ಮತ್ತೊಮ್ಮೆ ಐಟಂ ಸಾಂಗ್ ಮೂಲಕ ಸದ್ದು ಮಾಡಲಿದ್ದಾರಂತೆ ಸಮಂತಾ, ವೈರಲ್ ಆದ ಸುದ್ದಿ…!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಅನೇಕ ಸೂಪರ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯಾದರು. ಅದರಲ್ಲೂ ಆಕೆಗೆ ಪುಷ್ಪಾ ಸಿನೆಮಾದಲ್ಲಿನ ಹೂ ಅಂಟವಾ ಮಾಮ ಐಟಂ ಸಾಂಗ್ ಭಾರಿ ಕ್ರೇಜ್ ತಂದುಕೊಟ್ಟಿದೆ ಎಂದರೇ ತಪ್ಪಗಲಾರದು. ಈ ಹಾಡಿನಲ್ಲಿ ಆಕೆ ನೆಕ್ಸ್ಟ್ ಲೆವೆಲ್ ಎಂಬಂತೆ ಬೋಲ್ಡ್ ಆಗಿ ಕುಣಿದಿದ್ದಾರೆ. ಇದೀಗ ಆಕೆ ಮತ್ತೊಂದು ಸಿನೆಮಾದಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದ್ದು, ಹಾಟ್ ಟಾಪಿಕ್ ಆಗಿದೆ.

ಕಳೆದೆರಡು ವರ್ಷಗಳು ನಟಿ ಸಮಂತಾ ಲೈಫ್ ನಲ್ಲಿ ಅತ್ಯಂತ ಕೆಟ್ಟ ದಿನಗಳು ಎಂದೇ ಹೇಳಬಹುದಾಗಿದೆ. ಆಕೆ ಪ್ರೀತಿಸಿ ಮದುವೆಯಾದ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡಿದ್ದು, ಈ ಕಾರಣದಿಂದ ಆಕೆ ಕೊಂಚ ಡಿಪ್ರೆಷನ್ ಗೆ ಹೋಗಿದ್ದು, ಬಳಿಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಅದಾದ ನಂತರ ಮತ್ತೆ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿ ಸುಮಾರು ಎಂಟು ತಿಂಗಳುಗಳ ಕಾಲ ಹೊರಗಿನ ಪ್ರಪಂಚಕ್ಕೆ ಕಾಣದೇ, ಸೋಷಿಯಲ್ ಮಿಡಿಯಾದಲ್ಲೂ ಸಹ ಕಾಣದೇ ಅಜ್ಞಾತ ಜೀವನ ಸಾಗಿಸಿದರು. ಇನ್ನೂ ಆಕೆ ಮಯೋಸೈಟೀಸ್ ವ್ಯಾಧಿಗೆ ತುತ್ತಾಗಿದ್ದನ್ನು ಆಕೆ ತಿಳಿಸಿದ ಬಳಿಕ ಅನೇಕರು ಆಕೆಗೆ ಧೈರ್ಯ ತುಂಬಿದರು. ಇನ್ನೂ ಆಕೆ ಮಯೋಸೈಟೀಸ್ ಎಂಬ ವ್ಯಾಧಿಯಿಂದ ಹೊರಬಂದು ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ಸಮಂತಾ ಗೆ ಪುಷ್ಪಾ ಸಿನೆಮಾದ ಹೂ ಅಂಟಾವಾ ಮಾಮ ಎಂಬ ಹಾಡು ಭಾರಿ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾ ಸೂಪರ್‍ ಹಿಟ್ ಆಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿದೆ. ಜೊತೆಗೆ ಅನೇಕ ಕ್ರಿಕೆಟಿಗರೂ ಸಹ ಈ ಹಾಡಿಗೆ ಫಿದಾ ಆಗಿ ಕುಣಿದಿದ್ದಾರೆ. ಪುಷ್ಪಾ ಸಿನೆಮಾ ಅಷ್ಟೊಂದು ಕ್ರೇಜ್ ಬರಲು ಸಮಂತಾ ಕುಣಿದ ಹೂ ಅಂಟವಾ ಮಾಮ ಹಾಡು ಸಹ ಒಂದಾಗಿದೆ ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೀಗ ಸಮಂತಾ ಅದೇ ಮಾದರಿಯಲ್ಲಿ ಮತ್ತೊಮ್ಮೆ ಕುಣಿಯಲಿದ್ದಾರಂತೆ. ಅದೂ ಟಾಲಿವುಡ್ ಸಿನೆಮಾದಲ್ಲಿ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಜೂನಿಯರ್‍ ಎನ್.ಟಿಆರ್‍ ರವರ ದೇವರ ಸಿನೆಮಾದಲ್ಲಿ ಆಕೆ ಐಟಂ ಸಾಂಗ್ ಮಾಡಲಿದ್ದಾರಾ ಅಥವಾ ಬೇರೆ ಸಿನೆಮಾದಲ್ಲಾಗಲಿ ಕುಣಿಯುವ ಸಾಧ್ಯತೆಯಿದೆ. ಇನ್ನೂ ಒಂದು ಸಾಂಗ್ ಗಾಗಿ ಆಕೆ ಬರೊಬ್ಬರಿ ಒಂದು ಕೋಟಿ ಸಂಭಾವನೆ ಸಹ ಪಡೆದುಕೊಳ್ಳಲಿದ್ದಾರೆ ಈ ಕಾರಣಕ್ಕಾಗಿ ಸಮಂತಾ ಸಹ ಐಟಂ ಸಾಂಗ್ಸ್ ಗೆ ಒಪ್ಪಿಗೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ನಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಜೊತೆಗೆ ಚೆನೈ ಸ್ಟೋರಿಸ್ ಎಂಬ ಸಿನೆಮಾದಲ್ಲಿ ಸಹ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಆಕೆ ಐಟಂ ಸಾಂಗ್ ನಲ್ಲೂ ಸಹ ಕುಣಿಯುವುದಾಗಿ ಸುದ್ದಿಗಳು ಕೇಳಿಬರುತ್ತಿದ್ದು, ಅದು ಯಾವ ಸಿನೆಮಾದಲ್ಲಿ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.