Film News

ತಡವಾಗಿ ಬೆಳಕಿಗೆ ಬಂದ ಘಟನೆ, ಸ್ಟಾರ್ ನಟಿ ಸುಸ್ಮಿತಾ ಸೇನ್ ಗೆ ಹೃದಯಾಘಾತ, ಶಾಕ್ ಆದ ಅಭಿಮಾನಿಗಳು…!

ಮಾಜಿ ವಿಶ್ವ ಸುಂದರಿ ಬಾಲಿವುಡ್ ಸ್ಟಾರ್‍ ನಟಿ ಸುಸ್ಮಿತಾ ಸೇನ್ ವಯಸ್ಸಾದರೂ ಸಹ ಸಿನೆಮಾಗಳೂ ಹಾಗೂ ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಾ ಇನ್ನೂ ತಾನು ಸಿನಿ ರಂಗದಲ್ಲಿ ಬ್ಯುಸಿಯಾಗಿಯೇ ಸಾಗುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಆರ್ಯ ಎಂಬ ವೆಬ್ ಸೀರಿಸ್ ಮೂಲಕ್ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಂಡ ಪೋಸ್ಟ್ ಒಂದನ್ನು ನೋಡಿದ ಅಭಿಮಾನಿಗಳು ಶಾಖ್ ಆಗಿದ್ದಾರೆ. ಆಕೆ ಹೃದಯಾಘಾತಕ್ಕೆ ಗುರಿಯಾಗಿದ್ದಾಗಿ ತಡವಾಗಿ ಸುದ್ದಿ ಹಂಚಿಕೊಂಡಿದ್ದಾರೆ.

ಮಾಜಿ ವಿಶ್ವ ಸುಂದರಿ ಸುಸ್ಮಿತಾ ಸೇನ್ ಸೋಷಿಯಲ್ ಮಿಡಿಯಾದಲ್ಲಿ ಶಾಕಿಂಗ್ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಗುರಿಯಾಗಿದ್ದಾಗಿ, ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಜೊತೆಗೆ ಹೃದಯದಲ್ಲಿ ಸ್ಟಂಟ್ ಸಹ ಅಳವಡಿಸಿದ್ದಾರೆ. ಸದ್ಯ ಚಿಕಿತ್ಸೆಯಿಂದ ಹೆಚ್ಚಿನ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಮಯಕ್ಕೆ ಸ್ಪಂದಿಸಿ ನನ್ನನ್ನು ಗುಣಮುಖರನ್ನಾಗಿ ಮಾಡಿದ ಅನೇಕರಿಗೆ ನಾನು ಕೃತಜ್ಞತೆ ತಿಳಿಸಬೇಕು. ಮತ್ತೊಂದು ಪೋಸ್ಟ್ ನಲ್ಲಿ ಎಲ್ಲವನ್ನೂ ವಿವರಿಸುತ್ತೇನೆ. ಈ ಪೋಸ್ಟ್ ಮಾಡಲು ಕಾರಣ ನನ್ನ ಶ್ರೇಯೋಭಿಲಾಷಿಗಳಿಗೂ ಹಾಗೂ ಅಭಿಮಾನಿಗಳಿಗೆ ನಾನು ಕ್ಷೇಮವಾಗಿದ್ದೇನೆ ಎಂಬುದನ್ನು ತಿಳಿಸಲು. ಸದ್ಯ ನಾನು ಕ್ಷೇಮವಾಗಿದ್ದೇನೆ. ನಾನು ಮೊದಲಿನಂತೆ ಜೀವನ ಸಾಗಿಸಬಹುದು, ನಿಮ್ಮ ಪ್ರೀತಿ ಅಭಿಮಾನಿಗಳಿಗೆ ಕೃತಜ್ಞತೆಗಳು ಎಂದು ಸುಸ್ಮಿತಾ ಸೇನ್ ಪೋಸ್ಟ್ ಮಾಡಿದ್ದಾರೆ.

ಇನ್ನೂ ಸುಸ್ಮಿತಾ ಸೇನ್ ರವರು ಅನರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ಯಾವುದೇ ಸಮಾಚರ ಇರಲಿಲ್ಲ. ಈ ಬಗ್ಗೆ ಎಲ್ಲೂ ಸಹ ವಿಚಾರ ಕೇಳಿಬರಲಿಲ್ಲ. ಆಕೆ ದಿಡೀರ್‍ ನೇ ಸೋಷಿಯಲ್ ಮಿಡಿಯಾದ ಮೂಲಕ ಈ ಶಾಕಿಂಗ್ ವಿಚಾರ ತಿಳಿಸಿದ್ದಾರೆ. ಇನ್ನೂ ಈ ಸುದ್ದಿ ತಿಳಿದ ಕೂಡಲೇ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾಋಎ. ಅದೇ ರೀತಿ ಆಕೆ ಕ್ಷೇಮವಾಗಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ನಟಿ ಸುಸ್ಮೀತಾ ಸೇನ್ ಒಟಿಟಿಯಲ್ಲೂ ಸಹ ಸಕ್ಸಸ್ ಪುಲ್ ಆಗಿ ಜರ್ನಿಯನ್ನು ಸಾಗಿಸುತ್ತಿದ್ದಾರೆ. ಆಕೆ ಅಭಿನಯದ ಆರ್ಯ ತುಂಬಾನೆ ಯಶಸ್ವಿಯಾಗಿತ್ತು. ಇದೀಗ ತಾಲಿ ಎಂಬ ಮತ್ತೊಂದು ವೆಬ್ ಸರಣಿಯಲ್ಲಿ ಆಕೆ ನಟಿಸಿದ್ದಾರೆ. ಆರ್ಯ ಸೀರಿಸ್ ನಲ್ಲಿ ಸುಸ್ಮಿತಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾಲಿ ಸಿರೀಸ್ ನಲ್ಲಿ ಟ್ರಾನ್ಸ್ಜೆಂಡರ್‍ ಪಾತ್ರದಲ್ಲಿ ನಟಿಸಿದ್ದಾರೆ.

ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ಸುಸ್ಮಿತಾ ಸೇನ್ 1994 ನಲ್ಲಿ ಮಿಸ್ ಯೂನಿವರ್ಸ್ ಟೈಟಲ್ ಪಡೆದುಕೊಂಡರು. ಇನ್ನೂ ಈ ಹಿಂದೆ ಆಕೆ ಇನ್ನೂ ಮದುವೆಯಾಗಿಲ್ಲ ಆದರೆ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಸುಮಾರು ವರ್ಷಗಳ ಕಾಲ ಮಾಡಲ್ ರೋಹ್ಮಾನ್ ಎಂಬಾತನೊಂದಿಗೆ ಡೇಟಿಂಗ್ ನಡೆಸಿದ್ದರು. ಸುಸ್ಮಿತಾಗಿಂತ ಆತ 15 ವರ್ಷ ಚಿಕ್ಕವನು. ಬಳಿಕ ಆತನೊಂದಿಗೆ ವಿಬೇದಗಳು ಉದ್ಬವಿಸಿ ಆತನಿಂದ ಬೇರೆಯಾದರು. ಬಳಿಕ 2022 ರಲ್ಲಿ ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಸುದ್ದಿ ಹರಿದಾಡಿತ್ತು.

Most Popular

To Top