News

ವಿಚಿತ್ರ ರೀತಿಯ ಚುನಾವಣಾ ಪ್ರಚಾರ, ಕಾಂಡೋಮ್ ಪ್ಯಾಕೆಟ್ ಗಳ ಮೇಲೆ ರಾಜಕೀಯ ಪಕ್ಷಗಳ ಹೆಸರು, ಹಿಂಗೂ ಪ್ರಚಾರ ಮಾಡ್ತಾರ ಎಂದ ನೆಟ್ಟಿಗರು….!

ಚುನಾವಣಾ ಸಮಯದಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಲಿ ಎಂದು ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತಾ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವು ಕಡೆ ಹಣ ಸೇರಿದಂತೆ ಕೆಲವೊಂದು ಗಿಫ್ಟ್ ಗಳನ್ನು ಸಹ ನೀಡಿರುವುದನ್ನು ನಾವು ನೋಡಿದ್ದೇವೆ. ಆದರೆ ಕಾಂಡೋಮ್ ಪ್ಯಾಕೆಟ್ ಗಳ ಮೇಲೆ ರಾಜಕೀಯ ಪಕ್ಷಗಳ ಹೆಸರನ್ನು ಮುದ್ರಿಸಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ನಡೆದಿರೋದು ಎಲ್ಲಿ ಎಂಬ ವಿಚಾರ ತಿಳಿಯಲು ಈ ಸ್ಟೋರಿ ನೋಡಿ.

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯ ರಂಗು ದಿನೇ ದಿನೇ ಏರುತ್ತಿದೆ. ಈ ಭಾರಿ ಗೆಲುವು ಸಾಧಿಸಲು ಎಲ್ಲಾ ಪಕ್ಷಗಳೂ ತಮ್ಮದೇ ಆದ ಶೈಲಿಯಲ್ಲಿ ಸಿದ್ದವಾಗುತ್ತಿವೆ. ರಾಜಕೀಯ ಪಕ್ಷಗಳ ನಾಯಕರುಗಳು ಪ್ರಚಾರದಲ್ಲಿ ನಿರತರರಾಗಿದ್ದಾರೆ. ಆದರೆ ಆಂಧ್ರಪ್ರದೇಶದಲ್ಲಿ ಮಾತ್ರ ವಿಚಿತ್ರವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಕುಕ್ಕರ್‍, ಸೀರೆ, ಹಣ ಸೇರಿದಂತೆ ಹಲವಾರು ರೀತಿಯ ಉಡುಗೊರೆಗಳನ್ನು ಹಂಚುವ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಡೋಮ್ ಪ್ಯಾಕೆಟ್ ಗಳ ಮೇಲೆ ತಮ್ಮ ಪಕ್ಷಗಳ ಹೆಸರುಗಳನ್ನು ಮುದ್ರಿಸಿ ಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಆಂಧ್ರಪ್ರದೇಶದ ಆಡಳಿತರೂಢ ಪಕ್ಷ ವೈ.ಎಸ್.ಆರ್‍. ಕಾಂಗ್ರೇಸ್ ಹಾಗೂ ವಿಪಕ್ಷವಾದ ತೆಲುಗು ದೇಶಂ ಪಾರ್ಟಿಗಳ ತಮ್ಮ ಪಕ್ಷದ ಚಿಹ್ನೆಗಳುಳ್ಳ ಕಾಂಡೋಮ್ ಪ್ಯಾಕೆಟ್ ಗಳನ್ನು ಹಂಚುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಡೋಮ್ ಪ್ರಚಾರ ಭಾರಿ ಸದ್ದು ಮಾಡುತ್ತಿದೆ. ಮನೆ ಮನೆಗೂ ಈ ಕಾಂಡೋಮ್ ಪ್ಯಾಕೆಟ್ ಗಳನ್ನು ಹಂಚಿ ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಈ ಸಂಬಂಧ ವಿಡಿಯೋಗಳು ವೈರಲ್ ಆಗುತ್ತಿವೆ. ಜೊತೆಗೆ ಅನೇಕರು ದೊಡ್ಡ ಮಟ್ಟದಲ್ಲೇ ಟ್ರೋಲ್ ಮಾಡುತ್ತಿದ್ದಾರೆ.

Most Popular

To Top