ಆನೆ ಮುಂದೆ ಪೋಸ್ ಕೊಡಲು ಹೋದ ಯುವತಿಯನ್ನು ಎತ್ತೆಸೆದ ಆನೆ, ನಿನಗಿದು ಬೇಕಿತ್ತಾ ಮಗಳೇ ಎಂದ ನೆಟ್ಟಿಗರು…!

Follow Us :

ವನ್ಯ ಜೀವಿಗಳಿಗೆ ಸಂಬಂಧಿಸಿದಂತಹ ಕೆಲವೊಂದು ವಿಡಿಯೋಗಳು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಆನೆಯೊಂದರ ಮುಂದೆ ಪೋಸ್ ಕೊಡಲು ಹೋದ ಯುವತಿಯೊಬ್ಬಳನ್ನು ಆನೆ ಎತ್ತೆಸೆದು ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಪ್ರವಾಸಕ್ಕೆ ಹೋಗುವಂತಹ ಪ್ರವಾಸಿಗರು ಅಲ್ಲಿನ ಸುಂದರವಾದ ತಾಣಗಳಲ್ಲಿ ತಮ್ಮ ಪೊಟೋಗಳನ್ನು ತೆಗೆದುಕೊಳ್ಳುತ್ತಾರೆ. ಮೃಗಾಲಯಗಳಿರುವ ಪ್ರದೇಶಗಳಿಗೂ ಸಹ ಭೇಟಿ ನೀಡುವಂತಹವರು ವಿಡಿಯೋ ಪೊಟೋಗಳನ್ನು ತೆಗೆದುಕೊಳ್ಳುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಆದರೆ ಕೆಲವರಂತೂ ಪ್ರಾಣಿಗಳ ಮುಂದೆ ಹೋಗಿ ಪೊಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇದರಿಂದ ಕೆಲವೊಂದು ಅವಘಡಗಳೂ ಸಹ ಆಗುತ್ತಿರುತ್ತವೆ. ಜೊತೆಗೆ ಸ್ವಾತಂತ್ಯ್ರಕ್ಕೂ ಸಹ ಧಕ್ಕೆಯಾಗಲಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ.

ಗರಿಗಳನ್ನು ತಿನ್ನುತ್ತಿರುವ ಆನೆಯೊಂದರ ಪಕ್ಕಕ್ಕೆ ತೆರಳಿದ ಯುವತಿಯನ್ನು ಆ ಆನೆ ತಳ್ಳಿಹಾಕಿದೆ ಘಟನೆ ನಡೆದಿದೆ. ಸಾಕಾನೆಗಳ ಶಿಬಿರಕ್ಕೆ ತೆರಳಿದ ಯುವತಿ ಆನೆಯ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆನೆ  ಆಕೆಯ ಮೇಲೆ ಧಾಳಿ ಮಾಡಿದೆ. ಆಕೆ ಬರುವುದಕ್ಕೂ ಮುಂಚೆ ಪ್ರಶಾಂತತೆಯಿಂದ ತಿನ್ನುತ್ತಿದ್ದ ಆನೆಗೆ ಭಯ ಶುರುವಾಗಿದ್ದು, ಇದರಿಂದ ಏಕಾಏಕಿ ತಲೆ ಎತ್ತಿ ಯುವತಿ ಮೇಲೆ ಧಾಳಿ ಮಾಡಿದೆ. ಆನೆ ದಾಳಿ ಮಾಡಿದ ರಭಸಕ್ಕೆ ದೂರಕ್ಕೆ ಹಾರಿ ಬಿದ್ದಿದ್ದಾಳೆ. ಆದರೆ ಅದೃಷ್ಟಾವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನೆಟ್ಟಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೂರದಿಂದ ಆನೆ ನೋಡುವುದರ ಬದಲು ಹತ್ತಿರ ಹೋಗೋದು ಬೇಕಿತ್ತಾ ಎಂಬೆಲ್ಲಾ ಕಾಮೆಂಟ್ ಗಳು ಹರಿಬಿಡುತ್ತಿದ್ದಾರೆ.