬ್ರೆಟಿಗಳ ಜೊತೆಗೆ ಅನೇಕ ರಾಜಕಾರಣಿಗಳೂ ಸಹ ಮಹೇಶ್ ಬಾಬು ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ರವರ ಪತ್ನಿ ನಮ್ರತಾ ತನ್ನ ಮುದ್ದಿನ ಪತಿಗೆ ಪ್ರೀತಿಯಿಂದ ವಿಶೇಷವಾಗಿ ಶುಭಾಷಯ ಕೋರಿದ್ದಾರೆ.

ಟಾಲಿವುಡ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ನಟರ ಸಾಲಿಗೆ ಪ್ರಿನ್ಸ್ ಮಹೇಶ್ ಬಾಬು ಸಹ ಸೇರುತ್ತಾರೆ. ಅವರಿಗೆ ವಯಸ್ಸಾದರೂ ಸಹ ಯಂಗ್ ನಟನಂತೆ ಕಾಣಿಸಿಕೊಳ್ಳುತ್ತಾರೆ. ಇನ್ನೇ ಹಾಫ್ ಸೆಂಚುರಿಗೆ ಹತ್ತಿರವಾಗಿದ್ದರೂ ಆತನಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನೂ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಮಹೇಶ್ ಬಾಬು. ಇದೀಗ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಅನೇಕ ಕಡೆ ವಿಶೇಷವಾಗಿ ಅವರ ಹುಟ್ಟುಹಬ್ಬ ಆಚರಿಸಿ ಶುಭಾಷಯಗಳನ್ನು ಸಹ ಕೋರುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ರವರ ಪತ್ನಿ ನಮ್ರತಾ ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಸದ್ಯ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ನಮ್ರತಾ ತನ್ನ ಇನ್ಸ್ಟಾ ಖಾತೆಯಲ್ಲಿ ಮಹೇಶ್ ಬಾಬು ಗೆ ಸ್ಪೇಷಲ್ ಶುಭಾಷಯ ಕೋರಿದ್ದಾರೆ. ನಮ್ರತಾ ಹಾಗೂ ಮಹೇಶ್ ಬಾಬು ಇಬ್ಬರೂ ಇರುವ ಪೊಟೋ ಶೇರ್‍ ಮಾಡಿದ್ದಾರೆ. ಕುಟುಂಬದ ಜೊತೆಗೆ ವೆಕೇಷನ್ ನಲ್ಲಿರುವ ಮಹೇಶ್ ಬಾಬು ಹಾಗೂ ನಮ್ರತಾ ರಾತ್ರಿ ಸಮಯದಲ್ಲಿ ಏಕಾಂತವಾಗಿರುವ ಪೊಟೋ ಶೇರ್‍ ಮಾಡಿದ್ದಾರೆ. ಮಹೇಶ್ ಬಾಬು ರನ್ನು ಹಿಂಬದಿಯಿಂದ ತಬ್ಬಿಕೊಂಡು ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಈ ಪೊಟೋ ಶೇರ್‍ ಮಾಡಿದ ನಮ್ರತಾ ಹ್ಯಾಪಿ ಬರ್ತ್‌ಡೇ ಎಂಬಿ ಈ ದಿನ, ಪ್ರತಿ ದಿನ ನೀನೇ ನೀನೇ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ನಮ್ರತಾ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೋಸ್ಟ್ ನೋಡಿದ ಮಹೇಶ್ ಬಾಬು ಫ್ಯಾನ್ಸ್ ಫಿದಾ ಆಗಿದ್ದಾರೆ.

ಇನ್ನೂ ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ವಿದೇಶಿ ಪ್ರಯಾಣದಲ್ಲಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಸಹ ವಿದೇಶದಲ್ಲೇ ಆಚರಿಸಿಕೊಂಡಿದ್ದಾರೆ. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಗುಂಟೂರು ಖಾರಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ಣೂ ಮಹೇಶ್ ಬಾಬು ರವರ ಹುಟ್ಟುಹಬ್ಬದ ಅಂಗವಾಗಿ ಈ ಸಿನೆಮಾ ತಂಡದಿಂದ ಸ್ಪೇಷಲ್ ಪೋಸ್ಟರ್‍ ಸಹ ರಿಲೀಸ್ ಆಗಿದೆ. ಈ ಸಿನೆಮಾದ ಜೊತೆಗೆ ರಾಜಮೌಳಿ ಜೊತೆಗೆ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಸಹ ನಟಿಸಲಿದ್ದಾರೆ.