ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಅದಿತಿ ರಾವ್ ಹೈದರಿ, ವೈರಲ್ ಆದ ಕಾಮೆಂಟ್ಸ್…..!

Follow Us :

ಸಿನಿರಂಗದಲ್ಲಿ ಆಗಾಗ ಕಾಸ್ಟಿಂಗ್ ಕೌಚ್ ಬಗ್ಗೆ ಕಾಮೆಂಟ್ ಗಳು ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಮಿಟೂ ಅಭಿಯಾನ ಶುರುವಾದ ಬಳಿಕ ಅನೇಕ ನಟಿಯರು ಒಪೆನ್ ಆಗಿಯೇ ಈ ಬಗ್ಗೆ ರಿಯಾಕ್ಟ್ ಆಗುತ್ತಿರುತ್ತಾರೆ. ಸ್ಟಾರ್‍ ನಟಿಯರಿಂದ ಕಿರುತೆರೆ ನಟಿಯರು, ಲೇಡಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳು ಈ ಬಗ್ಗೆ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇದೀಗ ಸೌತ್ ನಟಿ ಅದಿತಿ ರಾವ್ ಹೈದರಿ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸೌತ್ ನಟಿ ಅದಿತಿ ರಾವ್ ಹೈದರಿ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಬಂದಂತಹ ಪ್ರಶ್ನೆಗೆ ಆಕೆ ರಿಯಾಕ್ಟ್ ಆಗಿದ್ದಾರೆ. ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಯಾರನ್ನೂ ನಿಂಧನೆ ಮಾಡುವಂತಹ ಅವಶ್ಯಕತೆಯಿಲ್ಲ. ಅದೇ ರೀತಿ ಯಾರಲ್ಲೂ ತಪ್ಪು ಕಂಡು ಹಿಡಿಯುವ ಅವಶ್ಯಕತೆಯಿಲ್ಲ. ಅದರಿಂದ ಆಗುವುದಾದರೂ ಏನು ಇಲ್ಲ. ಯಾವುದೇ ಏನೇ ಇರಲಿ ಹುಡುಗಿಯರ ಬಲಹೀನತೆ ಕಾರಣದಿಂದ ಅದು ಡಿಪೆಂಡ್ ಆಗಿರುತ್ತದೆ. ಅವರ ಇಚ್ಚೆಯಂತೆ ಕಮಿಟ್ ಮೆಂಟ್ ಕೊಟ್ಟ ಬಳಿಕ ಅದರ ಬಗ್ಗೆ ಮಾತನಾಡುವುದು, ಕಾಮೆಂಟ್ಸ್ ಮಾಡುವುದು ಅನವಶ್ಯಕ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಅಷ್ಟೇಅಲ್ಲದೇ ನಾವು ಬಲಹೀನವಾಗಿದ್ದರೇ ಯಾರಾದರೂ ಅದರ ಅಡ್ಬಾಂಟೇಜ್ ಪಡೆದುಕೊಳ್ಳುತ್ತಾರೆ. ನಮ್ಮನ್ನು ನಾವು ಸ್ಟ್ರಾಂಗ್ ಆಗಿ ಇಟ್ಟುಕೊಳ್ಳಬೇಕು. ಕಾಸ್ಟಿಂಗ್ ಕೌಚ್ ಗಳಂತಹವುಗಳಿಗೆ ಯಾರೂ ಬಾಗಬಾರದು ಎಂದು ಹೇಳಿದ್ದಾರೆ. ಇನ್ನೂ ಅದಿತಿ ರಾವ್ ಹೈದರಿ ನೀಡಿದ ಹೇಳಿಕೆಗಳು ಸಿನಿರಂಗದಲ್ಲಿ ಚರ್ಚನೀಯವಾದ ಅಂಶವಾಗಿದೆ. ಒಂದು ಬಾರಿ ತಮ್ಮಿಷ್ಟದಂತೆ ಕಮಿಟ್ ಮೆಂಟ್ ಕೊಟ್ಟ ಬಳಿಕ ಅದರ ಬಗ್ಗೆ ಕಾಮೆಂಟ್ ಮಾಡುವುದು ಅನವಶ್ಯಕ ಎಂದು ಅದಿತಿ ಪರೋಕ್ಷವಾಗಿ ಹೇಳಿದ್ದಾರೆ.  ಇನ್ನೂ ಅದಿತಿಯ ಈ ಹೇಳಿಕೆಗಳ ಬಗ್ಗೆ ಬೇರೆ ನಟಿಯರ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಸುಮಾರು ವರ್ಷಗಳಿಂದ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ದಾರ್ಥ್ ನಡುವೆ ಲವ್ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಈ ಬಗ್ಗೆ ಅವರಿಬ್ಬರೂ ಓಪೆನ್ ಆಗದೇ ಇದ್ದರೂ ಸಹ ಅವರ ನಡವಳಿಕೆಗಳು ಅದೇ ರೀತಿ ಇದೆ ಎಂದು ಹೇಳಬಹುದಾಗಿದೆ. ಇನ್ನೂ ಶೀಘ್ರದಲ್ಲೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ.