Film News

ನಾನು ಸುಂದರವಾಗಿಲ್ಲ ಎಂದು ಮುಖದ ಮೇಲೆ ಹೇಳಿದ್ರು, ಬಳಿಕ ಅದೇ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆದೆ, ಶೋಭಿತಾ ಕಾಮೆಂಟ್ಸ್…!

ನಟಿ ಶೋಭಿತಾ ಹುಟ್ಟಿದ್ದು ತೆಲುಗುನಾಡಲ್ಲಿ ಹುಟ್ಟಿದ ನಟಿಯಾಗಿದ್ದು, ರಾಮನ್ ರಾಘವ 2.0 ಎಂಬ ಬಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಗೂಡಚಾರಿ ಎಂಬ ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟರು. ಅತೀ ಕಡಿಮೆ ಸಮಯದಲ್ಲೇ ಒಳ್ಳೆಯ ಸಕ್ಸಸ್ ಗಳಿಸಿಕೊಂಡ ಈಕೆ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೂಡಾಚಾರಿ ಸಿನೆಮಾದಲ್ಲಿ ಆಕೆಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸೀರಿಸ್ ನಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದಾರೆ. ಈಕೆ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ.

ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ತನ್ನ ಜೀವನದಲ್ಲಿ ಎದುರಾದ ಸಂಘಟನೆಯೊಂದನ್ನು ಮೆಲುಕು ಹಾಕಿಕೊಂಡಿದ್ದಾರೆ. ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆಗೆ ಕೆರಿಯರ್‍ ಆರಂಭದಲ್ಲಿ ತುಂಬಾನೆ ಸಮಸ್ಯೆಗಳು ಎದುರಾಗಿದ್ದವಂತೆ. ಯಾರೂ ಸಹ ಅವಕಾಶ ನೀಡುತ್ತಿರಲಿಲ್ಲವಂತೆ. ಕೆಲವು ಕಡೆ ಅವಮಾನಗಳೂ ಸಹ ಆಗಿತ್ತಂತೆ. ಒಂದು ಖಾಸಗಿ ಕಂಪನಿಗೆ ಜಾಹಿರಾತಿನ ಆಡಿಷನ್ ಗೆ ಹೋದರೇ ಮುಖದ ಮೇಲೆ ನೀನು ಚೆನ್ನಾಗಿಲ್ಲ ಎಂದು ಹೇಳಿದ್ದರಂತೆ. ಆ ಕಂಪನಿ ಬ್ಯಾಕ್ ಗ್ರೌಂಡ್ ಮಾಡಲ್ ಆಗಿಯೂ ಸಹ ಕೆಲಸಕ್ಕೆ ಬರಲ್ಲಿ ಎಂದು ಕಡಿಮೆಯಾಗಿ ಮಾತನಾಡಿದ್ದರಂತೆ. ಬಳಿಕ ಅದೇ ಕಂಪನಿಗೆ ಅಂಬಾಸಿಡರ್‍ ಆಗಿದ್ದಾಗಿ ಶೋಭಿತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

ಈ ಬಗ್ಗೆ ಶೋಭಿತಾ ಮಾತನಾಡುತ್ತಾ ನಾನು ಮಾಡಲಿಂಗ್ ಆರಂಭದಲ್ಲಿ ಒಂದು ಶಾಂಪು ಕಂಪನಿಗೆ ಜಾಹಿರಾತಿನ ಆಡಿಷನ್ ಗೆ ಹೋಗಿದ್ದೆ. ಆಡಿಷನ್ ನಲ್ಲಿ ಅವರು ನನ್ನನ್ನು ನೋಡಿದ ಕೂಡಲೇ ನೀನು ಸುಂದರವಾಗಿಲ್ಲ ಎಂದು ಹೇಳಿದ್ದರು. ಬಳಿಕ ನಾನು ಕೂಡ ಹೌದು ನಾನು ಚೆನ್ನಾಗಿಲ್ಲ ಎಂದು ಒಪ್ಪಿಕೊಂಡೆ. ಆ ಸಮಯದಲ್ಲಿ ನನ್ನ ವಯಸ್ಸು 20 ವರ್ಷ. ಅದೇ ಕೆಲವು ದಿನಗಳ ಬಳಿಕ ಅದೇ ಕಂಪನಿಗೆ ನಾನು ಬ್ರಾಂಡ್ ಅಂಬಾಸಿಡರ್‍ ಆದೆ. ಇದೀಗ ನನಗೆ ತುಂಬಾ ಸಂತೋಷವಾಗಿದೆ. ನಾವು ಅವಮಾನಗಳನ್ನು ಮೆಟ್ಟಿ ನಿಂತಾಗ ಜಯ ಗಳಿಸಬಹುದು. ಸೋಲಿನಿಂದ ಎದೆಗುಂದದೇ ಮುನ್ನುಗ್ಗಬೇಕೆಂದು ಶೋಭಿತಾ ಹೇಳಿದ್ದಾರೆ.

ಇನ್ನೂ ಶೋಭಿತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ಇಬ್ಬರೂ ಡೇಟಿಂಗ್ ನಲ್ಲಿರುವುದಾಗಿ ಸುಮಾರು ದಿನಗಳಿಂದ ರೂಮರ್‍ ಗಳು ಹರಿದಾಡುತ್ತಲೇ ಇದೆ. ಈ ಬಗ್ಗೆ ಈಗಾಗಲೇ ಶೋಭಿತಾ ಸಹ ಅದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುವುದು ನಿಂತಿಲ್ಲ. ಇನ್ನೂ ಇತ್ತೀಚಿಗೆ ಆಕೆ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸೀರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿರೀಸ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸೀರಿಸ್ ನಲ್ಲಿ ಶೋಭಿತಾ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Most Popular

To Top