ಮಹೇಶ್ ಬಾಬು ನ್ಯೂ ಲುಕ್ ಗೆ ಫಿದಾ ಆದ ನಮ್ರತಾ, ಬೋಲ್ಡ್ ಕಾಮೆಂಟ್ ವೈರಲ್….!

Follow Us :

ಟಾಲಿವುಡ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ನಟರ ಸಾಲಿಗೆ ಪ್ರಿನ್ಸ್ ಮಹೇಶ್ ಬಾಬು ಸಹ ಸೇರುತ್ತಾರೆ. ಅವರಿಗೆ ವಯಸ್ಸಾದರೂ ಸಹ ಯಂಗ್ ನಟನಂತೆ ಕಾಣಿಸಿಕೊಳ್ಳುತ್ತಾರೆ. ಇನ್ನೇ ಹಾಫ್ ಸೆಂಚುರಿಗೆ ಹತ್ತಿರವಾಗಿದ್ದರೂ ಆತನಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಮಹೇಶ್ ಬಾಬು ರವರ ಲೇಟೆಸ್ಟ್ ಪೊಟೋಶೂಟ್ಸ್ ಮಾಡಿಸಿದ್ದು, ಆ ಪೊಟೋಗಳನ್ನು ನೋಡಿದರೇ ಆತ ಮತಷ್ಟು ಯಂಗ್ ಆಗಿ ಕಾಣಿಸಿದ್ದಾರೆ. ಹಾಲಿವುಡ್ ಹಿರೋಗಳಿಗಿಂತ ಕಡಿಮೆಯಿಲ್ಲ ಎಂಬಂತೆ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆ ಪೊಟೋಗಳನ್ನು ಕಂಡ ನಮ್ರತಾ ಫಿದಾ ಆಗಿದ್ದು, ಬೋಲ್ಡ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಮಹೇಶ್ ಬಾಬು ರವರು ಆಗಾಗ ಕೆಲವೊಂದು ಪೊಟೋಶೂಟ್ಸ್ ಮಾಡಿಸುತ್ತಿರುತ್ತಾರೆ. ಜಾಹಿರಾತುಗಳಿಗಾಗಿ ಅವರು ಆಲ್ಟ್ರಾ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಲೇಟೆಸ್ಟ್ ಪೊಟೊಗಳಲ್ಲಿ ಆತ ಮತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಡೆನೀಮ್ ಶರ್ಟ್, ಗ್ಲಾಸಸ್ ಹಾಕಿಕೊಂಡ ಆಲ್ಟ್ರಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇನ್ನೂ ಮಹೇಶ್ ಬಾಬು ಹ್ಯಾಂಡ್ಸಮ್ ಲುಕ್ಸ್ ಗೆ ಅನೇಕ ಯುವತಿಯರು ಫಿದಾ ಆಗಿದ್ದಾರೆ. ಅದರಲ್ಲೂ ಮಹೇಶ್ ಪತ್ನಿ ನಮ್ರತಾ ಸಹ ಫಿದಾ ಆಗಿದ್ದಾರೆ. ಉಫ್‌… ಎಂದು ಹಾಟ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು ಲುಕ್ಸ್ ಹೃದಯಲ್ಲಿ ಕಿಚ್ಚನ್ನು ಹಚ್ಚುವಂತಿದೆ ಎಂಬ ಅರ್ಥದಲ್ಲಿ ಆಕೆ ಈ ಕಾಮೆಂಟ್ ಮಾಡಿದ್ದಾರೆ ಎನ್ನಲಾಘುತ್ತಿದೆ. ಇದೀಗ ಮಹೇಶ್ ಬಾಬು ಲೇಟೆಸ್ಟ್ ಲುಕ್ಸ್ ಹಾಟ್ ಟಾಪಿಕ್ ಆಗಿದೆ.

ಇನ್ನೂ ಮಹೇಶ್ ಬಾಬು ಗುಂಟೂರು ಕಾರಂ ಎಂಬ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವೊಂದು ಕಾರಣಗಳಿಂದ ಈ ಸಿನೆಮಾದ ಶೂಟಿಂಗ್ ತಡವಾಗುತ್ತಾ ಬಂದಿದೆ. ಆದರೆ ಇತ್ತೀಚಿಗೆ ಬಿಡುವಿಲ್ಲದೇ ಶೂಟಿಂಗ್ ಅನ್ನು ಪೂರ್ಣಗೊಳಿಸಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ಈ ಸಿನೆಮಾ ಶೂಟಿಂಗ್ ಮುಕ್ತಾಯಗೊಳಿಸಿದ ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಸಹ ಮಾಡಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬು ರವರಿಗೆ ಜೋಡಿಯಾಗಿ ಸ್ಟಾರ್‍ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಜೊತೆಗೆ ಈ ಸಿನೆಮಾದಲ್ಲಿ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಸಹ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನೆಮಾವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಥಮನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

ಈ ಸಿನೆಮಾದ ಬಳಿಕ ಮಹೇಶ್ ಬಾಬು ಹಾಗೂ ರಾಜಮೌಳೀ ಕಾಂಬಿನೇಷನ್ ನಲ್ಲಿ ಸಿನೆಮಾ ಸೆಟ್ಟೇರಲಿದೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದೊಂದು ಅಡ್ವೇಂಚರ್‍ ಸಿನೆಮಾ ಆಗಿದ್ದು ಭಾರಿ ಬಜೆಟ್ ಅಂದರೇ ಸುಮಾರು 800 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದಾರಂತೆ. ಈ ಸಿನೆಮಾ ಮೂರು ಪಾರ್ಟ್‌ಗಳಾಗಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.