Film News

ಕಿಯಾರಾ ಗರ್ಭಿಣಿಯಂತೆ, ಬಾಲಿವುಡ್ ಅಂಗಳದಲ್ಲಿ ರೂಮರ್, ಮದುವೆಯಾಗಿ ತಿಂಗಳಾಗಿಲ್ಲ ಆಗಲೇ ಗರ್ಭಿಣಿಯೆಂಬ ರೂಮರ್…!

ಬಾಲಿವುಡ್ ರಂಗದ ಸ್ಟಾರ್‍ ಜೋಡಿ ಕಿಯಾರಾ ಹಾಗೂ ಸಿದ್ದಾರ್ಥ್ ಮೆಲ್ಹೋತ್ರ ಕಳೆದ ಫೆ.7 ರಂದು ಮದುವೆಯಾದರು. ಅವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಆದರೆ ಕಳೆದ ಎರಡು ದಿನಗಳಿಂದ ಈ ಜೋಡಿಯ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಆಲಿಯಾ ಸಹ ಮದುವೆಯಾಗಿ ಎರಡು ತಿಂಗಳೊಳಗೆ ಗರ್ಭಿಣಿಯೆಂದು ಘೋಷಣೆ ಮಾಡಿದ್ದರು. ಈ ಕಾರಣದಿಂದ ಈ ರೂಮರ್‍ ಬಲವಾಗಿ ಕೇಳಿಬರುತ್ತಿದೆ.

ಕಿಯಾರಾ ಅಡ್ವಾನಿ ಗರ್ಭಿಣಿ ಎಂಬ ರೂಮರ್‍ ಹುಟ್ಟಲು ಆಕೆಯ ಡ್ರೆಸ್ ಕಾರಣ ಎನ್ನಲಾಗುತ್ತಿದೆ. ಹೌದು ಕಿಯಾರಾ ಗರ್ಭಿಣಿ ಎಂಬ ರೂಮರ್‍ ಹುಟ್ಟಲು ಆಕೆ ಧರಿಸಿ ಬ್ಲಾಕ್ ಅಂಡ್ ವೈಟ್ ಡ್ರೆಸ್ ಕಾರಣ ಎನ್ನಲಾಗುತ್ತಿದೆ. ಈ ಡ್ರೆಸ್ ನಲ್ಲಿ ಕಿಯಾರಾ ಸೂಪರ್‍ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರೇ ಮತ್ತೆ ಕೆಲವರು ಆ ಡ್ರೆಸ್ ನೋಡಿ ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಒಂದು ಸೆಂಟಿಮೆಂಟ್ ಸಹ ಇದೆ. ಇತ್ತೀಚಿಗೆ ಬಾಲಿವುಡ್ ನ ಕೆಲ ಸೆಲಬ್ರೆಟಿಗಳು ಪೋಲ್ಕಾ ಡಾಟ್ ಡ್ರೆಸ್ ನಲ್ಲಿ ತಾವು ಗರ್ಭಿಣಿಯಾದ ವಿಚಾರವನ್ನು ರಿವೀಲ್ ಮಾಡಿದ್ದರು. ಅನುಷ್ಕಾ ಶರ್ಮಾ, ಆಲಿಯಾ ಭಟ್, ಕರೀನಾ ಕಪೂರ್‍, ಮೀರಾ ರಾಜ್ ಪುತ್, ನೇಹಾ ಧೂಪಿಯಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಇಂತಹುದೇ ಡ್ರೆಸ್ ನಲ್ಲಿ ತಾವು ಗರ್ಭಿಣಿಯಾದ ವಿಚಾರ ಹಂಚಿಕೊಂಡಿದ್ದರು. ಇದೇ ಕಾರಣದಿಂದಲೇ ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎನ್ನಲಾಗಿದೆ.

ಇನ್ನೂ ಇತ್ತೀಚಿಗೆ ಕಿಯಾರಾ ಸಹ ಬ್ಲಾಕ್ ಅಂಡ್ ವೈಟ್ ಪೋಲ್ಕಾ ಡಾಟ್ ಡ್ರೆಸ್ ಧರಿಸಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದರು. ಆಕೆಯ ಡ್ರೆಸ್ ನೋಡಿ ಕಿಯಾರಾ ಗರ್ಭಿಣಿಯೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಬಳಿಕ ಅದೇ ಪ್ರಶ್ನೆಗಳೂ ಸಹ ಉದ್ಬವಿಸಿ ಬಾಲಿವುಡ್ ಅಂಗಳದಲ್ಲಿ ಚರ್ಚೆಗಳು ಶುರುವಾದರು. ಫೆ.7 ರಂದು ಮದುವೆಯಾದ ಸಿದ್ದಾರ್ಥ್ ಕಿಯಾರಾ ಒಂದು ತಿಂಗಳು ಸಹ ಪೂರ್ಣಗೊಂಡಿಲ್ಲ ಆಗಲೇ ಗರ್ಭಿಣಿ ಎಂಬ ರೂಮರ್‍ ಹರಿದಾಡಿದೆ.

ಈ ಹಿಂದೆ ಬಾಲಿವುಡ್ ಸ್ಟಾರ್‍ ನಟ ರಣವೀರ್‍ ಸಿಂಗ್ ಅಂತಹ ಡ್ರೆಸ್ ನಲ್ಲಿ ಕಾಣಿಸಿಕೊಂಡಾಗ ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದು ಸುದ್ದಿಗಳು ಹರಿದಾಡಿದವು. ಅದು ಏನೇ ಇರಲಿ ಮದುವೆಯಾಗಿ ಒಂದು ತಿಂಗಳು ಸಹ ಪೂರ್ಣಗೋಂಡಿಲ್ಲ ಆಗಲೇ ಕಿಯಾರಾ ಗರ್ಭಿಣಿಯಾಗಿದ್ದಾರೆ ಎಂಬ ರೂಮರ್‍ ಮಾತ್ರ ದೊಡ್ಡ ಮಟ್ಟದಲ್ಲೇ ಹರಿದಾಡಿದೆ. ಈ ಬಗ್ಗೆ ಕಿಯಾರಾ ದಂಪತಿ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top