ಸ್ಪಂದನಾ ಮೃತದೇಹದ ಅಂತಿಮ ದರ್ಶನಕ್ಕೆ ಜನಸ್ತೋಮ, ಸಿನಿ ಹಾಗೂ ರಾಜಕೀಯ ಗಣ್ಯರಿಂದ ಅಂತಿಮ ದರ್ಶನ…..!

Follow Us :

ಸ್ಯಾಂಡಲ್ ವುಡ್ ನಟ ಚಿನ್ನಾರಿ ಮುತ್ತ ಎಂದೇ ಕರೆಯಲಾಗುವ ವಿಜಯ ರಾಘವೇಂದ್ರ ರವರ ಪ್ರೀತಿಯ ಪತ್ನಿ ಹೃದಯಾಘಾತದಿಂದ ಕಳೆದೆರಡು ದಿನಗಳ ಹಿಂದೆ ವಿದೇಶದಲ್ಲಿ ಮೃತಪಟ್ಟಿದ್ದರು. ದೇವರ ವಿಧಿಯಾಟಕ್ಕೆ ವಿಜಯರಾಘವೇಂದ್ರ ಪತ್ನಿ ಇಹಲೋಕ ತ್ಯೆಜಿಸಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆಗಾಗಿ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದರು. ವಿವಾಹ ವಾರ್ಷಿಕೋತ್ಸವ ದಿನಾಂಕಕ್ಕೂ ಮುಂಚೆ ಆಕೆ ಇಹಲೋಕ ತ್ಯೆಜಿಸಿದ್ದು, ಅವರ ಕುಟುಂಬ ಶೋಕಸಾಗರದಲ್ಲಿ ತುಂಬಿದೆ.

ವಿದೇಶದಲ್ಲಿ ಮೃತಪಟ್ಟ ಸ್ಪಂದನಾಳ ಮೃತದೇಹ ನಿನ್ನೆಯಷ್ಟೆ ಬೆಂಗಳೂರಿಗೆ ತರಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಕೆ ಶಿವರಾಂ ರವರ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಪಂದನಾಳ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಅವರ ಆಪ್ತರು ಸೇರಿದಂತೆ ಅನೇಕ ಸಾರ್ವಜನಿಕರು ಸಾಲುಗಟ್ಟಿ ನಿಂತು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೂ ಗಣ್ಯರು ಸ್ಪಂದನಾಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್‍, ಕೋಮಲ್, ಸುಧಾರಾಣಿ, ಗಿರಿಜಾ ಲೊಕೇಶ್, ವಿಜಯ್ ಪ್ರಕಾಶ್, ಶ್ರೀನಾಥ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದು ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಸ್ಪಂದನಾ ರವರ ಅಂತಿಮ ದರ್ಶನ ಪಡೆದ ಅನೇಕರು ಸ್ಪಂದನಾಳ ಬಗ್ಗೆ ಭಾವುಕ ನುಡಿಗಳನ್ನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೋಡಿ ಮಠದ ಶ್ರೀಗಳು, ಡಿಸಿಎಂ ಡಿ.ಕೆ.ಶಿವಕುಮಾರ್‍, ಅಶ್ವಿನಿ ಪುನಿತ್ ರಾಜ್ ಕುಮಾರ್‍, ರಾಘವೇಂದ್ರ ರಾಜಕುಮಾರ್‍, ಗಿರಿಜಾ ಲೋಕೇಶ್, ವಿಜಯ್ ಪ್ರಕಾಶ್, ನಿರ್ದೇಶಕ ತರುಣ್ ಸುಧೀರ್‍, ಸ್ಪೀಕರ್‍ ಯುಟಿ ಖಾದರ್‍ ಸೇರಿದಂತೆ ಅನೇಕರು ಸ್ಪಂದನಾಳ ಅಂತಿಮ ದರ್ಶನ ಪಡೆದು ಭಾವುಕರಾಗಿದ್ದಾರೆ.

ನಟ ವಿಜಯ್ ರಾಘವೇಂದ್ರ ಹಾಗೂ ಆತನ ಪತ್ನಿ ಸ್ಪಂದನಾ ಬ್ಯಾಂಕಾಂಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿರುವಾಗಲೇ ಆಕೆಗೆ ಹೃದಯಾಘಾತವಾಗಿ ಇಹಲೋಕ ತ್ಯೆಜಿಸಿದ್ದಾರೆ. ಆಕೆಯ ಅಕಾಲಿಕ ಮರಣಕ್ಕೆ ಸಿನಿರಂಗದ ಜೊತೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಇನ್ನೂ ಆಕೆಯ ಮರಣೋತ್ತರ ಪರೀಕ್ಷೆ ಥಾಯ್ಲೆಂಟ್ ನಲ್ಲಿ ನಡೆದಿತ್ತು. ನಿನ್ನೆ ರಾತ್ರಿಯಷ್ಟೆ ಸ್ಪಂದನಾಳ ಮೃತ ದೇಹ ಬೆಂಗಳೂರಿಗೆ ಬಂದಿತ್ತು. ಇನ್ನೂ ಇಂದೇ ಸ್ಪಂದನಾಳ ಅಂತ್ಯಸಂಸ್ಕಾರ ಸಹ ನಡೆಯಲಿದೆ. ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.